Advertisement

75 ವರ್ಷದ ಅಜ್ಜಿ ಗ್ರಾಪಂ ಅಧ್ಯಕ್ಷೆ

02:49 PM Feb 17, 2021 | Team Udayavani |

ಭಾರತೀನಗರ: ಕೊಕ್ಕರೆ ಬೆಳ್ಳೂರು ಗ್ರಾಪಂ ಅಧ್ಯಕ್ಷರಾಗಿ ‌ 75 ವರ್ಷದ ಅಜ್ಜಿಯೊಬ್ಬರು ಆಯ್ಕೆಯಾಗಿದ್ದಾರೆ.

Advertisement

ಕೊಕ್ಕರೆ ಬೆಳ್ಳೂರು ಗ್ರಾಪಂ ಅಧ್ಯಕ್ಷರಾಗಿ ಭೀಮನ ಕೆರೆ ಗ್ರಾಮದ 75 ವರ್ಷದ ಅಜ್ಜಿ ಜಯ ಲಕ್ಷ್ಮಮ್ಮ ಆಯ್ಕೆಯಾಗಿರುವುದು

ಯುವಕರಿಗೆ ಅಚ್ಚರಿ ಮೂಡಿದೆ. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ 7 ಮೊಮ್ಮಕ್ಕಳಿರುವ ಜಯಲಕ್ಷ್ಮಮ್ಮ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ, 3 ಮತಗಳ ಅಂತರದಲ್ಲಿ ಜಯಗಳಿಸಿದ್ದರು. ಗ್ರಾಪಂ ಅಧ್ಯಕ್ಷರ ಸ್ಥಾನ ಪ.ಜಾ ಮಹಿಳೆಗೆ ಮೀಸಲಾಗಿದ್ದರಿಂದ ಜಯಲಕ್ಷ್ಮಮ್ಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. 16 ಸದಸ್ಯರನ್ನು ಹೊಂದಿರುವ ಗ್ರಾಪಂಗೆ ಕಾಂಗ್ರೆಸ್‌ -ಬಿಜೆಪಿ ಬೆಂಬಲಿತರ 11 ಸದಸ್ಯರ ಬಲದೊಂದಿಗೆ ಜಯ ಲಕ್ಷ್ಮಮ್ಮ ಆಯ್ಕೆಗೊಂಡಿದ್ದಾರೆ.

ಜನರ ಬೆಂಬಲ, ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿದ್ದೇನೆ. ಯಾವುದೇ ಕೆಲಸಕ್ಕೆ ವಯಸ್ಸು ಮುಖ್ಯವಲ್ಲ, ಉತ್ಸಾಹ, ಚೈತನ್ಯ ಮುಖ್ಯ, ಜನರ ಸೇವೆಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜಯಲಕ್ಷ್ಮಮ್ಮ, ಅಧ್ಯಕ್ಷರು, ಕೊಕ್ಕರೆ ಬೆಳ್ಳೂರು ಗ್ರಾಪಂ

ಮಕ್ಕಳು ಶ್ರದ್ಧೆಯಿಂದ ವ್ಯಾಸಂಗ ಮಾಡಿ  :

Advertisement

ಕೆ.ಆರ್‌.ಪೇಟೆ: ಹೆಣ್ಣು ಮಕ್ಕಳು ಜೀವನದಲ್ಲಿ ಸವಾಲು, ಸಮಸ್ಯೆ ಎದುರಿಸಿ ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು ಎಂದು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವ್ಯವಸ್ಥಾಪಕ ಬಿ.ಎ.ಮಂಜು ನಾಥ್‌ ತಿಳಿಸಿದರು.

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾರ್ಯಕ್ರಮದಲ್ಲಿ ಮಾತನಾಡಿ, ಪದವಿ ಶಿಕ್ಷಣವು ವಿದ್ಯಾರ್ಥಿಗಳ ಸಾಧನೆ ಹಾಗೂ ಉಜ್ವಲ ಭವಿಷ್ಯಕ್ಕೆ ಬುನಾದಿ. ಇದರಿಂದ ಪುಸ್ತಕ, ಪತ್ರಿಕೆ ಗಳನ್ನು ಚೆನ್ನಾಗಿ ಓದಿಕೊಂಡು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು. ಇಂದು ಹೆಣ್ಣು ಮಕ್ಕಳು ಸಮಾಜದ ಶಕ್ತಿಯಾಗಿದ್ದು, ಒಂದು ಕುಟುಂಬ ಸೇರಿದಂತೆ ಸಮಾಜದ ಮುನ್ನಡೆಯಲ್ಲಿಹೆಣ್ಣು ಮಕ್ಕಳ ಪಾತ್ರವು ನಿರ್ಣಾಯಕವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಸಿ. ರಮೇಶ್‌, ಕಸಾಪ ಮಾಜಿ ಅಧ್ಯಕ್ಷ ಕೆ.ಆರ್‌.ನೀಲಕಂಠ, ಡಾ.ಟಿ.ಎಂ.ದೇವರಾಜು, ಗ್ರಂಥ ಪಾಲಕಿ ಡಾ.ಪ್ರಮೋದಿನಿ, ಗಾಯತ್ರಮ್ಮ, ನಂಜುಂಡಯ್ಯ, ರಾಜಣ್ಣ, ಧನಂಜಯ, ಶ್ಯಾಂ ಪ್ರಸಾದ್‌ ಉಪಸ್ಥಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next