Advertisement

ಪರಭಾಷೆಯಲ್ಲೂ ಚಾರ್ಲಿ ಹವಾ: ವಿಭಿನ್ನ ಕಥಾಹಂದರದ ಚಿತ್ರದತ್ತ ನೋಟ…

03:56 PM May 30, 2022 | Team Udayavani |

ರಕ್ಷಿತ್‌ ಶೆಟ್ಟಿ ನಟನೆಯ “777 ಚಾರ್ಲಿ’ ಸಿನಿಮಾ ಜೂ.10ರಂದು ಬಿಡುಗಡೆಯಾಗುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಇದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Advertisement

ಪ್ರತಿ ಭಾಷೆಯಲ್ಲೂ ಅಲ್ಲಿನ ದೊಡ್ಡ ದೊಡ್ಡ ಸಂಸ್ಥೆಗಳು ಈ ಸಿನಿಮಾದ ಬಿಡುಗಡೆಗೆ ಮುಂದೆ ಬಂದಿವೆ. ಅದರಂತೆ ಚಿತ್ರತಂಡ ಈಗ ಪ್ರಮೋಶನ್‌ನಲ್ಲಿ ಓಡಾಡಿಕೊಂಡಿದೆ. ಎಲ್ಲಾ ಭಾಷೆಗಳಿಂದಲೂ “777 ಚಾರ್ಲಿ’ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ತೆಲುಗು ಅವತರಣಿಯಕೆ ಪ್ರಮೋಶನ್‌ಗೆ ಚಿತ್ರತಂಡ ಹೈದರಾಬಾದ್‌ಗೆ ತೆರಳಿದ್ದು, ಅಲ್ಲೂ ಚಿತ್ರತಂಡಕ್ಕೆ ಅಭೂತ ಪೂರ್ವ ಸ್ವಾಗತ ದೊರಕಿದೆ. ಅಲ್ಲಿನ ಮಂದಿ ಕೂಡಾ “777 ಚಾರ್ಲಿ’ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ.

ನಟ ರಕ್ಷಿತ್‌ ಶೆಟ್ಟಿ ಕೂಡಾ “ಚಾರ್ಲಿ’ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ರಕ್ಷಿತ್‌, ಇದೊಂದು ಕಂಪ್ಲೀಟ್‌ ಎಮೋಶನ್ಸ್‌ ಇಟ್ಟುಕೊಂಡು ಮಾಡಿದಂಥ ಸಿನಿಮಾ. ಅದರ ಅನುಭವಗಳು ನನಗೆ ಮಾತ್ರ ಗೊತ್ತು. ಆದರೆ ಅದನ್ನು ವಿವರಿಸಲಾಗದು. “777 ಚಾರ್ಲಿ’ ಸಿನಿಮಾದಿಂದ ಏನು ಕಲಿತೆ ಅಂತ ಕೇಳಿದ್ರೆ, ವಿವರಣೆ ಕೊಡೋಕಾಗಲ್ಲ. ಆ ತರಹದ ಅನುಭವವದು. ಇಡೀ ಸಿನಿಮಾ ನನಗೆ ಮಾತ್ರವಲ್ಲ ನಮ್ಮ ಇಡೀ ತಂಡಕ್ಕೆ ಒಂದು ಎಮೋಶನಲ್‌ ಜರ್ನಿ ಎಂದಷ್ಟೇ ಹೇಳಬಹುದು. ಸಿನಿಮಾದ ಸಬ್ಜೆಕ್ಟ್‌ ನನಗೆ ಅಷ್ಟರ ಮಟ್ಟಿಗೆ ಹತ್ತಿರವಾಗಿದ್ದರಿಂದ, ಇಷ್ಟು ವರ್ಷ ಸಮಯ ತೆಗೆದುಕೊಂಡು ಈ ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು’ ಎನ್ನುವುದು ರಕ್ಷಿತ್‌ ಮಾತು. ನಿರ್ದೇಶಕ ಕಿರಣ್‌ ರಾಜ್‌ ಹೇಳುವಂತೆ, “ಇದೊಂದು ಸಂಪೂರ್ಣ ಭಾವನಾತ್ಮಕ ಕಥಾಹಂದರದ ಸಿನಿಮಾ. ಹಾಗಾಗಿ ಯಾವುದೇ ಭಾಷೆಯ ಹಂಗಿಲ್ಲದೆ ಎಲ್ಲ ಪ್ರೇಕ್ಷಕರಿಗೂ ಸಿನಿಮಾ ಕನೆಕ್ಟ್ ಆಗುತ್ತದೆ. ಎಲ್ಲರ ಮನಮುಟ್ಟುವಂಥ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆ ಇದೆ’ ಎಂಬುದು ಕಿರಣ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next