Advertisement

ಚಂದ್ರಂಪಳ್ಳಿ ಅಭಿವೃದ್ಧಿಗೆ 7.50 ಕೋಟಿ ರೂ.

05:46 PM Sep 26, 2022 | Team Udayavani |

ಚಿಂಚೋಳಿ: ಜಿಲ್ಲೆಯಲ್ಲೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಮಿನಿ ಮಲೆನಾಡು ಪ್ರದೇಶವೆಂದೇ ಪ್ರಖ್ಯಾತಿ ಪಡೆದಿರುವ ಕುಂಚಾವರಂ ವನ್ಯಜೀವಿಧಾಮ ಮತ್ತು ಚಂದ್ರಂಪಳ್ಳಿ, ಗೊಟ್ಟಂಗೊಟ್ಟ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಕೆಕೆಆರ್‌ಡಿಬಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ 5ಕೋಟಿ ರೂ., ಪ್ರವಾಸೋದ್ಯಮ ಇಲಾಖೆಯಿಂದ 2.50 ಕೋಟಿ ರೂ. ಮಂಜೂರಾಗಿದ್ದು, ಒಟ್ಟು 7.50 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ.

Advertisement

ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಗೊಟ್ಟಂಗೊಟ್ಟ, ಎತ್ತಪೋತ ಜಲಧಾರೆ, ಚಂದ್ರಂಪಳ್ಳಿ ಜಲಾಶಯ ಸುತ್ತಲಿನ ಅರಣ್ಯ ಪ್ರದೇಶಕ್ಕೆ ಹಿಂದೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿತಾಣ ಅಭಿವೃದ್ಧಿಗಾಗಿ 2ಕೋಟಿ ರೂ. ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಬಿಡುಗಡೆಯಾಗಿದೆ. ಚಂದ್ರಂಪಳ್ಳಿ ನಿಸರ್ಗಧಾಮದಲ್ಲಿ ಜಂಗಲ್‌ ಲಾಡ್ಜ್ ನಿರ್ಮಾಣಕ್ಕೆ 2ಕೋಟಿ ರೂ. ಅನುದಾನ ಪ್ರವಾಸೋದ್ಯಮ ಇಲಾಖೆಯಿಂದ
ಮಂಜೂರಾಗಿದೆ. ಚಂದ್ರಂಪಳ್ಳಿ ಜಲಾಶಯದಲ್ಲಿ ಬೋಟಿಂಗ್‌ ಮತ್ತು ಜಲಕ್ರೀಡೆಗಾಗಿ ಪ್ರತ್ಯೇಕವಾಗಿ 50ಲಕ್ಷ ರೂ. ಮಂಜೂರಾಗಿದೆ.

ಚಂದ್ರಂಪಳ್ಳಿ ಜಲಾಶಯ ಸುತ್ತಮುತ್ತ ಪ್ರವಾಸಿಗರು ನಡೆದಾಡಲು ಎರಡು ರಸ್ತೆ, ನಾಲ್ಕು ಪರಗೋಲಾ, ಮಕ್ಕಳ ಆಟದ ಮೈದಾನ, ಮರಳು ಹಾಸಿಗೆ, ಮಕ್ಕಳ
ಆಟಿಕೆ ಸಾಮಗ್ರಿ ಮತ್ತು ಮರಳು ಹಾಸಿಗೆ ಎಂಪಿ ಥಿಯೇಟರ್‌, ಪ್ರವೇಶ ದ್ವಾರ, ಟಿಕೆಟ್‌ ಕೌಂಟರ್‌, ಕಾವಲುಗಾರನ ಕೊಠಡಿ, ಪಾರ್ಕಿಂಗ್‌, ಶೌಚಾಲಯ, ಭೋಜನಾಲಯ ಕೋಣೆ, ಸೋಲಾರ್‌ ವಿದ್ಯುತ್‌ ದೀಪಗಳ ವ್ಯವಸ್ಥೆ, ಬೆಂಚುಗಳು, ವಿಶ್ರಾಂತಿ ಕೋಣೆ, ಶುದ್ಧ ನೀರಿನ ಘಟಕ ಸೇರಿದಂತೆ ಇನ್ನಿತರೆ ಸೌಲಭ್ಯ ಒದಗಿಸಲಾಗುತ್ತಿದೆ.

ಚಿಂಚೋಳಿ ತಾಲೂಕಿನ ನಿಸರ್ಗದ ಪ್ರಕೃತಿ ಮಡಿಲಿನಲ್ಲಿರುವ ಚಂದ್ರಂಪಳ್ಳಿ ಜಲಾಶಯ ಸುತ್ತಮುತ್ತಲಿನ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಕಳೆದ ಮೂರು ವರ್ಷಗಳಿಂದ ಸಾಕಷ್ಟು ಪ್ರಯತ್ನಿಸಿದ ಫಲವಾಗಿ ಸರಕಾರದಿಂದ 7.50ಕೋಟಿ ರೂ. ಅನುದಾನ ಮಂಜೂರಾಗಿದೆ. ಇದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲಿವೆ. ಬೇರೆ ಕಡೆಯಿಂದ ಬರುವ ಪ್ರವಾಸಿಗರಿಗೆ ಜಂಗಲ್‌ ಲಾಡ್ಜ್ ನಿರ್ಮಿಸಲಾಗುವುದು. ಜಲಕ್ರೀಡೆ ಮತ್ತು
ಬೋಟಿಂಗ್‌ ವ್ಯವಸ್ಥೆ ನಡೆಸಲಾಗುತ್ತಿದೆ. ಚಂದ್ರಂಪಳ್ಳಿ ಪ್ರವಾಸಿ ತಾಣವನ್ನಾಗಿ ಮಾಡುವ ನನ್ನ ಕನಸು ಈಡೇರಿದೆ.
ಡಾ|ಅವಿನಾಶ ಜಾಧವ, ಶಾಸಕ

ಚಂದ್ರಂಪಳ್ಳಿ ಪ್ರವಾಸಿ ತಾಣ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆ ಮತ್ತು ಕೆಕೆಆರ್‌ಡಿಬಿ ವತಿಯಿಂದ ಹಾಗೂ ಸರ್ಕಾರದಿಂದ ಒಟ್ಟು 7.50ಕೋಟಿ ರೂ. ಅನುದಾನ ಮಂಜೂರಾಗಿದೆ. ಚಂದ್ರಂಪಳ್ಳಿ ಇನ್ಮುಂದೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಲಿದೆ. ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ|ಉಮೇಶ ಜಾಧವ, ಶಾಸಕ ಡಾ|ಅವಿನಾಶ ಜಾಧವ ಪ್ರಯತ್ನದಿಂದ ಅಭಿವೃದ್ಧಿಯಾಗುತ್ತಿರುವುದು ಸಂತಸವಾಗಿದೆ.
ಸಂಜೀವಕುಮಾರ ಚವ್ಹಾಣ, ವಲಯ ಅರಣ್ಯಾಧಿಕಾರಿ,
ವನ್ಯಜೀವಿಧಾಮ ಇಲಾಖೆ, ಕುಂಚಾವರಂ

Advertisement
Advertisement

Udayavani is now on Telegram. Click here to join our channel and stay updated with the latest news.

Next