ತುಮಕೂರು: ಜಗತ್ತಿನಾದ್ಯಂತ ಬೆಳೆಯುತ್ತಿರುವ ಅಸಮಾನತೆ, ಶೋಷಣೆ, ಬಡತನ, ಫ್ಯಾಸಿಸಂ, ಯುದ್ಧಗಳಿಂದಾಗಿ ಸಮಾಜದಲ್ಲಿ ತೀವ್ರತರ ಅಸಮಾನತೆ ಹೆಚ್ಚುತ್ತಿದ್ದು ಇದಕ್ಕೆ ಪ್ರತಿಯಾಗಿ ಸಾಮಾಜಿಕ ನ್ಯಾಯಕ್ಕಾಗಿ ದುಡಿಯುವವರು, ಜನರು ಐಕ್ಯತೆಯಿಂದ ಚಳವಳಿಯಲ್ಲಿ ಮುಂದೆ ಸಾಗಬೇಕಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದರು.
ಡಬ್ಲ್ಯೂಎಫ್ಟಿಯುನ 75ನೇ ವರ್ಷಾಚರಣೆ ಭಾಗವಾಗಿ ಶನಿವಾರ ನಗರದ ಕೈಗಾರಿಕಾ ಪ್ರದೇಶಗಳಲ್ಲಿ ಆಯೋಜಿಸಿದ್ದ ಕಾರ್ಮಿಕರ ಪ್ರದರ್ಶನಗಳನ್ನು ಉದ್ದೇಶಿಸಿ ಮಾತನಾಡಿದರು. ಸಾಮ್ರಾಜ್ಯಶಾಹಿ ಶಕ್ತಿಗಳು ಇಂದು ತಾವು ಹರಿಯಬಿಟ್ಟಿರುವ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಪಡೆಯುವ ಮೂಲಕ ಎಲ್ಲವೂ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಪ್ರಯತ್ನದ ಬಗ್ಗೆ ಎಚ್ಚರಿಕೆಯಿಂದ ಇದ್ದು ಹೋರಾಟಕ್ಕೆ ಮುಂದಾಗಬೇಕು ಎಂದರು.
ಶೋಷಣೆ:ತುಮಕೂರು ನಗರದ ಸತ್ಯಮಂಗಲ ಕೈಗಾರಿಕಾ ಪ್ರದೇಶದ ಜೇಮ್ ಪ್ರಾಪರ್ಟಿ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಫಿಟ್‌ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಕಾರ್ಮಿಕರ ಸಂಘದ ಸುಜಿತ್ ನಾಯಕ್ ಮಾತನಾಡಿ, ಕೋವಿಡ್ ನೆಪದಲ್ಲಿ ಬಂಡವಾಳಗಾರರು ಕಾರ್ಮಿಕರ ಶೋಷಣೆಯಲ್ಲಿ ತೊಡಗಿದ್ದಾರೆಂದರು. ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಕರನ್ ಲಿಬರರ್ಸ್ ಕಾರ್ಖಾನೆ ಮುಂಭಾಗದಲ್ಲಿ ನಡೆದ ಪ್ರದರ್ಶನದಲ್ಲಿ ಮಾತನಾಡಿದ ಸಿಐಟಿಯು ತಾಲೂಕು ಕಾರ್ಯದರ್ಶಿ ರಂಗಧಾಮಯ್ಯ, ಕೇಂದ್ರ ಸರ್ಕಾರ ತರಾತುರಿಯಲ್ಲಿ ರೈತ-ಕಾರ್ಮಿಕ ವಿರೋಧಿ ಶಾಸನಗಳನ್ನು ಜಾರಿಗೆ ತರುತ್ತಿರುವುದು ಕಾರ್ಪೊàರೆಟ್ ಹಿತವಲ್ಲವೇ ಎಂದು ಪ್ರಶ್ನಿಸಿದರು.
ಎಂಎಚ್‌ಐಎನ್ ಕಾರ್ಖಾನೆ ಮುಂಭಾಗ ನಡೆದ ಪ್ರದರ್ಶನವನ್ನು ಉದ್ದೇಶಿಸಿ ಸಿಐಟಿಯು ಮುಖಂಡ ರಘುನಾಥ ಮಾತನಾಡಿದರು. ವಸಂತನರಸಾಪುರ ಕೈಗಾರಿಕಾ ಪ್ರದೇಶದ ಟಿಮೆಕ್ ಇಂಡಿಯಾ ಪ್ರವೇಟ್‌ಲಿಮಿಟೆಡ್ ಕಾರ್ಮಿಕರ ಸಂಘದ ವತಿಯಿಂದ ನಡೆದ ಪ್ರದರ್ಶನದಲ್ಲಿ ಸಂಘದ ಅಧ್ಯಕ್ಷ ದೀಪಕ್ ಜೆ., ಪ್ರಧಾನ ಕಾರ್ಯದರ್ಶಿ ದೀಪಕ್ ಪೂಜಾರಿ, ಬಿ.ಎಸ್. ಕಾಂತರಾಜು ಮಾತನಾಡಿದರು.
ಡಬ್ಲ್ಯೂಎಫ್ಟಿಯು 75ನೇ ವರ್ಷಾಚರಣೆ ಭಾಗವಾಗಿ ಜಿಲ್ಲೆಯ ಕುಣಿಗಲ್ ಕುದುರೆ ಫಾರಂ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ಏರ್ಪಡಿಸಲಾಗಿತ್ತು. ಸಿಐಟಿಯು ತಾಲೂಕು ಕಾರ್ಯದರ್ಶಿ ಅಬ್ದುಲ್ ಮುನಾಫ್,ಅಮೃತೂರುಸ್ಕೀಂನೌಕರರಾದಅಂಗನವಾಡಿ, ಆಶಾ ಬಿಸಿಯೂಟ ನೌಕರರು ಪ್ರದರ್ಶನ ಏರ್ಪಡಿಸಿದ್ದರು. ಭಾರತದಲ್ಲಿ ಸ್ಕೀಂಗಳಲ್ಲಿ ದುಡಿಯುತ್ತಿರುವ ಲಕ್ಷಗಟ್ಟಲೆಜನರಿಗೆ ಗೌರವ, ಘನತೆಯಿಂದ ಬದುಕು ನಡೆಸಲುಕನಿಷ್ಠ ಕೂಲಿ ಹಾಗೂ ಕಾರ್ಮಿಕ ಕಾನೂನು ಜಾರಿ ಮಾಡುವಂತೆ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಹೇಳಿದರು.