Advertisement
ನಗರದ ಕೆಲವೊಂದು ಕಡೆಗಳಲ್ಲಿ ಈಗಾಗಲೇ ಇರುವ ಪಾರ್ಕ್‌ಗಳಲ್ಲಿ ನಿರ್ವಹಣೆಯ ಕೊರತೆ ಇದ್ದು, ಅಂತಹ ಪಾರ್ಕ್‌ಗಳನ್ನೂ ಈ ಯೋಜನೆಯಡಿ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಪಾಲಿಕೆಗೆ ರಾಜ್ಯ ಸರಕಾರದ 2020-21ನೇ ಸಾಲಿನ 15ನೇ ಹಣಕಾಸು ಯೋಜ ನೆಯಡಿ ಸಾಮಾನ್ಯ ಸಹಾಯ ಧನವಾಗಿ 23 ಕೋಟಿ ರೂ. ಬಿಡುಗಡೆ ಯಾಗಿದ್ದು, ಇದ ರಲ್ಲಿ 1.56 ಕೋಟಿ ರೂ.ಗಳನ್ನು ಪಾರ್ಕ್ ಅಭಿವೃದ್ಧಿಗೆ ಮೀಸ ಲಿಡಲು ನಿರ್ಧರಿಸಲಾಗಿದೆ. ಬಹು ತೇಕ ಕಡೆಗಳಲ್ಲಿ ಈಗಾಗಲೇ ಟೆಂಡರ್ ಕರೆದು ಕಾಮ ಗಾರಿ ಪ್ರಗತಿಯಲ್ಲಿದೆ. ಬಂಗ್ರಕೂಳೂರು ವಾರ್ಡ್‌ನ ಕಲ್ಲಕಂಡ ಪಾರ್ಕ್ ಅಭಿವೃದ್ಧಿಗೆ 63 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್ ಅಂತಿಮಗೊಂಡಿದೆ. ಅದರಂತೆ ಪಾರ್ಕ್‌ಗೆ ಇಂಟರ್‌ಲಾಕ್, ವಾಕಿಂಗ್ ಟ್ರ್ಯಾಕ್ ಪೂರ್ಣ, ವಾಕಿಂಗ್ ಟ್ರ್ಯಾಕ್‌ಗೆ ಎಲ್‌ಇಡಿ ಬಲ್ಬ್ ಅಳವಡಿಕೆ ಸಹಿತ ಪಾರ್ಕ್ ಅಭಿವೃದ್ಧಿಗೊಳ್ಳಲಿದೆ. ಈ ಪಾರ್ಕ್ ಒಳಗೆ ಕೆರೆಯೊಂದಿದ್ದು, ಅದನ್ನು ಮುಡಾ ಮುಖೇನ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಕಂಬÛ ವಾರ್ಡ್‌ನ ಭಗವತಿ ದೇವಸ್ಥಾನ ಬಳಿಯ ಪಾರ್ಕ್‌ಗೆ ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ಗೊಂದು ಪಾರ್ಕ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪಾಲಿಕೆ ತಯಾರಿ ಮಾಡುತ್ತಿದೆ. ಪಾಲಿಕೆ ನಿಧಿ, ಮುಡಾ, ಸ್ಮಾರ್ಟ್‌ಸಿಟಿ ಅಥವಾ ಪಿಪಿಪಿ ಮಾಡೆಲ್‌ನಲ್ಲಿ ಪಾರ್ಕ್ ಅಭಿವೃದ್ಧಿಗೆ ಚಿಂತಿಸಲಾಗುತ್ತಿದೆ. ಒಂದು ವೇಳೆ ದೊಡ್ಡಗಾತ್ರದ ಉದ್ಯಾನಗಳು ನಿರ್ಮಾಣವಾಗಬೇಕಾದರೆ ನಗರದಲ್ಲಿ ಜಾಗದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ವಾರ್ಡ್ ಮಟ್ಟದಲ್ಲಿ ಮಿನಿ ಉದ್ಯಾನ ಅಭಿವೃದ್ಧಿಗೆ ಪಾಲಿಕೆ ಚಿಂತಿಸಿದೆ. ಇದರಿಂದಾಗಿ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮಳೆ ಕಡಿಮೆಯಾದ ಬಳಿಕ ಇಂಟರ್‌ಲಾಕ್ ಅಳವಡಿಸಲಾಗುತ್ತದೆ. ಉಳಿದಂತೆ ಮೂಡಾದಿಂದ ಅಭಿವೃದ್ಧಿ ಗೊಳಿಸಲು ಚಿಂತಿಸಲಾಗಿದೆ.
Related Articles
Advertisement
ಉಳಿದಂತೆ ಕದ್ರಿ ಉತ್ತರ ವಾರ್ಡ್ ಪಾರ್ಕ್‌ನ ಈಡನ್ ಕ್ಲಬ್ ಬಳಿ, ಪದವು ಪಶ್ಚಿಮ ವಾರ್ಡ್ ಪಾರ್ಕ್, ಮಣ್ಣಗುಡ್ಡೆ ವಾರ್ಡ್‌ನ ಮೇಯರ್ ಬಂಗ್ಲೆ ಬಳಿ ಪಾರ್ಕ್ ಅಭಿವೃದ್ಧಿ ಕಾಮಗಾರಿ ಪ್ರಗತಿ ಹಂತದಲ್ಲಿದೆ.
ಪಾರ್ಕ್ ಅಭಿವೃದ್ಧಿಗೆ ಆದ್ಯತೆಸಾರ್ವಜನಿಕರಿಗೆ ವಾಕಿಂಗ್ ಸೇರಿದಂತೆ ವಾಯು ವಿಹಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪಾರ್ಕ್‌ಗಳ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಮುಂದಾಗಿದೆ. ಪಾಲಿಕೆಗೆ ರಾಜ್ಯ ಸರಕಾರದ 15ನೇ ಹಣಕಾಸು ಯೋಜನೆಯಡಿ ಬಂದ ಸಾಮಾನ್ಯ ಸಹಾಯ ಧನದಲ್ಲಿ 1.56 ಕೋಟಿ ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿಗೊಳಿಸಲಾಗುತ್ತಿದೆ. ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ ಕೆಲವೆಡೆ ಟೆಂಡರ್ ಅಂತಿಮವಾಗಿದೆ.
– ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್