ಲಾಸ್ ಏಂಜಲೀಸ್: ಅಮೆರಿಕದ ಸಂಗೀತ ಮಯ ಚಿತ್ರ “ಲಾ ಲಾ ಲ್ಯಾಂಡ್’ ಈ ಬಾರಿಯ ಗೋಲ್ಡನ್ ಗ್ಲೋಬ್ ಅವಾರ್ಡ್‌ನಲ್ಲಿ ಅಗ್ರ 7 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಮೂಲಕ ಅತಿ ಹೆಚ್ಚು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ಚಿತ್ರ ಎನಿಸಿಕೊಂಡಿದೆ. ಜತೆಗೆ ಮುಂದಿನ ತಿಂಗಳು ಪ್ರಕಟವಾಗಲಿರುವ ಆಸ್ಕರ್‌ನ ಫೇವರೇಟ್ ಎನಿಸಿಕೊಂಡಿದೆ. ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಕಟಿಸಲಾಗಿದ್ದು, ಲಾ ಲಾ ಲ್ಯಾಂಡ್ ಅತ್ಯಂತ ಜನಮನ್ನಣೆ ಪಡೆದ ಚಿತ್ರ ಎನಿಸಿಕೊಂಡಿದೆ. ಉತ್ತಮ ಸಂಗೀತ, ಹಾಸ್ಯ, ನಟನೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಚಿತ್ರದ ನಾಯಕ ರೇಯನ್ ಗೋಸ್ಲಿಂಗ್ ಮತ್ತು ನಾಯಕಿ ಎಮ್ಮಾ ಸ್ಟೋನ್ ಪ್ರಶಸ್ತಿಯನ್ನು ಮುಡಿಗೇ ರಿಸಿಕೊಂಡಿದ್ದಾರೆ. ಅತ್ಯುತ್ತಮ ಚಿತ್ರಕತೆ ಮತ್ತು ಸಂಗೀತ ವಿಭಾಗದಲ್ಲೂ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ನಟಿ ಮೆರಿಲ್-ಟ್ರಂಪ್ ಜಟಾಪಟಿ
ಲಾಸ್ ಏಂಜಲೀಸ್: ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟಿ ಮೆರಿಲ್ ಸ್ಟ್ರೀಪ್, ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಹರಿಹಾಯ್ದಿದ್ದಾರೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ 67 ವರ್ಷದ ಸ್ಟ್ರೀಪ್, ಬೇರೆಯವರನ್ನು ಬೆದರಿಸಲು ಅಧಿಕಾರ ಬಳಸಿಕೊಳ್ಳುವ ಪ್ರಬಲ ವ್ಯಕ್ತಿಗಳ ವಿರುದ್ಧ ಜನರು ಎಚ್ಚರವಹಿಸಬೇಕಿದೆ ಎಂದು ಪರೋಕ್ಷವಾಗಿ ಟ್ರಂಪ್ ಅವರನ್ನು ಟೀಕಿಸಿದ್ದಾರೆ. ಇದೇ ವೇಳೆ, ತಮ್ಮ ಮೇಲಿನ ಟೀಕೆಗೆ ಪ್ರತಿಕ್ರಿಯಿಸಿರುವ ಟ್ರಂಪ್, ಹಾಲಿವುಡ್‌ನಲ್ಲಿ ಸ್ಟ್ರೀಪ್ ಅತಿಯಾಗಿ ಪ್ರಚಾರ ಪಡೆದುಕೊಂಡ ನಟಿ ಎಂದು ಕಿಡಿಕಾರಿದ್ದಾರೆ.