ಹುಬ್ಬಳ್ಳಿ: ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ 75 ಕೋಟಿ ಸೂರ್ಯ ನಮಸ್ಕಾರ ಮಹಾಯಜ್ಞ ಅಭಿಯಾನ ಉದ್ಘಾಟನಾ ಕಾರ್ಯಕ್ರಮ ಶನಿವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಹರಿದ್ವಾರದ ಪತಂಜಲಿ ಯೋಗಪೀಠ, ಗೀತಾ ಪರಿವಾರ, ಕ್ರೀಡಾ ಭಾರತಿ ನ್ಯಾಶನಲ್ ಯೋಗಾಸನ ನ್ಪೋರ್ಟ್ಸ್ ಫೆಡರೇಶನ್, ಕರ್ನಾಟಕ ಯೋಗಾಸನ ಸ್ಫೋರ್ಟ್ಸ್ ಅಸೋಸಿಯೇಶನ್, ಸ್ವಾಮಿ ವಿವೇಕಾನಂದ ಯೋಗ ಯುನಿವರ್ಸಿಟಿ ಹಾಟು#ìಲೆ°ಸ್, ಆರ್ಟ್ ಆಫ್ ಲಿವಿಂಗ್, ಕೇಂದ್ರ ಸರಕಾರದ ಆಯುಷ್ ಇಲಾಖೆ, ಶಿಕ್ಷಣ ಇಲಾಖೆ, ಕ್ರೀಡಾ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪತಂಜಲಿ ಯೋಗ ಪೀಠದ ರಾಜ್ಯ ಸಂಯೋಜಕ ಭವರಲಾಲ್ ಆರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಎಲ್ಲ ಯೋಗ ಸಂಸ್ಥೆಗಳು ಒಂದುಗೂಡಿ 75 ಕೋಟಿ ಸೂರ್ಯ ನಮಸ್ಕಾರ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದೊಂದು ವಿಶ್ವದಾಖಲೆ ಯತ್ನ ಆಗಲಿದೆ. ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಅಭಿಯಾನ ಆರಂಭಿಸಲಾಗಿದೆ. ಜ.1ರಿಂದ ಫೆ. 20ರವರೆಗೆ ಮಹಾಯಜ್ಞ ಅಭಿಯಾನ ದೇಶಾದ್ಯಂತ ನಡೆಯಲಿದ್ದು, 21 ದಿನಗಳವರೆಗೆ 13 ಸೂರ್ಯ ನಮಸ್ಕಾರಗಳನ್ನು ನಿತ್ಯ ಮಾಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.
ವಿವೇಕಾನಂದ ಶಿಕ್ಷಣ ಸಂಸ್ಥೆಯ ರವೀಂದ್ರ ದಂಡಿನ್ ಮಾತನಾಡಿದರು. ಪ್ರಾಂಶುಪಾಲ ಸಂದೀಪ ಬೂದಿಹಾಳ, ಗಿರಿಜಾ ಅಂತೋನಿ, ಸರ್ವಮಂಗಲಾ ಪಾಠಕ, ವಾಮನ ಶಾನಭಾಗ, ಪೂರ್ಣಿಮಾ ಹರವಿ, ಹರ್ಷಿತ ಅಡವಿ ಪಾಲ್ಗೊಂಡಿದ್ದರು. ಸಾವಿರಾರು ವಿದ್ಯಾರ್ಥಿಗಳು, ಯೋಗಾರ್ಥಿಗಳಾಗಿ ಪಾಲ್ಗೊಂಡಿದ್ದರು.