ಹೈದರಾಬಾದ್: ನಗರದಲ್ಲಿ ಬೆಚ್ಚಿ ಬೀಳಿಸುವ ಹೇಯ ಘಟನೆಯೊಂದರಲ್ಲಿ 76 ವರ್ಷದ ವೃದ್ಧನೊಬ್ಬ 13 ರ ಹರೆಯದ ಬಾಲಕಿಗೆ ಚಾಕಲೇಟ್,ತಿಂಡಿಯ ಆಸೆ ತೋರಿಸಿ ನಿರಂತರವಾಗಿ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ್ದಾರೆ.
ಆರೋಪಿಯಾಗಿರುವ ಹಬೀಬ್ ನಗರದ ಅಘಾಪುರದ ಅಬ್ದುಲ್ ವಹಾಬ್ ಎಂಬ ವೃದ್ಧನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಾಮುಕ 2017 ರ ಜೂನ್ ತಿಂಗಳಿನಿಂದ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ತಿಳಿದು ಬಂದಿದೆ.
ಬಾಲಕಿಯ ದೇಹದಲ್ಲಿನ ಬದಲಾವಣೆ ಮತ್ತು ಹೊಟ್ಟೆ ನೋವಿನ ಕುರಿತಾಗಿ ವೈದ್ಯರ ಬಳಿ ಪರೀಕ್ಷಿಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು ಪೋಷಕರು ಕಂಗಾಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
Related Articles
ಮಾಧ್ಯಮದಲ್ಲಿ ವರದಿಯಾದಂತೆ ಬಾಲಕಿ ಇದೀಗ 7 ತಿಂಗಳ ಗರ್ಭಿಣಿ. ಹಬೀಬ್‌ನಗರ ಠಾಣೆಯ ಪೊಲೀಸರು ಸೆಕ್ಷನ್ 376 ಮತ್ತು ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಹೈದರಾಬಾದ್‌ನ ಕುಶಾಯಿಗುಡದಲ್ಲಿ 7 ಮಂದಿ ದಲಿತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ 85 ರ ವೃದ್ಧನನ್ನು ಪೊಲೀಸರು ಬಂಧಿಸಿದ್ದರು.