ಕೀವ್: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರಿದಿದೆ. ಪಶ್ಚಿಮ ಮತ್ತು ಇತರ ರಾಷ್ಟ್ರಗಳ ಹಲವಾರು ನಿರ್ಬಂಧಗಳ ಹೊರತಾಗಿಯೂ ರಷ್ಯಾ ಗುರುವಾರ ಉಕ್ರೇನ್ ಮೇಲೆ ಆಕ್ರಮಣ ನಡೆಸಿದೆ. ರಷ್ಯಾದ ಆಕ್ರಮಣದಿಂದ ಓಡಿಹೋಗುವ ನಿರಾಶ್ರಿತರಿಗೆ ಅವಕಾಶ ನೀಡಲು ಯುಎಸ್ ನಿರ್ಧರಿಸಿದೆ.
ಉಕ್ರೇನ್‌ನಲ್ಲಿ ವಾಸಿಸುತ್ತಿರುವ 20,000 ಭಾರತೀಯರಲ್ಲಿ 4,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ. ಇನ್ನೂ ಹಲವರು ಸಿಲುಕಿಕೊಂಡಿದ್ದಾರೆ.
ಉಕ್ರೇನ್‌ನ ರಕ್ಷಣಾ ಉಪ ಮಂತ್ರಿ ಹನ್ನಾ ಮಲ್ಯಾರ್ ಅವರು ಶತ್ರುಗಳ (ರಷ್ಯಾ) ಅಂದಾಜು ನಷ್ಟವನ್ನು ಪಟ್ಟಿಮಾಡಿದ್ದಾರೆ.
ಏಳು ಯುನಿಟ್ ಯುದ್ಧವಿಮಾನಗಳು, ಆರು ಯುನಿಟ್ ಹೆಲಿಕಾಪ್ಟರ್ ಗಳು, 30ಕ್ಕೂ ಹೆಚ್ಚು ಯುದ್ಧ ಟ್ಯಾಂಕ್ ಗಳು, 800ಕ್ಕೂ ಹೆಚ್ಚು ರಷ್ಯನ್ ಸೈನಿಕರನ್ನು ತಾವು ಹೊಡೆದುರುಳಿಸಿದ್ದಾಗಿ ಉಕ್ರೇನ್ ಸಚಿವರು ಹೇಳಿಕೊಂಡಿದ್ದಾರೆ.
ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ. ಕ್ಷಿಪಣಿ ದಾಳಿ ಎಂದು ಅಂದಾಜಿಸಲಾಗಿದೆ. ರಷ್ಯಾ ಇಂದು ಕೈವ್ ಅನ್ನು ವಶಪಡಿಸಿಕೊಳ್ಳಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.