ನೆಲಮಂಗಲ: ಕೊರೊನಾ ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾದ ಸಾವು ನೋವುಗಳು ಮತ್ತೆ ಮರುಗಳಿಸದಂತೆ ಎಚ್ಚರಿಕೆ ವಹಿಸಿ 75 ಲಕ್ಷ ವೆಚ್ಚದಲ್ಲಿ ಪಿಎಸ್‌ಎ ಆಕ್ಸಿಜನ್ ಘಟಕ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಶ್ರೀನಿವಾಸಮೂರ್ತಿ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪಿಎಂ ಕೇರ್ ಯೋಜನೆಯಡಿ ನಿರ್ಮಿಸಿರುವ ಪಿಎಸ್‌ಎ ಆಕ್ಸಿಜನ್ ಘಟಕ ಉದ್ಘಾಟಿಸಿ ಮಾತನಾಡಿದರು. ಕೊರೊನಾ ಎರಡನೇ ಅಲೆಯಲ್ಲಿ ತಾಲೂಕಿಗೆ ಆಮ್ಲಜನಕ ಸಮಸ್ಯೆ ಎದುರಾಗಿ ಪರದಾಡುವಂತಾಗಿತ್ತು. ಅಂಥ ಸಮಸ್ಯೆ ಮತ್ತೆ ಮರುಕಳಿಸದಿರಲು 75 ಲಕ್ಷ ವೆಚ್ಚದಲ್ಲಿ ನಿರ್ಮಾಣಮಾಡಲಾಗಿರುವ ಘಟಕ ನಿಮಿಷಕ್ಕೆ 500 ಲೀಟರ್ ಆಮ್ಲಜನಕವನ್ನು ಉತ್ಪಾದನೆ ಮಾಡುವ ಸಾಮಥ್ಯìವನ್ನು ಹೊಂದಿದ್ದುಆಮ್ಲಜನಕ ಸಮರ್ಪಕವಾಗಿ ರೋಗಿಗಳಿಗೆ ಸಿಗಲಿದೆ ಎಂದರು.
ಇದನ್ನೂ ಓದಿ;- ಚಿಂತಾಮಣಿ : ಟ್ಯಾಂಕರ್ ಚಾಲಕನ ಅಜಾಗರೂಕತೆಗೆ ಜೀವಕಳೆದುಕೊಂಡ ದ್ವಿಚಕ್ರ ವಾಹನ ಸವಾರ
ತಹಶೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಕೊರೊನಾ ಸಮಸ್ಯೆಯಿಂದ ಈ ಹಿಂದೆ ಆಮ್ಲಜನಕಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇಶದ ಪ್ರಧಾನಮಂತ್ರಿಯವರ ಪಿಎಂ ಕೇರ್ ಅನುದಾನದಲ್ಲಿ ಪಿಎಸ್‌ಎ ಘಟಕ ನಿರ್ಮಾಣ ಮಾಡಲಾಗಿದ್ದು ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಜನರಿಗೆ ಆಮ್ಲಜನಕ ಸಮಸ್ಯೆ ಎದುರಾಗುವುದಿಲ್ಲ ಎಂದುತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ 75 ಲಕ್ಷ ವೆಚ್ಚದಲ್ಲಿ ಪಿಎಸ್‌ಎ ಘಟಕ ನಿರ್ಮಾಣ ಮಾಡಲಾಗಿದ್ದು ಗಂಟೆಗೆ 30 ಸಾವಿರ ಲೀಟರ್ ಉತ್ಪಾದನೆ ಮಾಡಲಾಗುತ್ತದೆ. ಎಂದು ವೈದ್ಯಾಧಿಕಾರಿ ಡಾ.ನರಸಿಂಹಯ್ಯ ತಿಳಿಸಿದರು. ತಾ. ಆರೋಗ್ಯಾಧಿಕಾರಿ ಹರೀಶ್, ತಹಶೀಲ್ದಾರ್ ಮಂಜುನಾಥ್, ವೈದ್ಯರಾದ ಡಾ.ವಿನಯ್ ಕುಮಾರ್, ಡಾ.ನಾಗೇಶ್, ಡಾ.ವಿಜಯಲಕ್ಷ್ಮಿ, ಡಾ.ಅಮಿತಾಸಿಂಗ್, ಡಾ.ಸೋನಿಯಾ, ರಾಜಸ್ವನಿರೀಕ್ಷಕ ಸುದೀಪ್, ಆರೋಗ್ಯ ನಿರೀಕ್ಷಕ ನಾಗೇಶ್, ಶುಶ್ರೂಷಕ ಅಧಿಕಾರಿ ನರಸಿಂಹಮೂರ್ತಿ.ಆರ್, ಮರಿಯಮ್ಮ ಇತರರು ಇದ್ದರು.