Advertisement

ಈ ವಾರ ತೆರೆಗೆ 7 ಚಿತ್ರಗಳು

09:08 AM Jan 30, 2020 | Lakshmi GovindaRaj |

ಜನವರಿ ತಿಂಗಳ ಕೊನೆ ಸಮೀಪಿಸುತ್ತಿದ್ದಂತೆ, ಗಾಂಧಿನಗರದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆಯೂ ನಿಧಾನವಾಗಿ ಏರಿಕೆಯಾಗುತ್ತಿದೆ. ಜನವರಿ ತಿಂಗಳ ಕೊನೆ ಶುಕ್ರವಾರ (ಜ. 31)ಕ್ಕೆ ಸದ್ಯ ಏಳು ಚಿತ್ರಗಳು ಬಿಡುಗಡೆಗೆ ತಯಾರಾಗಿ ನಿಂತಿವೆ. ಲವ್‌, ಆ್ಯಕ್ಷನ್‌, ಸಸ್ಪೆನ್ಸ್‌, ಕ್ರೈಂ, ಥ್ರಿಲ್ಲರ್‌ ಹೀಗೆ ವಿವಿಧ ಜಾನರ್‌ಗಳ ಕಥಾ ಹಂದರ ಹೊಂದಿರುವ ಈ ಚಿತ್ರಗಳ ಮೇಲೆ ಸಣ್ಣದೊಂದು ರೌಂಡಪ್‌….

Advertisement

ಸ್ಯಾಂಡಲ್‌ವುಡ್‌ನ‌ಲ್ಲಿ ಇಲ್ಲಿಯವರೆಗೆ ನಾಯಕ ನಟನಾಗಿ ಮಿಂಚಿದ್ದ ನಟ ಮದರಂಗಿ ಕೃಷ್ಣ ನಿರ್ದೇಶಿಸಿರುವ ಚೊಚ್ಚಲ ಚಿತ್ರ “ಲವ್‌ ಮಾಕ್ಟೇಲ್‌’ ಈ ವಾರ ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ಲವ್‌ ಮಾಕ್ಟೇಲ್‌’ ಚಿತ್ರದ ಟ್ರೇಲರ್‌, ಹಾಡುಗಳು ನೊಡು ಗರ ಗಮನ ಸೆಳೆಯಲು ಯಶಸ್ವಿಯಾಗಿದ್ದು, “ಲವ್‌ ಮಾಕ್ಟೇಲ್‌’ ಸಿನಿಟೇಸ್ಟ್‌ ಆಡಿಯನ್ಸ್‌ಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

“ಕೃಷ್ಣ ಟಾಕೀಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಲವ್‌ ಮಾಕ್ಟೇಲ್‌’ ಚಿತ್ರದಲ್ಲಿ ಮದರಂಗಿಕೃಷ್ಣಗೆ ನಾಯಕಿಯಾಗಿ ಮಿಲನಾ ನಾಗರಾಜ್‌, ಅಮೃತಾ ಅಯ್ಯಂಗಾರ್‌ ಜೋಡಿಯಾಗಿದ್ದಾರೆ. ಚಿತ್ರದ ಹಾಡುಗಳಿಗೆ ರಘು ದೀಕ್ಷಿತ್‌ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ಕ್ರೇಜಿ ಮೈಂಡ್ಸ್‌ ಶ್ರೀ ಛಾಯಾಗ್ರಹಣ ಮತ್ತು ಸಂಕಲನವಿದೆ. ಪಕ್ಕಾ ಲವ್‌ ಕಂ ರೊಮ್ಯಾಂಟಿಕ್‌ ಕಥಾಹಂದರದ “ಲವ್‌ ಮಾಕ್ಟೇಲ್‌’ನಲ್ಲಿ ನಾಯಕ ಕಂ ನಿರ್ದೇಶಕ ಕೃಷ್ಣ 3 ವಿಭಿನ್ನ ಶೇಡ್‌ನ‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಭಾನುಪ್ರಿಯ ಶೆಟ್ಟಿ, ಹೊನ್ನಾವಳ್ಳಿ ಕೃಷ್ಣ, ಪ್ರಶಾಂತ್‌, ವಿನಯ್‌ ಚಂದ್ರು ಛತ್ರಪತಿ, ತಾರಖ್‌, ರಕ್ಷಿಕಾ, ಸೋನಂ ರಾಯ್‌, ಮೇಘನಶ್ರೀ, ತಿಮ್ಮೇಗೌಡ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಅಭಿನಯಿಸಿರುವ “ಆಸಿಂಕೋಜ್ಹಿಲ್ಲ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ವಿಜ್ಞಾನಿಯೊಬ್ಬ ಸಮಾಜದಲ್ಲಿ ಒಂದು ಬದಲಾವಣೆ ತರಬೇಕೆಂದು ಯೋಚಿಸಿ ಕಾಡಿಗೆ ಹೋಗಿ ಹೊಸ ಸಾಹಸವನ್ನು ಮಾಡುತ್ತಾನೆ. ಇದೇ ಸಮಯದಲ್ಲಿ ಆತನ ಜೊತೆಗೆ ಇನ್ನು 4 ವಿಭಿನ್ನ ವ್ಯಕ್ತಿಗಳು ಸೇರಿಕೊಳ್ಳುತ್ತಾರೆ.

ಅಲ್ಲಿ ಏನೇನು ನಡೆಯುತ್ತದೆ ಎಂಬ ಸಸ್ಪೆನ್ಸ್‌ -ಥ್ರಿಲ್ಲರ್‌ ಕಥಾಹಂದರ “ಆಸಿಂಕೋಜ್ಹಿಲ್ಲ’ ಚಿತ್ರದಲ್ಲಿದೆ. “ಶ್ರೀ ಮಾರುತಿ ಮೂವಿ ಮೇಕರ್’ ಬ್ಯಾನರ್‌ನಲ್ಲಿ ಸೋಮಶೇಖರ್‌ ಶೆಟ್ಟಿ ನಿರ್ಮಿಸಿರುವ ಈ ಚಿತ್ರಕ್ಕೆ ಶಮನ್‌ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅಮೋಘ ವರ್ಷ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಮಂಜುನಾಥ್‌ ಹೆಗ್ಡೆ, ಸಚಿನ್‌ ತಿರುಮಲ ಛಾಯಾಗ್ರಹಣವಿದೆ. ವಿನಯ್‌ ಕುಮಾರ್‌ ಕೂರ್ಗು ಸಂಕಲನವಿದೆ. ಮಂಜುನಾಥ್‌ ಕೆ.ಸಿ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿದ್ದಾರೆ.

Advertisement

ಈ ಹಿಂದೆ “ಜಯಮ್ಮನ ಮಗ” ಚಿತ್ರವನ್ನು ನಿರ್ದೇಶಿಸಿದ್ದ ವಿಕಾಸ್‌ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ “ಕಾಣದಂತೆ ಮಾಯವಾದನು’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಸಸ್ಪೆನ್ಸ್‌ ಕಂ ರೊಮ್ಯಾಂಟಿಕ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿಕಾಸ್‌ಗೆ ನಾಯಕಿ ಯಾಗಿ ಸಿಂಧು ಲೋಕನಾಥ್‌ ಜೋಡಿಯಾಗಿದ್ದಾರೆ. ಉಳಿದಂತೆ ಅಚ್ಯುತ ಕುಮಾರ್‌, ವಿನಯಾಪ್ರಸಾದ್‌, ಸುಚೇಂದ್ರ ಪ್ರಸಾದ್‌, ರಾಘವ್‌ ಉದಯ್‌, ಭಜರಂಗಿ ಲೋಕಿ, ಧರ್ಮಣ್ಣ, ಸೀತಾಕೋಟೆ, ಸನ್ನಿ ಮಹಿಪಾಲ್‌, ಬಾಬು ಹಿರಣ್ಣಯ್ಯ, ಹೊನ್ನವಳ್ಳಿ ಕೃಷ್ಣ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಬ್ಯಾಕ್‌ ಬೆಂಚರ್ ಮೋಷನ್‌ ಪಿಕ್ಚರ್’ ಬ್ಯಾನರ್‌ನಲ್ಲಿ ಚಂದ್ರಶೇಖರ್‌ ನಾಯ್ಡು, ಸೋಮ್‌ ಸಿಂಗ್‌ ಹಾಗೂ ಪುಷ್ಪ ಸೋಮ್‌ ಸಿಂಗ್‌ ನಿರ್ಮಿಸಿರುವ “ಕಾಣದಂತೆ ಮಾಯವಾದನು’ ಚಿತ್ರಕ್ಕೆ ರಾಜ್‌ ಪತಿಪಾಟಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಸುಜ್ಞಾನ್‌ ಛಾಯಾಗ್ರಹಣ, ಸುರೇಶ್‌ ಆರ್ಮುಗಂ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಜಯ್‌ ಗುಮೆನೇನಿ ಸಂಗೀತ ಸಂಯೋಜನೆಯಿದೆ. ಅಭಿಷೇಕ್‌ ಜೈನ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಡಿಂಗ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಇಡೀ ಚಿತ್ರವನ್ನು ಐ-ಫೋನ್‌ನಲ್ಲಿ ಚಿತ್ರೀಕರಿಸಿರುವುದು. ಈ ಚಿತ್ರದ ವಿಶೇಷ.

ಐಫೋನ್‌ಗೆ ಹೊಂದುವಂತಹ ವಿಶೇಷ ಲೆನ್ಸ್‌ಗಳನ್ನು ಯು.ಎಸ್‌ನಿಂದ ತರಿಸಿ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಇಡೀ ಏಷ್ಯಾದಲ್ಲೇ ಇದು ಪ್ರಥಮ ಪ್ರಯತ್ನ ಎನ್ನುತ್ತಿದೆ ಚಿತ್ರತಂಡ. “ಶ್ರೀಮಾಯಕಾರ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಡಾ. ಮುಗೂರು ಮಧು ದೀಕ್ಷಿತ್‌ ನಿರ್ಮಿಸಿರುವ “ಡಿಂಗ’ ಚಿತ್ರಕ್ಕೆ ಸುದ್ದೊ ರಾಯ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಮಂಜುನಾಥ್‌ ಛಾಯಾಗ್ರಹಣ, ಶ್ರೀಕಾಂತ ಸಂಕಲನವಿದೆ. ಚಿತ್ರಕ್ಕೆ ವಿಜಯ್‌ ಈಶ್ವರ್‌ ಸಂಭಾಷಣೆ ಬರೆದಿದ್ದಾರೆ.

ಚಿತ್ರದಲ್ಲಿ ಆರವ್‌ ಗೌಡ, ಅಭಿಷೇಕ್‌ ಜೈನ್‌, ಅನೂಷಾ, ನಾಗೇಂದ್ರ ಶಾ, ರಘು ರಮಣಕೊಪ್ಪ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 1970ರ ದಶಕದಲ್ಲಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಕ್ರೈಂ ಕಥೆ ಯೊಂದರಿಂದ ಸ್ಪೂರ್ತಿ ಪಡೆದುಕೊಂಡು ತಯಾರಾಗಿರುವ “ನಿಗರ್ವ’ ಚಿತ್ರ ಈ ವಾರ ತೆರೆ ಕಾಣುತ್ತಿದೆ. “ಮುಸುರಿ ಕೃಷ್ಣಮೂರ್ತಿ ಫಿಲಂಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ನಿಗರ್ವ’ ಚಿತ್ರಕ್ಕೆ ಜಯಸಿಂಹ ಮುಸುರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಚಿತ್ರಕ್ಕೆ ಗುರುದತ್‌ ಮುಸುರಿ ಛಾಯಗ್ರಹಣ, ನಾಗೇಂದ್ರ ಅರಸ್‌ ಸಂಕಲ ನವಿದೆ. ವಿನು ಮನಸು ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಬುಲೆಟ್‌ ವಿನು, ಕೃಷ್ಣೇ ಗೌಡ, ಆರ್ಯನ್‌ ಸೂರ್ಯ ಭಾರತಿ ಹೆಗಡೆ, ಹರ್ಷಿತಾ ಗೌಡ, ರತ್ನಕುಮಾರಿ, ರಂಜಿತಾರಾವ್‌, ಅಶ್ವಿ‌ನಿರಾವ್‌, ಸುಶ್ಮಿತ ಮುಂತಾದ ಕಲಾವಿದರು “ನಿಗರ್ವ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಭೈರವ್‌, ಮಣಿಕಂಠ, ಮಹೇಶ್‌, ಪುಟ¤ರಾಜ್‌ ಸ್ವಾಮಿ, ಡ್ಯಾನಿ, ರಶ್ಮಿಕ, ರಾಮ್‌ಶರ್ಮ ಮುಂತಾದ ಹೊಸ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ “ನಮೋ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. “ಸ್ನೇಹ ಸ್ಪರ್ಶ ಎಂಟರ್‌ಟೈನ್‌ಮೆಂಟ್‌’ ಬ್ಯಾನರ್‌ನಲ್ಲಿ ಮಧುಸೂಧನ್‌.

ಟಿ ನಿರ್ಮಿಸಿರುವ “ನಮೋ’ ಚಿತ್ರಕ್ಕೆ ಪುಟ್ಟರಾಜ್‌ ಸ್ವಾಮಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರದ ಹಾಡುಗಳಿಗೆ ಸಾಯಿ ಸರ್ವೇಶ್‌ ಸಂಗೀತ ಸಂಯೋ ಜಿಸಿದ್ದಾರೆ. ಚಿತ್ರಕ್ಕೆ ಶಕ್ತಿ ಶೇಖರ್‌ ಛಾಯಾಗ್ರಹಣ, ಸುರೇಶ್‌ ಸಂಕಲನವಿದೆ. ನಟಿ ಸೋನು ಗೌಡ, ರಾಜೇಶ್‌ ನಟರಂಗ ಮೊದಲಾದವರು ಅಭಿನಯಿಸಿರುವ “ರಾಮನ ಸವಾರಿ’ ಚಿತ್ರ ಕೂಡ ಈ ವಾರ ತೆರೆಗೆ ಬರುತ್ತಿದೆ. ಶಿವರುದ್ರಯ್ಯ ನಿರ್ದೇಶನವಿರುವ ಈ ಚಿತ್ರ ಮಕ್ಕಳ ಕುರಿತಾದ ಕಥಾಹಂದರವನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next