ಮುಂಬಯಿ: ಇಂದು ನಾವು ರಾಷ್ಟ್ರದ 72ನೇ ಸ್ವಾತಂತ್ರೊÂàತ್ಸವ ಸಂಭ್ರಮಿಸುತ್ತಿದ್ದೇವೆ. ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು, ಯೋಧರು ಮತ್ತು ಸೈನಿಕರ ತ್ಯಾಗ, ಬಲಿದಾನದ ಸಂಕೇತ ಇದಾಗಿದೆ. ಅವರೆಲ್ಲರ ಶ್ರಮದ ಫಲವೇ ಈ ಸ್ವಾತಂತ್ರೊÂàತ್ಸವ. ಆದ್ದರಿಂದ ಮೊದಲಾಗಿ ಹುತಾತ್ಮ ಸ್ವಾತಂತ್ರ್ಯ ಯೋಧರಿಗೆ ನಮನ ಸಲ್ಲಿಸೋಣ. ನಮ್ಮ ಮಕ್ಕಳಲ್ಲಿ ದೇಶಭಕ್ತಿಯನ್ನು ಮೂಡಿಸಿ ದೇಶದ ಗಡಿ ಕಾಯುವ ಯೋಧರಲ್ಲಿ ಆತ್ಮಸ್ಥೈರ್ಯ ತುಂಬಿಸಬೇಕು. ಸ್ವಾತಂತ್ರÂ ಸಮರದಲ್ಲಿ ತಮ್ಮ ಜೀವಗಳನ್ನೇ ಅಡವಿಟ್ಟು ದೇಶಕ್ಕಾಗಿ ಹೋರಾಡಿದ ಫಲವಾಗಿ ನಾವು ಇಂದು ಸ್ವತಂತ್ರ ರಾಗಿ ಬಾಳಲು ಸಾಧ್ಯವಾಗಿದೆ. ಆದ್ದರಿಂದ ನಾವು ಇಂದು ಸುರಕ್ಷಿತ, ಸಮೃದ್ಧಿ, ನೆಮ್ಮದಿಯುತರಾಗಿ ಸುಂದರಮಯವಾಗಿ ಬಾಳುತ್ತಿದ್ದೇವೆ. ಆದರೆ ರಾಷ್ಟ್ರದ ಗಡಿ ಪ್ರದೇಶಗಳಲ್ಲಿ ನಮ್ಮ ನೆಮ್ಮದಿಯ ಬಾಳಿಗಾಗಿ ಯೋಧರು, ಸೈನಿಕ ಪಡೆಯು ತಮ್ಮ ಕುಟುಬ, ಪರಿವಾರ, ಬಂಧು ಬಳಗವನ್ನು ದೂರವಿರಿಸಿ ಗಡಿ ಕಾಯುತ್ತಿರುವ ನಮ್ಮ ನೆಮ್ಮದಿಯ ಬಾಳಿನ ಶ್ರೇಯಸ್ಸು ಅವರೆಲ್ಲರಿಗೂ ಸಲ್ಲಿಸಲೇಬೇಕು. ಅವರ ತ್ಯಾಗಮಯ ಜೀವನಕ್ಕೆ ನಾವೆಲ್ಲರೂ ತಲೆಬಾಗಿಸಿ ವಂದಿಸಬೇಕು ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್. ವಿ. ಅಮೀನ್ ನುಡಿದರು.
ಆ. 15 ರಂದು ವಕೋಲಾದ ಸಾಂತಾಕ್ರೂಜ್ ಕನ್ನಡ ಸಂಘದ ಸ್ವಕಚೇರಿಯಲ್ಲಿ ನಡೆದ 72ನೇ ಸ್ವಾತಂತ್ರೊÂàತ್ಸವ ಆಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಸ್ತುತ ನಮ್ಮ ರಾಷ್ಟ್ರವು ಅನೇಕ ಬದಲಾವಣೆಗಳಿಂದ ಮುನ್ನಡೆಯುತ್ತಿದ್ದು, ವಿಶ್ವವೇ ಗುರುತಿಸುವಂತಾಗಿದೆ. 2014ರ ಸ್ವಾತಂತ್ರೊÂàತ್ಸವ ಸಂಭ್ರಮದ ಕೆಂಪುಕೋಟೆಯಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಅನೇಕ ವಿಚಾರಗಳು ಇಂದು ನವ ಭಾರತವಾಗಿ ನಿರ್ಮಾಣವಾಗಿಸಿದೆ. ಸ್ವತ್ಛತಾ ಅಭಿಯಾನ, ಬೇಟಿ ಪಡಾವೋ ಬೇಟಿ ಬಚಾಯೋ ಅಂದೋಲನ, ಜಿಎಸ್‌ಟಿ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಜನಧನ ಯೋಜನೆಗಳು ಭ್ರಷ್ಟಚಾರ ನಿರ್ಮೂಲನಕ್ಕೆ ಕಡಿವಾಣ ಹಾಕುವಂತಿವೆ. ಆ ಮೂಲಕ ನಮ್ಮ$ರಾಷ್ಟ್ರವನ್ನು ಇತರೇ ರಾಷ್ಟ್ರಗಳು ಗೌರವದಿಂದ ಕಾಣುವಂತಾಗಿದ್ದು ನಮ್ಮ ರಾಷ್ಟ್ರದ ಸ್ನೇಹ ಸಂಬಂಧವನ್ನು ಬಯಸುವಂತಾಗಿದೆ ಎಂದರು.
ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ಜೊತೆ ಕೋಶಾಧಿಕಾರಿ ದಿನೇಶ್ ಬಿ. ಅಮೀನ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್, ಕಾರ್ಯದರ್ಶಿ ಶಕೀಲಾ ಪಿ. ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ವನಿತಾ ವೈ. ನೋಂಡ, ಕಾರ್ಯದರ್ಶಿ ಲಕ್ಷಿ¾à ಎನ್. ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗೋವಿಂದ ಆರ್. ಬಂಗೇರ, ಸಲಹಾ ಸಮಿತಿಯ ಸದಸ್ಯರಾದ ಎನ್. ಎಂ. ಸನೀಲ್, ವಿಶೇಷ ಆಮಂತ್ರಿತ ಸದಸ್ಯರಾದ ಶಿವರಾಮ ಎಂ. ಕೋಟ್ಯಾನ್, ಹರೀಶ್ ಜೆ. ಪೂಜಾರಿ, ಅಂತರಿಕ ಲೆಕ್ಕ ಪರಿಶೋಧಕ ರಾಜಶೇಖರ್ ಎ. ಅಂಚನ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸುಜಾತಾ ಆರ್. ಶೆಟ್ಟಿ ಅವರು ಯುವಜನತೆಯಲ್ಲಿ ರಾಷ್ಟ್ರಾಭಿಮಾನ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವಂತೆ ತಿಳಿಸಿ ವಂದಿಸಿದರು.
ಚಿತ್ರ- ವರದಿ : ರೋನ್ಸ್ ಬಂಟ್ವಾಳ್