Advertisement

ಕೋವಿಡ್ ಎರಡನೇ ಅಲೆಯಿಂದಾಗಿ ದೇಶದಾದ್ಯಂತ 730 ವೈದ್ಯರನ್ನು ಕಳೆದುಕೊಂಡಿದ್ದೇವೆ : ಐಎಂಎ

09:17 PM Jun 16, 2021 | Team Udayavani

ನವ ದೆಹಲಿ : ಕೋವಿಡ್ ಸೋಂಕು ಇಡೀ ದೇಶದ ವ್ಯವಸ್ಥೆಯನ್ನು ಅಲುಗಾಡಿಸಿದೆ. ಒಂದನೇ ಅಲೆ ಹಾಗೂ ಎರಡನೇ ಅಲೆಯ ಕಾರಣದಿಂದಾಗಿ ದೇಶದಾದ್ಯಂತ ಲಕ್ಷಾಂತರ ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

Advertisement

ದೆಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ್ದ 730 ಮಂದಿ ವೈದ್ಯರು ಜೀವ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯಯ ಸಂಘ(ಐಎಂಎ) ಮಾಹಿತಿ ತಿಳಿಸಿದೆ.

ಇದನ್ನೂ ಓದಿ : ಕೋವಿಡ್ : ಕಾಸರಗೋಡು ಜಿಲ್ಲೆಯಲ್ಲಿ ವಾರ್ಡ್ ಮಟ್ಟದಲ್ಲಿ ನಿಯಂತ್ರಣ

ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿದ್ದ ವೈದ್ಯರ ಸಾವಿನ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಭಾರತೀಯ ವೈದ್ಯಕೀಯಯ ಸಂಘ(ಐಎಂಎ),  ಬಿಹಾರದಲ್ಲಿ ಗರಿಷ್ಠ 115, ದೆಹಲಿಯಲ್ಲಿ 109, ಉತ್ತರ ಪ್ರದೇಶದಲ್ಲಿ 79, ಪಶ್ಚಿಮ ಬಂಗಾಳದಲ್ಲಿ 62, ರಾಜಸ್ಥಾನದಲ್ಲಿ  43, ಜಾರ್ಖಂಡ್ ನಲ್ಲಿ 39, ಮತ್ತು ಆಂಧ್ರಪ್ರದೇಶದಲ್ಲಿ 38 ವೈದ್ಯರುಮೃತಪಟ್ಟಿರುವುದಾಗಿ ತಿಳಿಸಿವೆ.

ಕೋವಿಡ್‌ ಸೋಂಕಿನ ಮೊದಲ ಅಲೆಯಲ್ಲಿ 748 ವೈದ್ಯರು ಮೃತ : ಐಎಂಎ

Advertisement

ಕಳೆದ ವರ್ಷ ದೇಶದಾದ್ಯಂತ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದ 748 ವೈದ್ಯರು ಕೋವಿಡ್‌ನಿಂದ ಅಸುನಿಗಿದ್ದರು. ಆದರೇ, ಸೋಂಕಿನ ಎರಡನೇ ಅಲೆಯ ಕಾರಣದಿಂದಾಗಿ ಈವರೆಗೆ 730 ಮಂದಿ ವೈದ್ಯರನ್ನು ಕಳೆದುಕೊಂಡಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ಐಎಂಎಗೆ ಸಂಬಂಧಿಸಿದ ವೈದ್ಯರು ಮಾಹಿತಿ ನಿಡಿದ್ದಾರೆ.

ಇದನ್ನೂ ಓದಿ : ಸಿಎಂ ಬದಲಾವಣೆ ಇಲ್ಲ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ :ಅರುಣ್‌ ಸಿಂಗ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next