Advertisement

 ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 7 ಹೊಸ ಸರ್ಕಾರಿ ಆಸ್ಪತ್ರೆ

09:20 PM Feb 14, 2022 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ವರ್ಷದ ಅಂತ್ಯದೊಳಗೆ ಏಳು ನೂತನ ಸರ್ಕಾರಿ ಆಸ್ಪತ್ರೆಗಳು ಲೋಕಾರ್ಪಣೆಗೊಳಲ್ಲಿವೆ.

Advertisement

ಈ ಆಸ್ಪತ್ರೆಗಳಲ್ಲಿ ಒಟ್ಟು 7000 ಹಾಸಿಗೆಗಳಿರಲಿದ್ದು, ರಾಜ್ಯದ ಜನತೆಗೆ ಹೆಚ್ಚಿನ ವೈದ್ಯಕೀಯ ನೆರವು ಸಿಗಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

“ಜಿಟಿಬಿ ಹಾಸ್ಪಿಟಲ್‌ ಕಾಂಪ್ಲೆಕ್ಸ್‌, ರಘುಬೀರ್‌ ನಗರ, ಶಲೀಮರ ಭಾಗ್‌, ಸಿಎನ್‌ಬಿಸಿ ಕಾಂಪ್ಲೆಕ್ಸ್‌, ಸುಲ್ತಾನ್‌ಪುರಿ, ಕಿರಾರಿ, ಸರಿತಾ ವಿಹಾರದಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ.

690 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಯಾಗುತ್ತಿದ್ದು, ಅದರ ಮೊದಲನೇ ಹಂತವು ಜೂನ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಸೆಪ್ಟೆಂಬರ್‌ ವೇಳೆಗೆ ಎಲ್ಲ ಆಸ್ಪತ್ರೆಗಳೂ ಸೇವೆಗೆ ಸಿದ್ಧವಿರಲಿವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next