Advertisement

ತ.ನಾಡು ಸಾರಿಗೆ ನಿಗಮದ ಕಟ್ಟಡ ಕುಸಿತ: 8 ಸಾವು

07:15 AM Oct 21, 2017 | Team Udayavani |

ಚೆನ್ನೈ: ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಪುರಾತನ ಕಟ್ಟಡವೊಂದು ಭಾಗಶಃ ಕುಸಿದ ಪರಿಣಾಮ ಸಾರಿಗೆ ನಿಗಮದ 8 ಮಂದಿ ಸಿಬ್ಬಂದಿ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ.

Advertisement

ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. 1952ರಲ್ಲಿ ನಿರ್ಮಿಸಿದ್ದ ಅಂದರೆ 65 ವರ್ಷಗಳಷ್ಟು ಹಳೆಯ ಈ ಕಟ್ಟಡ ಶುಕ್ರವಾರ ಬೆಳಗಿನ ಜಾವ 3.30ರ ಸುಮಾರಿಗೆ ಕುಸಿದು ಬಿದ್ದಿದೆ. ಕಟ್ಟಡದಲ್ಲಿ ಮಲಗಿದ್ದ ಎಂಟು ಮಂದಿ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಕರೈಕಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸಿಎಂ ಪಳನಿಸ್ವಾಮಿ ಅವರು, ಮೃತರ ಕುಟುಂಬಕ್ಕೆ ತಲಾ 7.5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜತೆಗೆ, ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನೂ ನೀಡಿದ್ದಾರೆ. ಗಂಭೀರ ಗಾಯಗೊಂಡವರಿಗೆ 1.5 ಲಕ್ಷ ರೂ., ಅಲ್ಪ ಪ್ರಮಾಣದ ಗಾಯಗಳಾದವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next