Advertisement

ಛತ್ತೀಸ್‌ಗಢ ಮೊದಲ ಹಂತದ ಚುನಾವಣೆ: ಶೇ.70 ಮತದಾನ

07:17 PM Nov 12, 2018 | Team Udayavani |

ಹೊಸದಿಲ್ಲಿ : ಛತ್ತೀಸ್‌ಗಢ ವಿಧಾನಸಭೆಗೆ ನಡೆದಿರುವ ಇಂದಿನ ಮೊದಲ ಹಂತದ ಚುನಾವಣೆಯಲ್ಲಿ ಶೇ.70 ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಇಂದು ಸೋಮವಾರ ತಿಳಿಸಿದೆ.

Advertisement

ಛತ್ತೀಸ್‌ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಿಗೆ ಇಂದಿನ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆದಿದೆ. ಈ 18 ಸ್ಥಾನಗಳ ಪೈಕಿ 12 ಸ್ಥಾನಗಳು ಎಸ್‌ಸಿ/ಎಸ್‌ಟಿ ಮೀಸಲು ಕ್ಷೇತ್ರವಾಗಿವೆ. 

ಎರಡನೇ ಹಂತದ ಚುನಾವಣೆಯಲ್ಲಿ 72 ಸ್ಥಾನಗಳಿಗೆ ನ.20ರಂದು ಮತದಾನ ನಡೆಯಲಿದೆ. ಡಿ.11ರಂದು ಫ‌ಲಿತಾಂಶ ಪ್ರಕಟವಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next