- 1971ರಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಯುದ್ಧ – ಭಾರತಕ್ಕೆ ದೊಡ್ಡ ಗೆಲುವು – ಬಾಂಗ್ಲಾದೇಶ ವಿಮೋಚನೆ.
- ಗರೀಬಿ ಹಠಾವೋ ಘೋಷಣೆ, ಕೃಷಿಗೆ ಒತ್ತು ನೀಡುವ ಸಲುವಾಗಿ ಹಸುರು ಕ್ರಾಂತಿ ಯೋಜನೆ ಘೋಷಣೆ.
- 1974ರಲ್ಲಿ ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ.
- 1975ರಲ್ಲಿ ಭಾರತದ 22ನೇ ರಾಜ್ಯವಾಗಿ ಸಿಕ್ಕಿಂ ಭಾರತಕ್ಕೆ ಸೇರ್ಪಡೆ.
- 1975ರಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿಕೆ – ಜನರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಸರಕಾರವನ್ನು ವಿರೋಧಿಸಿದವರು ಜೈಲು ಪಾಲು.
- ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ. ಬಳಿಕ ತುರ್ತು ಪರಿಸ್ಥಿತಿ ವಾಪಸ್.
- 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭಾರೀ ಸೋಲು. ಮೊರಾರ್ಜಿ ದೇಸಾಯಿ ಅವರು ಮೊದಲ ಕಾಂಗ್ರೆಸೇತರ ಪ್ರಧಾನಿಯಾಗಿ ಆಯ್ಕೆ. ಶಾ ಸಮಿತಿ ವರದಿ ಆಧಾರದ ಮೇಲೆ ಇಂದಿರಾ ಗಾಂಧಿ ಮತ್ತು ಪುತ್ರ ಸಂಜಯ್ ಗಾಂಧಿ ಬಂಧನ.
- ಮೊರಾರ್ಜಿ ದೇಸಾಯಿ ಸರಕಾರ ಪತನ. ಚರಣ್ ಸಿಂಗ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ.
Advertisement