Advertisement

ದಿಲ್ಲಿಗೆ ಸೇನಾ ಸಮವಸ್ತ್ರ  ಧರಿಸಿದ 7 ಉಗ್ರರ ಪ್ರವೇಶ?

08:08 AM Jan 19, 2017 | Team Udayavani |

ಹೊಸದಿಲ್ಲಿ: ಏಳು ಮಂದಿ ಶಂಕಿತ ಉಗ್ರರು ಸೇನಾ ಸಮವಸ್ತ್ರದಲ್ಲಿ ಆಗಮಿಸಿದ್ದಾರೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಕಟ್ಟೆಚ್ಚರ ಸಾರಲಾಗಿದೆ.

Advertisement

ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಅನ್ವಯ ಹೈ ಅಲರ್ಟ್‌ ಘೋಷಿಸಲಾಗಿದೆ. ವಿಶೇಷವಾಗಿ ದಿಲ್ಲಿ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಏಳು ಉಗ್ರರು ಕ್ಯಾಪ್ಟನ್‌ ಮತ್ತು ಸುಬೇದಾರ್‌ ದರ್ಜೆಯ ಸಮವಸ್ತ್ರ ಧರಿಸಿರುವ ಮಾಹಿತಿ ಇದೆ. ಉಗ್ರರು ಛಾಕ್ರಿ ಹೊರವಲಯ ಮತ್ತು ಗುರುದಾಸಪುರ ಗಡಿಭಾಗದಲ್ಲಿ ಕಾಣಿಸಿಕೊಂಡಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಅವರೆಲ್ಲರೂ ಭಾರತೀಯ ಸೇನೆಯ ಸಮವಸ್ತ್ರ ಧರಿಸಿ¨ªಾರೆ. ಬಹುಶಃ ಅವರು ಗಡಿ ನುಸುಳಿ ಒಳಗೆ ಆಗಮಿಸಿದ ಅನಂತರ ಸಮವಸ್ತ್ರ ಧರಿಸಿರಬೇಕೆಂದು ಶಂಕಿಸಲಾಗಿದೆ. ಇದೇ ವೇಳೆ ಪಂಜಾಬ್‌ನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಜನವರಿ 26ರಂದು ಗಣರಾಜ್ಯೋತ್ಸವ ನಡೆಯ ಲಿದ್ದು, ಈ ಹಿನ್ನೆಲೆಯಲ್ಲಿಯೂ ರಾಜಧಾನಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಸಿಐಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿ¨ªಾರೆ.

Advertisement

Udayavani is now on Telegram. Click here to join our channel and stay updated with the latest news.

Next