Advertisement

ವಿವಿಧ ಡಿಪೋಗಳ 8 ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆ 

12:54 PM Feb 06, 2022 | Team Udayavani |

ಗುಡಿಬಂಡೆ: ಕೊರೊನಾ ಕರಿನೆರಳಿನಲ್ಲಿ ಯಾವುದೇ ಆದಾಯದ ಮೂಲ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ತಾಲೂಕಿನ ಜನರಿಗೆ ಕೆಎಸ್‌ಆರ್‌ ಟಿಸಿ ಅಧಿಕಾರಿಗಳು ಯಾವುದೇ ಮೂನ್ಸೂಚನೆ ನೀಡದೆ, ಜಿಲ್ಲೆಯ ಎಲ್ಲಾ ಸಾರಿಗೆ ಡಿಪೋಗಳಿಂದ ಎಂಟು ಬಸ್‌ ನಿಲುಗಡೆ ಮಾಡಿರುವುದು ಈಗ ಸಾರ್ವಜನಿಕರಿಗೆ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ತಾಲೂಕಿನ ಜನತೆ ಕೃಷಿ ಹೊರತುಪಡಿಸಿ ಬೇರಾವುದೇ ಆದಾಯದ ಮೂಲ ಇಲ್ಲದೆ ಇರುವ ಸಮಯದಲ್ಲಿ ಕೊರೊನಾ ಆವಳಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನತೆಗೆ, ಅತಿವೃಷ್ಟಿಯಿಂದ ಬೆಳೆನಷ್ಟವಾಗಿ ಗಾಯದ ಮೇಲೆ ಬರೆ ಎಳೆದಂತಾಗಿ, ಕೇವಲ ಸರ್ಕಾರಿ ಸಾರಿಗೆಯನ್ನೇ ನಂಬಿಕೊಂಡಿದ್ದಪರಿಸ್ಥಿತಿಯಲ್ಲಿ ಏಕಾಏಕಿಯಾಗಿ ಚಿಕ್ಕಬಳ್ಳಾಪುರವಿಭಾಗ ವ್ಯಾಪ್ತಿಯಲ್ಲಿನ ಬಾಗೇಪಲ್ಲಿ, ಚಿಕ್ಕಬಳ್ಳಾಪುರ,ಗೌರಿಬಿದನೂರು ಬಸ್‌ ಡಿಪೋಗಳಿಂದ ಎಂಟು ಬಸ್‌ಗಳು ನಿಲ್ಲಿಸಿದ್ದಾರೆ. ಇದರಿಂದಾಗಿ ದಿನ ನಿತ್ಯಓಡಾಡುವ ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೆಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ.

ಬೇಜವಾಬ್ದಾರಿ ಹೇಳಿಕೆ: ಬಸ್‌ಗಳು ಏಕಾಏಕಿ ನಿಲ್ಲಿಸಿರುವುದನ್ನು ಸಾರ್ವಜನಿಕರು ಬಸ್‌ ಡಿಪೋವ್ಯವಸ್ಥಾಪಕರಿಗೆ ಪ್ರಶ್ನಿಸಿದರೆ ನಿಮ್ಮ ತಾಲೂಕಿಗೆಬರುವ ಬಸ್‌ಗಳೇ ಇನ್ನು ನಿಲ್ಲಿಸುವಂತೆ ಮೇಲಧಿಕಾರಿಗಳು ಹೇಳುತ್ತಿದ್ದಾರೆ ಎಂದು ಬೇಜಾವಾಬ್ದಾರಿಯ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಪ್ರಯಾಣಿಕರಿದ್ರೂ ಪ್ರಯೋಜನವಿಲ್ಲ: ಹಲವು ವರ್ಷಗಳಿಂದ ಗುಡಿಬಂಡೆ ತಾಲೂಕಿನಲ್ಲಿ ಸಾರಿಗೆಯನ್ನು ಸರಿಪಡಿಸುವಂತೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳನ್ನು ಮತ್ತು ಜಿಲ್ಲಾ ಮಟ್ಟದಅಧಿಕಾರಿಗಳಿಗೆ ಕೋರುತ್ತಾ ಬಂದರೂಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮವಹಿಸುತ್ತಿಲ್ಲ, ಜನ ಸಂಖ್ಯೆ ಹೆಚ್ಚುತ್ತಿದ್ದಂತೆ ಸಾರಿಗೆಯನ್ನು ಹೆಚ್ಚು ಮಾಡುವುದು ಬಿಟ್ಟು, ಹಾಲಿ ಇರುವ ಬಸ್‌ ಗಳನ್ನೇ ನಿಲ್ಲಿಸುತ್ತಿರುವುದು ದುರದೃಷ್ಟಕರ ಸಂಗತಿ.

ಕೊರೊನಾ ಹೆಸರಿನಲ್ಲಿ 8 ಬಸ್‌ ನಿಲುಗುಡೆ: ಚಿಕ್ಕಬಳ್ಳಾಪುರ ವಿಭಾಗೀಯ ಕಚೇರಿ ವ್ಯಾಪ್ತಿಯ ಬಾಗೇಪಲ್ಲಿ ಡಿಪೋ ವತಿಯಿಂದ ಮಾರ್ಗ ಸಂಖ್ಯೆ 34, 27, 51, 52, ಗೌರಿಬಿದನೂರು ಡಿಪೋದಿಂದ ಮಾರ್ಗ ಸಂಖ್ಯೆ 14, 12, 40, ಚಿಕ್ಕಬಳ್ಳಾಪುರ ಡಿಪೋದಿಂದ ಮಾರ್ಗ ಸಂಖ್ಯೆ 16 ಬಸ್‌ ಏಕಾಏಕಿ ಕೊರೊನಾ ಹೆಸರನ್ನು ಇಟ್ಟುಕೊಂಡು ಸಾರಿಗೆ ನಿಯಂತ್ರಣಾಧಿಕಾರಿಗಳು ಗುಡಿಬಂಡೆ ಮಾರ್ಗ ಕಿತ್ತು ಬೇರೆಡೆಗೆ ಹಾಕಿದ್ದಾರೆ.

Advertisement

ಖಾಸಗಿ ವಾಹನಗಳೇ ಗತಿ: ತಾಲೂಕಿನಲ್ಲಿ ಈಗ ಹಾಲಿ ಇರುವ ಸಾರಿಗೆ ಬಸ್‌ಗಳನ್ನು ಏಕಾಏಕಿನಿಲ್ಲಿಸುತ್ತಿರುವುದರಿಂದ ಖಾಸಗಿ ಮಿನಿ ಬಸ್‌ಗಳು, ಆಟೋಗಳೇ ಗತಿಯಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ಸಿಬ್ಬಂದಿಗಂತೂ ವಾರ್ಷಿಕ ಹಾಗೂ ಮಾಸಿಕ ಬಸ್‌ ಮಾಡಿಸಿದ್ದರೂ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ಕಾರಣ, ಖಾಸಗಿ ವಾಹನಗಳಲ್ಲಿ ದುಬಾರಿ ಶುಲ್ಕ ತೆತ್ತಿ ಸಂಚರಿಸಬೇಕಾಗಿದೆ.

ಫಾರಂ 4 ಕೊಟ್ಟರೆ ಬಸ್‌ ಕಳುಹಿಸುತ್ತೇವೆ:

ಬಾಗೇಪಲ್ಲಿ ಡಿಪೋ ವ್ಯವಸ್ಥಾಪಕರು ಹೇಳುವ ಪ್ರಕಾರ ವಿಭಾಗೀಯ ನಿಯಂತ್ರಣಾಧಿಕಾರಿಗಳು ನಮಗೆ ಫಾರಂ 4 ಕೊಟ್ಟರೆ ಮಾತ್ರ ನಾವು ಬಸ್‌ ಕಳುಹಿಸಲುಸಾಧ್ಯ. ಇಲ್ಲದೆ ಇದ್ದ ಪಕ್ಷದಲ್ಲಿ ನಾವು ಬಸ್‌ ಕಳುಹಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ.

ಗುಡಿಬಂಡೆ ಮಾರ್ಗದ ಯಾವುದೇ ಬಸ್‌ಗಳನ್ನು ನಾವು  ನಿಲ್ಲಿಸಿಲ್ಲ, ಎಲ್ಲಾ ಮಾರ್ಗಗಳಲ್ಲೂ ಬಸ್‌ ಗಳು ಸಂಚರಿಸುತ್ತಿವೆ. ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ

ಎನ್‌.ನವೀನ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next