Advertisement

ಜೂನ್ ಗೆ ವ್ಯಾಗನ್ ಆರ್ 7 ಸೀಟರ್ MPV ಕಾರು ಮಾರುಕಟ್ಟೆಗೆ ಲಗ್ಗೆ! ಫೀಚರ್ಸ್ ಹೇಗಿದೆ?

08:53 AM May 07, 2019 | Nagendra Trasi |

ನವದೆಹಲಿ:ಈಗಾಗಲೇ ದೇಶದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಮಾರುತಿ ಸುಜುಕಿ ಇನ್ನಷ್ಟು ಗ್ರಾಹಕಸ್ನೇಹಿಯಾಗುವ ನಿಟ್ಟಿನಲ್ಲಿ ತಯಾರಿಸಿರುವ ಎಂಪಿವಿ ಶ್ರೇಣಿಯ 7 ಸೀಟುಗಳ ವ್ಯಾಗನ್ ಆರ್ ಅನ್ನು ಜೂನ್ ತಿಂಗಳ ಅಂತ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇರುವುದಾಗಿ ತಿಳಿಸಿದೆ.

Advertisement

ವರದಿಯ ಪ್ರಕಾರ, ನೂತನ ಮಾದರಿಯ ವ್ಯಾಗನ್ ಆರ್ ನ 7 ಆಸನಗಳ ಎಂಪಿವಿ ಕಾರುಗಳನ್ನು ವಿಶೇಷವಾಗಿ ನೆಕ್ಸಾ(NEXA) ಪ್ರೀಮಿಯನ್ ಡೀಲರ್ ಶಿಪ್ ನಲ್ಲಿ ಮಾರಾಟ ಮಾಡಲಾಗುವುದು ಎಂದು ಹೇಳಿದೆ.

7 ಸೀಟುಗಳನ್ನೊಳಗೊಂಡ ಎಂಪಿವಿ ಕಾರುಗಳಿಗೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಹೊಸ ಮಾದರಿ ಕಾರು ತಯಾರಿಕೆಗೆ ಮುಂದಾಗಿತ್ತು. ವ್ಯಾಗನ್ ಆರ್ ಗಾತ್ರ ದೊಡ್ಡದಾಗಿದ್ದು, ಈ ಮಾದರಿಯ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿತ್ತು. ನೂತನ ಮಾದರಿಯ ವ್ಯಾಗನ್ ಆರ್ ಹಲವು ರೀತಿಯ ಅತ್ಯಾಧುನಿಕ ಫೀಚರ್ಸ್ಸ್ ಹೊಂದಿದೆ.

Advertisement

7 ಸೀಟರ್ ನ ವ್ಯಾಗನ್ ಆರ್ ಕಾರಿನ ಬೆಲೆ ಅಂದಾಜು 4ರಿಂದ 6ಲಕ್ಷ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮಾರುತಿ ಸುಜುಕಿ ಅಧಿಕೃತವಾಗಿ ಬೆಲೆಯನ್ನು ಘೋಷಿಸಿಲ್ಲ.

ಮಾರುತಿ ವ್ಯಾಗನ್ ಆರ್ 7 ಸೀಟರ್ ನ ಫೀಚರ್ಸ್:

*ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್

*ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್

*ಇಲೆಕ್ಟ್ರಿಕಲ್ ಅಡ್ಜೆಸ್ಟೇಬಲ್ ORVMs

*ನಾಲ್ಕು ಬಾಗಿಲುಗಳಿಗೂ ಪವರ್ ವಿಂಡೋಸ್

*ರಿವರ್ಸ್ ಪಾರ್ಕಿಂಗ್ ಕ್ಯಾಮರಾ

Advertisement

Udayavani is now on Telegram. Click here to join our channel and stay updated with the latest news.

Next