Advertisement
ಆ. 15 ರಂದು ಕುರ್ಲಾ ಪೂರ್ವದ ಗುಲ್‌ರಾಜ್ ಟವರ್‌ನ ಗಾಣಿಗ ಸಮಾಜ ಮುಂಬಯಿ ಕಛೇರಿಯಲ್ಲಿ ನಡೆದ 72 ನೇ ಸ್ವಾತಂತ್ರೊÂàತ್ಸವ ಆಚರಣೆ ಸಂಭ್ರಮದಲ್ಲಿ ಧ್ವಜಾರೋಹಣಗೈದು ಮಾತನಾಡಿದ ಅವರು, ಸ್ವಾತಂತ್ರÂಕ್ಕಾಗಿ ಗಾಣಿಗ ಸಮುದಾಯದ ಮುತ್ಸದ್ಧಿಗಳೂ ಹೋರಾಟ ನಡೆಸಿದ್ದಾರೆ. 72 ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿ ಕಂಡ ರಾಮರಾಜ್ಯದ ಕನಸು ಇಂದಿಗೂ ಕನಸಾಗಿಯೇ ಉಳಿದಂತಿದೆ. ಪ್ರಜಾಪ್ರಭುತ್ವವನ್ನು ನಾವುಗಳು ಎಷ್ಟರ ತನಕ ಅರ್ಥೈಯಿಸಿ ಜೀವನದಲ್ಲಿ ರೂಢಿಸಿಕೊಳ್ಳಲಾರೆಯೋ ಅಲ್ಲಿ ತನಕ ಜನಸಾಮಾನ್ಯರು ಸ್ವಾತಂತ್ರÂವಾಗಿ ಬಾಳುವುದು ಸುಲಭ ಸಾಧ್ಯವಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳು ಜಾಗೃತರಾಗಬೇಕು ಎಂದು ನುಡಿದರು.ಸಂಸ್ಥೆಯು ಹಿತೈಷಿ ಹಾಗೂ ಯುವ ಉದ್ಯಮಿ ರತ್ನಾಕರ್ ಶೆಟ್ಟಿ ಥಾಣೆ, ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ್ ಎಂ. ಗಾಣಿಗ, ಉಪಾಧ್ಯಕ್ಷ ಭಾಸ್ಕರ ಎಂ. ಗಾಣಿಗ, ಗೌರವ ಕೋಶಾಧಿಕಾರಿ ಜಯಂತ ಪಿ. ಗಾಣಿಗ, ಉಪ ಕಾರ್ಯದರ್ಶಿ ಜಗದೀಶ ಗಾಣಿಗ, ಮಹಿಳಾ ವಿಭಾಗಧ್ಯಕ್ಷೆ ತಾರಾ ಎನ್. ಭಟ್ಕಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯೋದಯ ಉಪ ಸಮಿತಿಯ ವತಿಯಿಂದ ಸಮಾಜದ ಮಕ್ಕಳಿಗೆ ವಾರ್ಷಿಕವಾಗಿ ಕೊಡಮಾಡುವ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು.
ಸಮಾಜ ಬಾಂಧವರು ಒಟ್ಟಾಗಲು ಇದೊಂದು ಉತ್ತಮ ವೇದಿಕೆ. ಇಲ್ಲಿ ಎಲ್ಲರೂ ನಮ್ಮವರು ಎಂದಾಗ ತಮ್ಮತನವು ಹೆಚ್ಚುತ್ತಾ ಸಂಬಂಧಗಳು ಇನ್ನಷ್ಟು ಬಲಗೊಳ್ಳುವುದು. ಮುಂದಿನ ದಿನಗಳಲ್ಲಿ ನಾನೂ ಈ ಸಂಸ್ಥೆಯಲ್ಲಿ ಸಕ್ರೀಯಳಾಗಿ ಸಮಾಜದ ಸೇವೆಗೆ ಬಲತುಂಬುವೆ ಎಂದು ಮಂಜುಳಾ ಗಾಣಿಗ ತಿಳಿಸಿ ಸ್ವಾತಂತ್ರೊÂàತ್ಸವದ ಶುಭಾಶಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ರಾಮಚಂದ್ರ ಎಂ. ಗಾಣಿಗ ಅವರ 75ನೇ ಹುಟ್ಟುಹಬ್ಬವನ್ನು ಆಚರಿಸಿ ಶುಭಹಾರೈಸಲಾಯಿತು. ಸುಗುಣಾ ರಾಮಚಂದ್ರ ಗಾಣಿಗ ಮತ್ತು ಪರಿವಾರ ಸದಸ್ಯರು ಉಪಸ್ಥಿತರಿದ್ದರು. ಕು| ಈಶಾ ರಾಜೇಶ್ ಗಾಣಿಗ ರಾಷ್ಟ್ರಗೀತೆಯನ್ನು ಹಾಡಿದರು. ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಆರ್. ಗಾಣಿಗ ಸ್ವಾಗತಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ವಿಜಯೇಂದ್ರ ಗಾಣಿಗ ಅವರು ಪ್ರತಿಭಾನ್ವಿತರ ಯಾದಿ ಪ್ರಕಟಿಸಿ ಮಕ್ಕಳಿಗೆ ಹಿತ ನುಡಿಗಳನ್ನಾಡಿದರು. ಯುವ ವಿಭಾಗಾಧ್ಯಕ್ಷ ಗಣೀಶ್ ಆರ್. ಕುತ್ಪಾಡಿ ವಂದಿಸಿದರು. ಭಾವಿ ಪ್ರಜೆಗಳಾದ ನಮ್ಮ ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೊಳಗುವುದು. ಆ ಮುಖೇನ ಇಂತಹ ಸಂಭ್ರಮಗಳು ಅನುಭವದ ಪಾಠಗಳಾಗುವುದು. ರಾಷ್ಟ್ರೀಯ ಆಚಣೆಯಿಂದ ನಮ್ಮ ಸಂಘವು ಸಮುದಾಯವನ್ನು ಒಗ್ಗೂಡಿಸುತ್ತಿರುವುದು ಸ್ತುತöರ್ಹ. ಈ ಮೂಲಕ ಸಂಘ, ಸಮುದಾಯ ಮತ್ತು ಸಮಗ್ರ ರಾಷ್ಟ್ರದ ಶ್ರೇಯೋಭಿವೃದ್ಧಿ ಸಾಧ್ಯ. ಸ್ವಾಂತತ್ರÂಕ್ಕಾಗಿ ಹೋರಾಡಿ ಮಡಿದ ಮಹಾನ್ ವ್ಯಕ್ತಿಗಳು, ಸೈನಿಕರ ತ್ಯಾಗ ಬಲಿದಾನವನ್ನು ಅಪಾರವಾಗಿದೆ. ಸದ್ಯ ರಾಷ್ಟ್ರ ರಕ್ಷಣೆಗಾಗಿ ಪಣತೊಡುವ ರಾಷ್ಟ್ರನಾಯಕರ, ಯೋಧರ ಸೇವೆಯನ್ನು ಸ್ಮರಿಸುವ ಆವಶ್ಯಕತೆಯಿದೆ.
-ಯು. ಬಾಲಕೃಷ್ಣ ಕ ಟಪಾಡಿ, ನ್ಯಾಯವಾದಿಗಳು
Related Articles
-ಬಿ. ವಾಸುದೇವ ರಾವ್, ಉಪಾಧ್ಯಕ್ಷರು, ಗಾಣಿಗ ಸಮಾಜ ಮುಂಬಯಿ
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
Advertisement