Advertisement
ಅಂಬಿಕಾದ ವಿದ್ಯಾರ್ಥಿನಿ ಸುದಾನ ಶಾಲಾ ಗೈಡ್ ರಂಜಿತಾ, ಬೆಥನಿಯ ವಿದ್ಯಾರ್ಥಿ ಹಾಗೂ ಗೈಡ್ಗಳಾದ ವಂಶಿತಾ, ನಿಧಿ ಜಯಕುಮಾರ್, ಅರ್ಪಿತಾ ಕೆ.ಪಿ., ಸ್ಕೌಟ್ಸ್ನ ರಾಮಕೃಷ್ಣದ ವಿದ್ಯಾರ್ಥಿಗಳಾದ ದಿವಿತ್, ದಿರೈನ್, ಅಂಬಿಕಾದ ವಿದ್ಯಾರ್ಥಿ ಬೆಥನಿಯ ಗೈಡ್ ವಿಶಾಖ್ ನವೀನ್ ಹಾಗೂ ಗೈಡರ್ ಗಳಾದ ಶಿಕ್ಷಕಿ ಸುನಿತಾ ಹಾಗೂ ಮೈತ್ರೇಯಿ ಜಾಂಬೂರಿ ಉತ್ಸವಕ್ಕೆ ಆಯ್ಕೆ ಆಗಿದ್ದಾರೆ. ಮಂಗಳೂರು ಶಾರದಾ ವಿದ್ಯಾಲಯದ ದಿನೇಶ್ ಕಂಬಳಗದ್ದೆಯೂ ಸ್ಕೌಟರ್ ಆಗಿ ತೆರಳಲಿದ್ದಾರೆ. ಕರಾವಳಿಯಿಂದ ಆಯ್ಕೆ ಆಗಿರುವ 3 ಶಿಕ್ಷಕರು ಸಹಿತ 26 ಮಂದಿ ರಾಜ್ಯವನ್ನು, ಒಟ್ಟು 45 ಮಂದಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಜು. 30 ಹಾಗೂ 31ರಂದು ತಂಡಗಳಾಗಿ ಹೊರಡಲಿದ್ದಾರೆ ಎಂದು ವಿವರಿಸಿದರು.
ಒಟ್ಟು 216 ದೇಶಗಳು ಭಾಗವಹಿಸಲಿರುವ ಈ ಉತ್ಸವ 7 ದಿನಗಳ ಕಾಲ ನಡೆಯಲಿದೆ. ಪ್ರಕೃತಿ ವೀಕ್ಷಣೆ, ಸಾಹಸ ಕ್ರೀಡೆಗಳು, ಸಂಸ್ಕೃತಿಯ ವಿನಿಮಯ ಇಲ್ಲಿ ಪ್ರಮುಖವಾಗಿ ನಡೆಯುತ್ತವೆ. 13 ವರ್ಷ ಭರ್ತಿಯಾದವರು ಮಾತ್ರ ಈ ಉತ್ಸವಕ್ಕೆ ಆಯ್ಕೆಯಾಗುತ್ತಾರೆ. ಇದಕ್ಕೆ 40 ಸಾವಿರ ರೂ. ನೋಂದಣಿ ವೆಚ್ಚ ಭರಿಸಬೇಕು. ಒಟ್ಟು 1.5 ಲಕ್ಷ ರೂ. ಖರ್ಚು ಆಗಲಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ಇದರಿಂದ ಅನುಕೂಲಗಳಿವೆ ಎಂದು ವಿವರಿಸಿದರು. ದಿವಿತ್ ಗೆ ದತ್ತು ಹಣ
ಪರಮೇಶ್ವರ್ ಗೆ SMS ಕಳುಹಿಸುವ ಮೂಲಕ ರಾಜ್ಯಾದ್ಯಂತ ಸುದ್ದಿಯಾಗಿದ್ದ ದಿವಿತ್ ರೈ ಈ ತಂಡದಲ್ಲಿದ್ದಾನೆ. ಈತನಿಗೆ ಅಗತ್ಯ ಹಣವನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಭರಿಸಲಿದ್ದಾರೆ. ಆದರೆ ಉಳಿದ ವಿದ್ಯಾರ್ಥಿಗಳು ತಮ್ಮ ಕೈಯಿಂದಲೇ ಇಷ್ಟು ವೆಚ್ಚವನ್ನು ಭರಿಸಬೇಕಾಗಿದೆ. ಸರಕಾರದ ಸಹಕಾರ ಸಿಕ್ಕಿದರೆ ಉತ್ತಮ ಎಂದು ವಿದ್ಯಾರ್ಥಿಗಳು ಅಭಿಪ್ರಾಯಿಸಿದ್ದಾರೆ.
Related Articles
ವಿದ್ಯಾರ್ಥಿಗಳ ಒಂದು ತಂಡ ಬೆಂಗಳೂರಿನಿಂದ ಹೊರಡಲಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ಭೇಟಿಯಾಗಲಿದೆ. ಮಂಗಳೂರಿನಲ್ಲಿ ಗೌರವ ಏರ್ಪಡಿಸಿದ್ದು, ಸಚಿವರಾದ ಯು.ಟಿ. ಖಾದರ್, ಡಾ| ಜಯಮಾಲಾ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಹರೀಶ್ ಕುಮಾರ್ ಮೊದಲಾದವರು ಶುಭ ಹಾರೈಸಿದ್ದಾರೆ ಎಂದು ತಿಳಿಸಿದರು.
Advertisement
ವಿದೇಶಕ್ಕೆ ಮೊದಲ ಪಯಣಯಾರಿಗೂ ಸಿಗದ ಅವಕಾಶ ನಮಗೆ ಸಿಕ್ಕಿದೆ. 5ನೇ ತರಗತಿಯಿಂದಲೇ ಗೈಡ್ಸ್ನಲ್ಲಿದ್ದೇನೆ. ಎಷ್ಟೋ ಕ್ಯಾಂಪ್ ಗಳಲ್ಲಿ ಭಾಗವಹಿಸಿದ್ದೇನೆ. ಕ್ಯಾಂಪ್ ಗಳಲ್ಲಿ ನಿದ್ದೆ ಬಿಟ್ಟು ಕೆಲಸವನ್ನು ಮಾಡಿದ್ದೇವೆ. ಭಾರತವನ್ನು ವಿಶ್ವ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದೇವೆ ಎನ್ನುವುದೇ ಹೆಮ್ಮೆಯ ವಿಷಯ. ಪುತ್ತೂರಿನ ತಂಡದಲ್ಲಿರುವ ಎಲ್ಲರೂ ವಿದೇಶಕ್ಕೆ ಮೊದಲ ಬಾರಿಗೆ ಹೋಗುತ್ತಿದ್ದೇವೆ.
– ರಂಜಿತಾ ಹೇಮನಾಥ ಶೆಟ್ಟಿ, ಜಪಾನ್ ಜಾಂಬೂರಿಗೆ ತೆರಳಲಿರುವ ಗೈಡ್ಸ್