Advertisement

ನ್ಯೂಜಿಲೆಂಡ್‌ ನಲ್ಲಿ 7.1 ತೀವ್ರತೆಯ ಭೂಕಂಪ

07:51 PM Mar 04, 2021 | Team Udayavani |

ಆಕ್ಲೆಂಡ್ : ಗುರುವಾರ ಸಂಜೆ ನ್ಯೂಜಿಲೆಂಡ್‌ನ ಆಕ್ಲೆಂಡ್ ಬಳಿ 7.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ.

Advertisement

ಭೂಕಂಪನದ ಕೇಂದ್ರಬಿಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ನ ಪೂರ್ವಕ್ಕೆ 414 ಕಿ.ಮೀ ದೂರದಲ್ಲಿದೆ ಎಂದು ಮೂಲಗಳು ತಿಳಿಸಿವೆ.  ಸಂಜೆ 6:57ರ ಸುಮಾರಿಗೆ ಭೂಮಿಯು ತೀವ್ರವಾಗಿ ನಡುಗಿದ್ದು, ಭೂಮಿಯ ಮೇಲಿಂದ ಸುಮಾರು 10 ಕಿ.ಮೀ ಆಳದಲ್ಲಿ ಕಂಪಿಸಿದೆ ಎಂದು ಹೇಳಲಾಗಿದೆ.

ನ್ಯೂಜಿಲೆಂಡ್ ನ ಹಲವಾರು ಕಡೆ ಕಂಪನವಾಗಿದ್ದು, ಆಕ್ಲೆಂಡ್,ವೆಲ್ಲಿಂಗ್ಟನ್ ಮತ್ತು ಕ್ರೈಸ್ಟ್‌ಚರ್ಚ್‌ ನಲ್ಲಿ ಇದರ ಅನುಭವವಾಗಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next