Advertisement

4 ತಿಂಗಳಲ್ಲಿ 79 ಲಕ್ಷ ಮಕ್ಕಳು ಬಾಲ ಆಧಾರ್‌ಗೆ ನೋಂದಣಿ

07:59 PM Aug 16, 2022 | Team Udayavani |

ನವದೆಹಲಿ: ದೇಶದಲ್ಲಿ ಬಾಲಾ ಆಧಾರ್‌ ಉಪಕ್ರಮದಡಿಯಲ್ಲಿ ಏಪ್ರಿಲ್‌ನಿಂದ ಜುಲೈ ತಿಂಗಳ ಅವಧಿಯಲ್ಲಿ ಐದು ವರ್ಷದೊಳಗಿನ ಒಟ್ಟು 79 ಲಕ್ಷ ಮಕ್ಕಳ ನೋಂದಣಿಯಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ಕೊಟ್ಟಿದೆ.

Advertisement

ಅಧಿಕೃತ ಆಧಾರ್‌ ಕಾರ್ಡ್‌ಗೆ ನೋಂದಣಿ ಮಾಡುವುದಕ್ಕೂ ಮೊದಲು ಐದು ವರ್ಷದೊಳಗಿನ ಮಕ್ಕಳನ್ನು ಬಾಲ ಆಧಾರ್‌ಗೆ ನೋಂದಣಿ ಮಾಡಲಾಗುತ್ತದೆ. ಏಪ್ರಿಲ್‌ನೊಳಗೆ ದೇಶದಲ್ಲಿ ಒಟ್ಟು 2.64 ಕೋಟಿ ಮಕ್ಕಳ ಬಾಲ ಆಧಾರ್‌ ನೋಂದಣಿಯಾಗಿತ್ತು. ಜುಲೈ ಅಂತ್ಯಕ್ಕೆ ಆ ಸಂಖ್ಯೆ 3.43 ಕೋಟಿಗೆ ಏರಿದೆ. ಹಿಮಾಚಲ ಪ್ರದೇಶ, ಹರ್ಯಾಣ, ಮಿಜೋರಾಂ, ದೆಹಲಿ, ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಶೇ.70 ಮಕ್ಕಳ ನೋಂದಣಿ ಪ್ರಕ್ರಿಯೆ ಮುಗಿದಿದೆ ಎಂದು ಸಚಿವಾಲಯ ತಿಳಿಸಿದೆ.

ಆಧಾರ್‌ನಂತೆಯೇ ಇರುವ ಬಾಲ ಆಧಾರ್‌ ಕಾರ್ಡ್‌ ನೀಲಿ ಬಣ್ಣದಲ್ಲಿರುತ್ತದೆ. ಬೆರಳಚ್ಚು ಪಡೆಯದೆ ಕೇವಲ ಮುಖಚರ್ಯೆಯ ದಾಖಲೆಯನ್ನು ಇದಕ್ಕೆ ಪಡೆಯಲಾಗುತ್ತದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಇದು ಅನುಕೂಲಕರ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next