ಪ್ರಯತ್ನವಾಗಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ| ಟಿ.ಎನ್. ಪ್ರಕಾಶ ಕಮ್ಮರಡಿ ಹೇಳಿದರು.
Advertisement
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಳಂದ ತಾಲೂಕಿನ ತೆಲ್ಲೂರು ಗ್ರಾಮದ ರೈತರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದು ಪ್ರಧಾನಿ ನರೇಂದ್ರ ಮೋದಿ ಆಲೋಚನೆ. ಇದಕ್ಕಾಗಿ ಕರ್ನಾಟಕದ 8 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳಲ್ಲಿನ ರೈತರ ಈಗಿನ ಆರ್ಥಿಕ ಸ್ಥಿತಿ ಮತ್ತು ಸರ್ಕಾರಿ ಯೋಜನೆಗಳಿಂದ ಬದಲಾಗುವ ಆರ್ಥಿಕ ಪರಿಸ್ಥಿತಿ ಪರಾಮರ್ಶಿಸಲಾಗುವುದು. ಈ ಪ್ರಾಯೋಗಿಕ ಯೋಜನೆಯನ್ನಾಧರಿಸಿ 2018ನೇ ಸಾಲಿನ ಬಜೆಟ್ ಪೂರ್ವದಲ್ಲಿಯೇ ಆಯೋಗವು ಸರ್ಕಾರಕ್ಕೆ ಸಂಪೂರ್ಣ ನೀಲನಕ್ಷೆ ಸಲ್ಲಿಸಲಿದೆ ಎಂದರು.
ಗ್ರಾಮದ ರೈತರಲ್ಲಿ ಆರ್ಥಿಕ ಮಟ್ಟ ಹೆಚ್ಚಳವಾಗುವ ಆತ್ಮವಿಶ್ವಾಸ ಬರುವಂತೆ ಆಗಬೇಕು. ಈ ನಿಟ್ಟಿನಲ್ಲಿ ರೈತರ ಸರ್ವತೋಮುಖ ಅಭಿವೃದ್ಧಿಯ ಮಹತ್ವದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ರೈತರ ಆದಾಯ ಹಾಗೂ ಅಭಿವೃದ್ಧಿಗಾಗಿ ಅಧಿಕಾರಿಗಳು
ಹೆಚ್ಚು ಶ್ರಮಿಸಬೇಕು. ಇದಕ್ಕಾಗಿ ವಿವಿಧ ಇಲಾಖೆಗಳ ಸಂಯೋಜನೆ ಅತೀ ಮುಖ್ಯ ಎಂದು ಹೇಳಿದರು. ಜಂಟಿ ನಿರ್ದೇಶಕರಿಂದ ಮೇಲ್ವಿಚಾರಣೆ: ತೆಲ್ಲೂರು ಗ್ರಾಮದಲ್ಲಿ ಒಟ್ಟು 112 ಕುಟುಂಬಗಳಿವೆ. ಎಲ್ಲ ಕುಟುಂಬಗಳ ಹೊಲದ ಮಣ್ಣಿನ ಮತ್ತು ರೈತರ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ಚೀಟಿ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಅನುಷ್ಠಾನಗೊಳ್ಳಲಿದೆ. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಅನುಷ್ಠಾನಾ ಧಿಕಾರಿಯಾಗಿದ್ದು, ಜಂಟಿ
ಕೃಷಿ ನಿರ್ದೇಶಕರು ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುವರು ಎಂದರು.
Related Articles
ಅ ಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೂಡಲೇ ತೆಲ್ಲೂರು ಗ್ರಾಮಕ್ಕೆ ಭೇಟಿ ನೀಡಿ ತಮ್ಮ ತಮ್ಮ ಇಲಾಖಗಳಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ರೈತರಿಗೆ ವಿವರಿಸಬೇಕು. ಇದಲ್ಲದೆ ಒಂದು ತಾಂತ್ರಿಕ
ಕಾರ್ಯಾಗಾರವನ್ನು ಆಯೋಜಿಸಬೇಕು. ನಂತರ ಇಲಾಖೆಗಳು ಅನುಷ್ಠಾನಗೊಳಿಸಲಿರುವ ವಿವಿಧ ಯೋಜನೆಗಳ ವಿಸ್ತೃತ ಸರ್ವೇ ಸಿದ್ಧಪಡಿಸಬೇಕೆಂದು ಸೂಚಿಸಿದರು.
Advertisement
ವಿಶೇಷ ಸಾಲದ ಅಭಿಯಾನ: ಕೃಷಿ ಮಾರುಕಟ್ಟೆ ಇಲಾಖೆಯಿಂದ ತೊಗರಿ ಅಡಮಾನ ಸಾಲದ ವಿಶೇಷ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡು ರೈತರಿಗೆ ಸೂಕ್ತ ತಿಳಿವಳಿಕೆ ನೀಡಬೇಕು. ತೆಲ್ಲೂರು ಗ್ರಾಮದಲ್ಲಿ ರೈತರ ಕೃಷಿ ಉತ್ಪನ್ನಗಳ ದಾಸ್ತಾನು ಮಾಡಲು ಅನುವಾಗುವಂತೆ 100 ಮೆ.ಟನ್ ಸಾಮರ್ಥ್ಯದ ಉಗ್ರಾಣ ನಿರ್ಮಾಣ ಮಾಡಬೇಕು. ಎಲ್ಲ ರೈತರ ಹೊಲಗಳಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿ ಮೀನುಗಾರಿಕೆ ಇಲಾಖೆಯಿಂದ ರೈತರಿಗೆ ಮೀನು ಸಾಕಾಣಿಕೆ ಮಾಡುವಂತೆ ಕ್ರಮ ಜರುಗಿಸಬೇಕು. ಗ್ರಾಮವು ಋಣಮುಕ್ತ ಗ್ರಾಮವಾಗಬೇಕು. ಈ ನಿಟ್ಟಿನಲ್ಲಿ ತೆಲ್ಲೂರು ಗ್ರಾಮದ ಸಾಲ ಯೋಜನೆ ರೂಪಿಸಬೇಕಲ್ಲದೆ ನಬಾರ್ಡ್‌ನಿಂದ
ರೈತರ ಕ್ಲಬ್ ಪ್ರಾರಂಭಿಸಬೇಕು. ಈ ಗ್ರಾಮದ ರೈತರ ಆದಾಯ ಹೆಚ್ಚಳಕ್ಕೆ ಅನುವಾಗುವ ಎಲ್ಲ ಪೂರಕ ಸೌಲಭ್ಯಗಳನ್ನು ಕಲ್ಪಿಸಲು ಎಲ್ಲ ಇಲಾಖೆಗಳು ಹೆಚ್ಚು ಶ್ರಮಿಸಬೇಕು ಎಂದು ಸೂಚಿಸಿದರು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಅರಣ್ಯ, ಹೈನುಗಾರಿಕೆ, ಕೋಳಿ ಮತ್ತು ಕುರಿ ಸಾಕಣೆ, ಮೀನುಗಾರಿಕೆ, ನೀರಾವರಿ, ಕೃಷಿ ಮಾರುಕಟ್ಟೆ, ಅರಣ್ಯ, ಮುಂತಾದ ಇಲಾಖೆಗಳ ಎಲ್ಲ ಅಧಿ ಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಲಾಖೆಯ ಯೋಜನೆಗಳ ಬಗ್ಗೆ ವಿವರಿಸಿದರು. ವಂಚನೆ-ಕ್ರಮಕ್ಕೆ ಆದೇಶ: ತೊಗರಿ ಖರೀದಿ ಹಣ ಪಾವತಿಯಾಗದಿರುವ ಬಗ್ಗೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯಲ್ಲಿ ರೈತರಿಗೆ ವಂಚನೆ ಮಾಡುತ್ತಿರುವ ಬಗ್ಗೆ ರೈತರು ಅಧ್ಯಕ್ಷರ ಗಮನಕ್ಕೆ ತಂದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕೆಂದು ಆದೇಶಿಸಿದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ| ಡಿ.ಎಂ. ಮಣ್ಣೂರ, ಕೃಷಿ ವಿಜ್ಞಾನ
ಕೇಂದ್ರದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ| ರಾಜು ತೆಗ್ಗೆಳ್ಳಿ, ಡಾ| ವಿ.ರಾಮಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ ಪಾಲ್ಗೊಂಡಿದ್ದರು. ಭರವಸೆ ಮೂಡಿಸಿ
ಪ್ರತಿ ರೈತರ ಡಾಟಾಬೇಸ್ ಕಡತ ತಯಾರಿಸಿ ರೈತರ ಆದಾಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆಯಾ ರೈತರಿಗೆ ಅಗತ್ಯವಾಗಿ ಬೇಕಾಗುವ ವಿವಿಧ ಸೌಲಭ್ಯಗಳ ಸಮಗ್ರ ನೀಲನಕ್ಷೆ ತಯಾರಿಸಲಾಗುವುದು. ಇದಕ್ಕಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ಪ್ರತಿ ತಿಂಗಳು ಕಾರ್ಯಕ್ರಮದ ಪರಾಮರ್ಶೆ ನಡೆಸಬೇಕು. ಇದಲ್ಲದೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ತಿಂಗಳ ಮೊದಲನೇ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ರೈತರಿಗೆ ತಲುಪಿಸಬೇಕು. ಇದನ್ನು ಎಲ್ಲ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ
ಮತ್ತು ದೊಡ್ಡ ಸವಾಲಾಗಿ ಸ್ವೀಕರಿಸಿ ಆರ್ಥಿಕ ಮಟ್ಟ ಸುಧಾರಣೆಯ ಭರವಸೆಯನ್ನು ರೈತರಲ್ಲಿ ಮೂಡಿಸಬೇಕು.