Advertisement

ದೇಶದಲ್ಲಿ 70 ದಶಲಕ್ಷ ಮಧುಮೇಹಿಗಳು

11:33 AM Nov 15, 2017 | Team Udayavani |

ಬೆಂಗಳೂರು: ಪ್ರಸ್ತುತ ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ 70 ದಶಲಕ್ಷವಿದ್ದು, ಮುಂದಿನ 20 ವರ್ಷಗಳಲ್ಲಿ 120 ದಶಲಕ್ಷಕ್ಕೆ ತಲುಪಲಿದೆ ಎಂದು ಮಣಿಪಾಲ್‌ ಆಸ್ಪತ್ರೆಯ ಅಧ್ಯಕ್ಷ ಡಾ.ಸುದರ್ಶನ ಬಲ್ಲಾಳ್‌ ಹೇಳಿದ್ದಾರೆ.

Advertisement

ವಿಶ್ವ ಮಧುಮೇಹ ದಿನದ ಅಂಗವಾಗಿ ಮಂಗಳವಾರ ಮಣಿಪಾಲ್‌ ಆಸ್ಪತ್ರೆಯಲ್ಲಿ ಮಧುಮೇಹ ಕುರಿತು ಶಿಕ್ಷಣ ನೀಡಲು ಮತ್ತು ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ “ಬ್ಲೂ ಮೆಸೆಂಜರ್‌’ ಮತ್ತು “7 ಎಸ್‌ ಅಭಿಯಾನ’ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಮಧುಮೇಹವನ್ನು ಉತ್ತಮವಾಗಿ ನಿಯಂತ್ರಿಸಿದಲ್ಲಿ ಹೆಚ್ಚಿನ ಸಂಕೀರ್ಣ ತೊಂದರೆಗಳು ಉಂಟಾಗುವ ಅಪಾಯ ಕಡಿಮೆಯಾಗುತ್ತದೆ ಎಂದರು.

ಮಧುಮೇಹ ವಿಭಾಗದ ಮುಖ್ಯಸ್ಥ ಮತ್ತು ಸಲಹಾ ತಜ್ಞ ಡಾ.ಕಾರ್ತಿಕ್‌ ಪ್ರಭಾಕರ್‌ ಮಾತನಾಡಿ, ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ಏಕೆಂದರೆ ಅವರಲ್ಲಿ ಹೃದಯರೋಗದ ಅಪಾಯ ಕಡಿಮೆ. ಆದರೆ, ಮಹಿಳೆಯರಲ್ಲಿ ಮಧುಮೇಹ ಉಂಟಾದರೆ ಅವರಿಗೆ ಹೃದಯರೋಗದ ಅಪಾಯ ದಿಢೀರನೆ ಆಕಾಶಕ್ಕೇರುತ್ತದೆ. ಹೃದಯ ವೈಫ‌ಲ್ಯದಿಂದ ಸಾವು ಬರುವ ಸಾಧ್ಯತೆ ಅವರಿಗೆ ಹೆಚ್ಚು ಎಂದರು. 

ಚಲನಚಿತ್ರ ನಟಿ ಅಮೂಲ್ಯ ಮಾತನಾಡಿ, ಮಹಿಳೆಯರ ಜೀವಕ್ಕೆ ಬೆದರಿಕೆವೊಡ್ಡುವ ಮಧುಮೇಹ ರೋಗದ ಕುರಿತು ಜಾಗೃತಿ ಮೂಡಿಸಲು ಮಣಿಪಾಲ್‌ ಆಸ್ಪತ್ರೆ ಕೈಗೊಂಡಿರುವ ಕಾರ್ಯಕ್ರಮ ಪ್ರಶಂಸನಾರ್ಹ. ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ನಿವಾರಣಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ. 

Advertisement

Udayavani is now on Telegram. Click here to join our channel and stay updated with the latest news.

Next