Advertisement

780 ಬೇನಾಮಿ ಆಸ್ತಿ ಅನಾಥ

07:13 AM Jun 04, 2018 | |

ಹೊಸದಿಲ್ಲಿ: ಬೇನಾಮಿ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನನ್ನು ಬಿಗಿಗೊಳಿಸಿದ ನಂತರದಲ್ಲಿ ಮುಟ್ಟುಗೋಲು ಹಾಕಿಕೊಂಡ ಸ್ವತ್ತುಗಳು ಈಗ ಅಂತಿಮ ತೀರ್ಮಾನಕ್ಕೆ ಕಾದು ಕುಳಿತಿವೆ. ಕಳೆದ ಒಂದೂವರೆ ವರ್ಷದಿಂದಲೂ ಈ ಸ್ವತ್ತುಗಳು ಪ್ರಕರಣ ಅಂತಿಮಗೊಂಡು ಸರಕಾರದ ಸಂಪೂರ್ಣ ವಶಕ್ಕೆ ಲಭ್ಯವಾಗದೇ ಅತಂತ್ರ ಸ್ಥಿತಿಯಲ್ಲಿವೆ.

Advertisement

2016ರಲ್ಲಿ ಬೇನಾಮಿ ಸ್ವತ್ತು ವಹಿವಾಟು ಕಾಯ್ದೆಯನ್ನು ಕೇಂದ್ರ ಸರಕಾರ ಬದಲಾವಣೆ ಮಾಡಿದ್ದು, ಇದರ 7ನೇ ಕಲಂ ಪ್ರಕಾರ ಬೇನಾಮಿ ಆಸ್ತಿ ಹೊಂದಿದವರಿಗೆ ಏಳು ವರ್ಷಗಳವರೆಗೆ ಜೈಲು ಹಾಗೂ ಸ್ವತ್ತಿನ ಮಾರುಕಟ್ಟೆ ಮೌಲ್ಯದ ಶೇ. 25ರಷ್ಟು ದಂಡ ವಿಧಿ ಸಲಾಗುತ್ತದೆ. ಆದರೆ ಇದನ್ನು ನಿರ್ಧ ರಿಸಲು 3 ಸದಸ್ಯರ ಸ್ವತಂತ್ರ ನಿರ್ಧಾರಣ ಪ್ರಾಧಿಕಾರವನ್ನು ರಚಿಸಬೇಕಿದೆ. ಕಾನೂನು ಜಾರಿಗೊಂಡರೂ ಈ ಪ್ರಾಧಿಕಾರ ಇನ್ನೂ ರಚನೆಯಾಗಿಲ್ಲ. ತಾತ್ಕಾಲಿಕವಾಗಿ ಹಣಕಾಸು ದುರುಪಯೋಗ ಕಾಯ್ದೆ ತಡೆಯ ಅಡಿಯಲ್ಲಿನ ನಿರ್ಧಾರಣ ಪ್ರಾಧಿಕಾರಕ್ಕೆ ಈ ಕೆಲಸವನ್ನು ವಹಿಸ ಲಾಗಿದೆ. ಆದರೆ ಈ ಪ್ರಾಧಿಕಾರದಲ್ಲಿ ಈಗಾಗಲೇ ಸಿಬಂದಿ ಕೊರತೆಯಿದ್ದು, ಈ ಸಂಖ್ಯೆಯ ಪ್ರಕರಣಗಳನ್ನು ನಿರ್ವಹಿಸಲು ಸಿಬಂದಿಯೇ ಇಲ್ಲ. ಇದರ ಮುಖ್ಯಸ್ಥರು ಎಪ್ರಿಲ್‌ 1ರಿಂದ ನಿವೃತ್ತರಾಗಿದ್ದರೆ, ಹಂಗಾಮಿಯಾಗಿ ನೇಮಕವಾದವರೂ ಕೆಲವು ದಿನಗಳ ಹಿಂದೆ ನಿವೃತ್ತರಾಗಿದ್ದಾರೆ. ಕನಿಷ್ಠ 10 ಸಿಬಂದಿ ಯನ್ನು ತುರ್ತಾಗಿ ನೇಮಿಸಿ ಎಂದು ಇಲಾಖೆಗಳಿಗೆ ಪ್ರಾಧಿ ಕಾರವು ವಿನಂತಿ ಮಾಡಿದ್ದರೂ, ಫ‌ಲ ನೀಡಿಲ್ಲ.

ಒಂದು ವರ್ಷದೊಳಗೆ ಪ್ರಕರಣಗಳನ್ನು ಅಂತಿಮಗೊಳಿಸದಿದ್ದರೆ ಕೇಸ್‌ ಖುಲಾಸೆಯಾಗುತ್ತದೆ. ಈವರೆಗೆ 860 ಬೇನಾಮಿ ಸ್ವತ್ತುಗಳನ್ನು ಆದಾಯ ತೆರಿಗೆ ಇಲಾಖೆ ಸೇರಿದಂತೆ ಇತರ ಹಣ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಂಡಿವೆ. ಆದರೆ ಈ ಪೈಕಿ ಕೇವಲ 80 ಪ್ರಕರಣಗಳನ್ನು ಅಂತಿಮಗೊಳಿಸಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಉಳಿದ 780 ಪ್ರಕರಣಗಳು ಇನ್ನೂ ಅಂತಿಮವಾಗದೇ ಬಾಕಿ ಇವೆ.

ಹೀಗಾಗಿ ಇನ್ನು ಬೇನಾಮಿ ಸ್ವತ್ತು ಮುಟ್ಟುಗೋಲು ಪ್ರಕರಣಗಳನ್ನು ಸಿಬಂದಿ ಇಲ್ಲದೇ ನಿರ್ವಹಿಸಲು ಸಾಧ್ಯವಾಗ ದ್ದರಿಂದ, ಪ್ರಕರಣಗಳನ್ನು ಕಳುಹಿಸದಂತೆ ನಿರ್ಧಾರಣ ಪ್ರಾಧಿಕಾರವು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದೆ.

ವರ್ಷದೊಳಗೆ ಪ್ರಕರಣ ಇತ್ಯರ್ಥ ವಾಗದಿದ್ದರೆ ಕೇಸ್‌ ಖುಲಾಸೆ
860ರ ಪೈಕಿ ಇತ್ಯರ್ಥಗೊಂಡಿದ್ದು 80 ಪ್ರಕರಣ ಮಾತ್ರ

Advertisement
Advertisement

Udayavani is now on Telegram. Click here to join our channel and stay updated with the latest news.

Next