Advertisement

ಹಣ ಇಲ್ಲದ ಖಾತೆಯಿಂದ 7 ಲಕ್ಷ ಡ್ರಾ!

01:43 PM Dec 16, 2020 | Suhan S |

ಬೆಂಗಳೂರು: ಸಾಮಾನ್ಯವಾಗಿ ನಕಲಿ ಎಟಿಎಂ ಕಾರ್ಡ್‌ ಬಳಸಿ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂ. ಹಣ ಲೂಟಿ ಮಾಡುವ ಪ್ರಕರಣ ನೋಡಿದ್ದೇವೆ. ಆದರೆ, ಇಲ್ಲೊಂದು ಅಪರೂಪದ ಪ್ರಕರಣ ದಾಖಲಾಗಿದೆ.

Advertisement

ಹಣವೇ ಇಲ್ಲದ ಖಾತೆಯಿಂದ 7 ಲಕ್ಷರೂ. ಡ್ರಾ ಆಗಿರುವ ಬಗ್ಗೆ ಗ್ರಾಹಕರೊಬ್ಬರ ಮೊಬೈಲ್‌ಗೆ ಸಂದೇಶ ಬಂದಿದ್ದು, ಅದರಿಂದ ಅಚ್ಚರಿಗೊಂಡ ಗ್ರಾಹಕರು ಬ್ಯಾಂಕ್‌ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.ಈ ಸಂಬಂಧ ಅಶ್ವತ್ಥನಗರ ಡಾಲರ್ ಕಾಲೋನಿ ನಿವಾಸಿ ಸದಾಶಿವನಗರದಖಾಸಗಿ ಬ್ಯಾಂಕ್‌ನ ವ್ಯವಸ್ಥಾಪಕ ಶಿಲ್ಲಿ ಕುರಿಯನ್‌ ಎಂಬವರ ಕೊಟ್ಟ ದೂರಿನ ಮೇರೆಗೆ ಉತ್ತರ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಖಾಸಗಿ ಬ್ಯಾಂಕಿನಲ್ಲಿ ಬ್ಲೂ ಮೂನ್‌ ಎಂಬ ಗ್ರಾಹಕರು ಖಾತೆ ಹೊಂದಿದ್ದಾರೆ. ಗ್ರಾಹಕರ ಖಾತೆಯಲ್ಲಿ ಕೇವಲ 19 ರೂ. ಮಾತ್ರ ಇತ್ತು. ಆದರೆ, ಡಿ.9ರಂದು ಅವರ ಎಟಿಎಂ ಕಾರ್ಡ್‌ ಬಳಸಿ ಹಂತ-ಹಂತವಾಗಿ ಅಪರಿಚಿತರು 7.20 ರೂ. ಡ್ರಾ ಮಾಡಿಕೊಂಡಿದ್ದಾರೆ. ಈ ಸಂಬಂಧ ಬ್ಲೂಮೂನ್‌ ಅವರ ಮೊಬೈಲ್‌ಗೆ ಸಂದೇಶ ಬಂದಿವೆ. ಅದರಿಂದ ಅಚ್ಚರಿಗೊಂಡ ಅವರು, ಕೂಡಲೇ ಬ್ಯಾಂಕ್‌ಅಧಿಕಾರಿಗಳಗಮನಕ್ಕೆ ತಂದಿದ್ದಾರೆ. ಬಳಿಕ ಖಾತೆಯಲ್ಲಿ ಹಣ ಇಲ್ಲದಿದ್ದರೂ ಹೇಗೆ 7 ಲಕ್ಷ ಬಂದಿತ್ತು ಎಂಬುದರ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಬ್ಯಾಂಕ್‌ ಸಿಬ್ಬಂದಿಯಿಂದಲೂ ಮಾಹಿತಿ ಪಡೆದುಕೊಳ್ಳಲಾಗುವುದುಎಂದು ಸಿಇಎನ್‌ ಠಾಣೆ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next