Advertisement
ಬೆಳಗ್ಗೆ 7ಗಂಟೆಯ ಸುಮಾರಿಗೆ ಬಿದ್ಕಲ್‌ಕಟ್ಟೆ-ಹುಣ್ಸೆಮಕ್ಕಿ ರಸ್ತೆಯಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಕುರಿತು ಕೋಟ ಪೊಲೀಸರಿಗೆ ಸ್ಥಳೀಯರಿಂದ ಖಚಿತ ಮಾಹಿತಿ ದೊರೆತಿದ್ದು, ಅನಂತರ ಠಾಣಾಧಿಕಾರಿ ಸಂತೋಷ್ ಎ.ಕಾಯ್ಕಿಣಿ ನೇತೃತ್ವದಲ್ಲಿ ಸಿಬಂದಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದು, ಜಾನುವಾರು ಸಾಗಾಟ ನಡೆಸುತ್ತಿದ್ದ ಬೊಲೆರೋ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ವಾಹನದಲ್ಲಿ ಎರಡು ಎಮ್ಮೆ, ನಾಲ್ಕು ಕರು ಮತ್ತು ಮೂರುದನಗಳಿದ್ದವು. ಇದರಲ್ಲಿ ಒಂದು ದನ, ಒಂದು ಎಮ್ಮೆ ಮೃತಪಟ್ಟಿವೆ. ಗೋಳಿಯಂಗಡಿಯ ಹುಸೇನ್ ಪ್ರಕರಣದ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಸಿಬಂದಿ ಸುರೇಶ, ಆನಂದ ವೆಂಕಟ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಪಶು ವೈದ್ಯ ಜಯಣ್ಣ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರು.
ಸಾರ್ವಜನಿಕರಿಗೆ ಅನುಮಾನ ಬಾರದಂತೆ ಮೀನು ಸಾಗಾ ಟದ ವಾಹನವನ್ನು ಕೃತ್ಯಕ್ಕೆ ಬಳಸಲಾಗಿತ್ತು ಹಾಗೂ ಜಾನು ವಾರುಗಳ ಕಾಲು ಕಟ್ಟಿ ಮೀನಿನ ಲೋಡ್‌ಗೆ ಬಳಸುವಂತೆ ಟರ್ಪಾಲ್ ಮುಚ್ಚಲಾಗಿತ್ತು.