Advertisement

ಭಾರತ ತಂಡಕ್ಕೆ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಅಗತ್ಯವಿದೆಯೆ

05:04 PM Feb 07, 2020 | keerthan |

ಮಣಿಪಾಲ: ಮುಂಬರುವ ಮಹತ್ವದ ಟೂರ್ನಮೆಂಟ್ ಗಳನ್ನು ಗಮನದಲ್ಲಿ ರಿಸಿಕೊಂಡು ಭಾರತೀಯ ಏಕದಿನ ಮತ್ತು ಟಿ20 ತಂಡಕ್ಕೆ ಫುಲ್ ಟೈಮ್ ಕೀಪರ್ ಒಬ್ಬನ ಅಗತ್ಯವಿದೆ ಎಂಬುದಕ್ಕೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.

Advertisement

ವಿಜಯ್ ಕೃಷ್ಣ ವಿಜ್ಜು ಆಚಾರ್ಯ: ಆಯ್ಕೆಗಳು ಅವರಿಗೆ ಬಿಟ್ಟದ್ದ. ನನ್ನ ಪ್ರಕಾರ ರಾಹುಲ್‌ ಗೆ ಇನ್ನಷ್ಷು ಅವಕಾಶ ದೊರೆತರೆ ಖಂಡಿತವಾಗಿಯೂ ಒಳ್ಳೆಯ ವಿಕೆಟ್ ಕೀಪರ್ ಆಗುವುದರಲ್ಲಿ ಸಂಶಯ ಇಲ್ಲ.

ಶ್ರೀಧರ್ ಉಡುಪ: ಸೀಮಿತ ಓವರ್ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ರಾಹುಲ್ ಹೆಚ್ಚಿನ ಆತ್ಮ ವಿಶ್ವಾಸದಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ ಹಾಗೂ ಸಮರ್ಥವಾಗಿ ಕೀಪಿಂಗ್ ನಡೆಸುತ್ತಿದ್ದಾರೆ. ತಂಡದಲ್ಲಿ ಸ್ಥಾನ ಭದ್ರ ಮಾಡಿಕೊಳ್ಳಲು ಅವರಿಗೂ ಕೂಡ ಇದು ಅನಿವಾರ್ಯ.ರಾಹುಲ್ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿದ್ದೇ ಆದಲ್ಲಿ ಹೆಚ್ಚಿನ ಅನುಭವ ಗಳಿಸಿ ಮುಂದಿನ ದಿನಗಳಲ್ಲಿ ಧೋನಿಗಿಂತ ಮಿಗಿಲಾದ ಕೀಪರ್ ಬ್ಯಾಟ್ಸಮ್ಯಾನ್ ಆಗುವ ಸಾಮರ್ಥ್ಯ ಅವರಲ್ಲಿದೆ. ಕಾರಣ ಸದ್ಯಕ್ಕೆ ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ ಬೇರೆ ಫುಲ್ ಟೈಮ್ ಕೀಪರ್ ಅವಶ್ಯಕತೆ ಭಾರತ ತಂಡಕ್ಕೆ ಇಲ್ಲವೆಂದು ನನ್ನ ಭಾವನೆ.

ರಾಘವೇಂದ್ರ ಬಿಲ್ಲವ: ರಾಹುಲ್‌ ಅವರನ್ನು ಹೆಚ್ಚಾಗಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿ ಹೆಚ್ಚೆಚ್ಚು ಅವಕಾಶವನ್ನು ನೀಡುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next