Advertisement

ವನ್ಯಪ್ರಾಣಿ ಬೆಳೆ ನಾಶ ಪಟ್ಟಿಗೆ 7 ಹೊಸ ಬೆಳೆ ಸೇರ್ಪಡೆ

11:25 PM Aug 14, 2023 | Team Udayavani |

ದಾವಣಗೆರೆ: ವನ್ಯಪ್ರಾಣಿಗಳಿಂದಾಗುವ ಬೆಳೆನಾಶ ಪ್ರಕರಣಗಳಿಗೆ ನೀಡುವ ಪರಿಹಾರಧನ ಮೊತ್ತವನ್ನು ಹೆಚ್ಚಿಸಿ ಪರಿಷ್ಕರಿಸಿರುವ ರಾಜ್ಯ ಸರಕಾರ, ಪ್ರಸಕ್ತ ಸಾಲಿನಲ್ಲಿ ಪರಿಹಾರ ನೀಡಬಹುದಾದ ಬೆಳೆಗಳ ಪಟ್ಟಿಯಲ್ಲಿ ಹೊಸದಾಗಿ ಏಳು ಬೆಳೆಗಳನ್ನು ಸೇರಿಸಿದೆ.

Advertisement

ವನ್ಯಪ್ರಾಣಿಗಳಿಂದಾಗುವ ಬೆಳೆನಾಶ ಪ್ರಕರಣ ಸಂಬಂಧಿಸಿ ಸರಕಾರ, ಈ ಮೊದಲು 57 ಬೆಳೆ ಗಳಿಗೆ ಪರಿಹಾರ ನೀಡುತ್ತಿತ್ತು. ಈ ಬಾರಿ ಮಾವು, ಚಿಕ್ಕು, ಸೀಬೆ, ಹಲಸು, ದಾಳಿಂಬೆ, ಸೀತಾಫಲ ಹಾಗೂ ಹಿಪ್ಪುನೇರಳೆಯನ್ನು ಸೇರಿಸಲಾಗಿದೆ.ಒಂದರಿಂದ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಾವು ಗಿಡವೊಂದಕ್ಕೆ 750 ರೂ., 6ರಿಂದ 10 ವರ್ಷ ವಯಸ್ಸಿನ ಮಾವು ಗಿಡಕ್ಕೆ 1200 ರೂ., 10 ವರ್ಷ ಮೇಲ್ಪಟ್ಟ ಗಿಡಕ್ಕೆ 1,800 ರೂ. ಪರಿಹಾರಧನ ನೀಡಲು ಸರಕಾರ ನಿರ್ಧರಿಸಿದೆ.

ಸಪೋಟಾ ಬೆಳೆಯಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಿಡವೊಂದಕ್ಕೆ 500 ರೂ., ಐದು ವರ್ಷ ಮೇಲ್ಪಟ್ಟ ಗಿಡಕ್ಕೆ 800 ರೂ., ಸೀಬೆ ಬೆಳೆಯಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಿಡಕ್ಕೆ 350 ರೂ., ಐದು ವರ್ಷ ಮೇಲ್ಪಟ್ಟ ಗಿಡಕ್ಕೆ 600 ರೂ., ದಾಳಿಂಬೆ ಬೆಳೆಯಲ್ಲಿ ಗಿಡವೊಂದಕ್ಕೆ 300 ರೂ., ಸೀತಾಫಲದ 2ರಿಂದ 4ವರ್ಷ ಮೇಲ್ಪಟ್ಟ ಗಿಡಕ್ಕೆ 250 ರೂ. ಹಾಗೂ ಹಿಪ್ಪುನೇರಳೆ ಪ್ರತಿ ಗುಂಟೆಗೆ 100 ರೂ. ಪರಿಹಾರಧನ ನೀಡಲು ನೀಡಲು ಸರಕಾರ ತೀರ್ಮಾನಿಸಿದೆ.

ಈ ಬಾರಿ ಬೆಳೆನಾಶ ಪ್ರಕರಣಗಳಲ್ಲಿರುವ ಕಾಫಿ ಬೆಳೆಯ ದರವನ್ನೂ ಪರಿಷ್ಕರಿಸಲಾಗಿದ್ದು 1ರಿಂದ 4 ವರ್ಷದ ಅರೇಬಿಕಾ ಒಂದು ಗಿಡಕ್ಕೆ 600 ರೂ., ನಾಲ್ಕು ವರ್ಷ ಮೇಲ್ಪಟ್ಟ ಅರೇಬಿಕಾ ಒಂದು ಗಿಡಕ್ಕೆ 1,200 ರೂ., ಒಂದರಿಂದ ಆರು ವರ್ಷದ ರೊಬೋಷ್ಟಾ ಒಂದು ಗಿಡಕ್ಕೆ 1,500 ರೂ. ಹಾಗೂ ಆರು ವರ್ಷ ಮೇಲ್ಪಟ್ಟ ರೊಬೋಷ್ಟಾ ಒಂದು ಗಿಡಕ್ಕೆ 3,000 ರೂ. ಪರಿಹಾರಧನ ಮೊತ್ತವನ್ನು ಸರಕಾರ ನಿಗದಿಪಡಿಸಿದೆ.

ಪರಿಷ್ಕೃತ ಪರಿಹಾರಧನ ವಿವರ (ಕ್ವಿಂಟಲ್‌ಗ‌ಳಲ್ಲಿ)
ಭತ್ತ 2640, ಜೋಳ 2480, ಮೆಕ್ಕೆಜೋಳ 2480, ಸಜ್ಜೆ 2400, ರಾಗಿ 2400, ತೊಗರಿ 6200, ಹೆಸರು 6800,, ಉದ್ದು 6800, ಕಬ್ಬು 342.72, ಹತ್ತಿ 7940, ಶೇಂಗಾ 6200, ಸೂರ್ಯಕಾಂತಿ 6040, ಸೋಯಾ 3920, ಎಳ್ಳು 6320, ಹುಚ್ಚೆಳ್ಳು 4960, ಕಂಬು 2400, ಬಟಾಣಿ 9200, ಅಲಸಂದೆ 4800, ಅವರೆ 4484, ಹಾಗಲಕಾಯಿ 3600, ಬದನೆಕಾಯಿ 1600, ನುಗ್ಗೆಕಾಯಿ 6400, ಗೆಡ್ಡೆಕೋಸು 2000, ಬೆಂಡೆಕಾಯಿ 2400, ಮೂಲಂಗಿ 1400, ಹಿರೇಕಾಯಿ 2000, ಪಡವಲಕಾಯಿ 2000, ತೊಂಡೆಕಾಯಿ 2400, ಹೂಕೋಸು 1600, ಬೀಟ್‌ರೂಟ್‌ 3276, ಈರುಳ್ಳಿ 2616, ಟೊಮೇಟೋ 1176, ಆಲೂಗಡ್ಡೆ 4268, ಕ್ಯಾರೆಟ್‌ 4456, ಬೀನ್ಸ್‌ 4780, ಅರಿಶಿನ 8400, ಕಲ್ಲಂಗಡಿ 2800, ಹಸಿಮೆಣಸಿನಕಾಯಿ 3908, ದಪ್ಪ ಮೆಣಸಿನಕಾಯಿ 4000, ಶುಂಠಿ 7740, ನವಣಿ 4200, ಎಲೆಕೋಸು 1392, ಹರಳು 9208. ಕೊತ್ತಂಬರಿ 7120, ಏಲಕ್ಕಿ ಕೆಜಿಗೆ 1600, ಮೆಣಸು ಕೆಜಿಗೆ 360 ರೂ., ಕಿತ್ತಳೆ 400-640, ಅಡಿಕೆ, ತೆಂಗು ಮರಕ್ಕೆ 800-4000 ರೂ., ಬಾಳೆ ಒಂದು ಗಿಡಕ್ಕೆ 320 ರೂ., ಮೆಂತೆಸೊಪ್ಪು ಒಂದು ಕ್ವಿಂಟಾಲ್‌ಗೆ 8ರೂ., ನಿಂಬೆ ಗಿಡಕ್ಕೆ 20 ರೂ., ಗಜನಿಂಬೆ ಗಿಡಕ್ಕೆ 40 ರೂ., ಚೆಂಡು-ಮಲ್ಲಿಗೆ ಕೆಜಿಗೆ 400 ರೂ., ಕಾಕಡ ಹೂವು ಕೆಜಿಗೆ 160 ರೂ., ಕನಕಾಂಬರ ಕೆಜಿಗೆ 320-480 ರೂ., ಸೇವಂತಿ ಕೆಜಿಗೆ 40-48ರೂ.

Advertisement

ಬೆಳೆ ನಾಶ ಪ್ರಕರಣಗಳಿಗೆ ಸಂಬಂಧಿಸಿ ಪರಿಹಾರಧನ ಮೊತ್ತ ಪ್ರಸ್ತುತ ಪರಿಷ್ಕರಣೆಯಾಗಿದೆ. ಪ್ರಸಕ್ತ ಸಾಲಿನಿಂದ ಪರಿಷ್ಕೃತ ಮೊತ್ತದ ಮಾರ್ಗಸೂಚಿ ಅನುಸರಿಸಿ ಪರಿಹಾರ ವಿತರಿಸಲಾಗುವುದು.
 -ವಿಜಯಕುಮಾರ್‌, ಆರ್‌ಎಫ್‌ ಒ, ಅರಣ್ಯ ಇಲಾಖೆ (ವನ್ಯಜೀವಿ ವಿಭಾಗ), ರಾಣೆಬೆನ್ನೂರು

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next