ಮಿಸ್ಟರ್ ಎಲ್.ಎಲ್.ಬಿ.: ಆರ್. ವಿ. ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ರಘುವರ್ಧನ್ ನಿರ್ದೇಶಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ನಡೆಯುವ ಪ್ರೀತಿ ವಿಷಯವನ್ನು ಹಾಸ್ಯರೂಪದಲ್ಲಿ ಹೇಳಲಾಗಿದೆ. ಶಿಶಿರ್ ನಾಯಕರಾದರೆ, ಲೇಖಚಂದ್ರ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣವಿದೆ. ಮಂಜು ಚರಣ್ ಸಂಗೀತ ನೀಡಿದ್ದಾರೆ. ರಾಜು ಬೆಳಗೆರೆ ಸಂಭಾಷಣೆ ಮಾಡಿದರೆ, ಕೆ. ಗಿರೀಶ್ ಕುಮಾರ್ ಸಂಕಲನವಿದೆ. ಗೌಸ್ ಪೀರ್, ಮಂಜು ಚರಣ್ ಸಾಹಿತ್ಯವಿದೆ. ಚಿತ್ರದಲ್ಲಿ ಸುಜಯ್ ಹೆಗಡೆ, ನಂದಿನಿ, ಕೆಂಪೇಗೌಡ, ಶ್ರೀನಿವಾಸ ಗೌಡ, ಗಿರೀಶ್ ಜತ್ತಿ, ಬೆಂಗಳೂರು ನಾಗೇಶ್, ಶಾಂತ ಆಚಾರ್ಯ, ನಾರಾಯಣ ಸ್ವಾಮಿ, ಡೈಮಂಡ್ ರಾಜಣ್ಣ, ಡಾ. ಸೋಮಶೇಖರ್ ನಟಿಸಿದ್ದಾರೆ.
ಕಂತ್ರಿ ಬಾಯ್ಸ: ಹೇಮಂತ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಎಸ್.ರಾಜು ಚಟ್ನಳ್ಳಿ ನಿರ್ದೇಶಕರು. ಗಡ್ಡಪ್ಪ, ಸುಮಂತ್ ಸೂರ್ಯ, ಅರವಿಂದ್, ಹನುಮಂತು, ಹೇಮಂತ್ ಗೌಡ, ದರ್ಶನ್ ರಾಜ್, ಆನಕ, ಸಂಧ್ಯಾ, ಶಾಲಿನಿ, ಸಂತೋಷ್, ವಾಸಂತಿ, ಭೂಪಾಲ್, ವೆಂಕಟಾಚಲ, ಪಟೇಲ್ ರಂಗಪ್ಪ ಇತರರು ನಟಿಸಿದ್ದಾರೆ. ಪಿವಿಆರ್ ಸ್ವಾಮಿ ಛಾಯಾಗ್ರಹಣವಿದೆ. ಕಿರಣ್ ಮಹದೇವ್ ಸಂಗೀತವಿದೆ.
ತುಂತುರು: ಸೋಮಶೇಖರ್, ವಿ.ಕುಮಾರ್, ಮಂಜು ಎಸ್ ಪಾಟೀಲ್ ಹಾಗೂ ಸತ್ಯಸಾಮ್ರಾಟ್ ಜೊತೆಗೂಡಿ ನಿರ್ಮಿಸಿರುವ ಈ ಚಿತ್ರಕ್ಕೆ ಮುಸ್ಸಂಜೆ ಮಹೇಶ್ ನಿರ್ದೇಶಕರು. ರಮೇಶ್ ಅರವಿಂದ್, ರಿಷಿಕಾಸಿಂಗ್, ಅನುಪ್ರಭಾಕರ್ ಇತರರು ನಟಿಸಿದ್ದಾರೆ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ. ಶ್ರೀಧರ್ ಸಂಭ್ರಮ್ ಸಂಗೀತವಿದೆ. ಗಣೇಶ್ ಅವರ ನೃತ್ಯ ನಿರ್ದೇಶನವಿದೆ.
ಶಂಖನಾದ: ವಿಜಯರೆಡ್ಡಿ ಎಸ್ ಚೌದ್ರಿ ನಿರ್ಮಾಣದ ಈ ಚಿತ್ರವನ್ನು ವಿಶ್ವನಾಥ ಬಸಪ್ಪ ಕಾಳಗಿ ನಿರ್ದೇಶಿಸಿದ್ದಾರೆ. ಶಾಂತರೆಡ್ಡಿ ಪಾಟೀಲ್, ನಯನಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ವಿನು ಮನಸು ಸಂಗೀತ ನೀಡಿದರೆ, ನಕುಲ್ ದಾಂಡೇಕರ್ ಛಾಯಾಗ್ರಹಣವಿದೆ. ಸತೀಶ್ ಚಂದ್ರಯ್ಯ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ನಮ್ ಶ್ರೀನಿವಾಸ, ಶ್ರೀ, ರಶ್ಮಿತಾ, ಅಶೋಕ್ ಕಂಬಳಿ, ಸಿದ್ಧಾರ್ಥ ಕೆ, ರಾಜಾರಾಂ, ಶಂಕರ್ ನಟಿಸಿದ್ದಾರೆ.
ಜನ ಗಣ ಮನ: ಆಯೇಷಾ ಅಭಿನಯದ ಈ ಚಿತ್ರಕ್ಕೆ ಶಶಿಕಾಂತ್ ಆನೇಕಲ್ ನಿರ್ದೇಶನ ಮಾಡಿದ್ದಾರೆ. ಕೋರಾ ನಾಗೇಶ್ವರ ರಾವ್ ಕಥೆ ಬರೆದಿದ್ದಾರೆ. ಗೌರಿವೆಂಕಟೇಶ್ ಅವರ ಛಾಯಾಗ್ರಹಣವಿದೆ. ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಡಿಫರೆಂಟ್ ಡ್ಯಾನಿ, ಚಂದ್ರು ಅವರ ಸಾಹಸವಿದೆ.ತಾರಾಗಣದಲ್ಲಿ ರವಿಕಾಳೆ, ರಾಮಕೃಷ್ಣ, ಕಾವೇರಪ್ಪ, ಮಾನಸ್ವಿ, ಕಾಮನ, ರಘುನಾಥ್ ಯಾದವ್, ಎ.ಕೆ.ರಾಮು, ಸೌಂದರ್ಯ, ಕುಮುದ, ಸೌಮ್ಯ ನಟಿಸಿದ್ದಾರೆ.
ಗೂಗಲ್: ವಿ.ನಾಗೇಂದ್ರ ಪ್ರಸಾದ್ ನಿರ್ದೇಶನದ “ಗೂಗಲ್’ ಚಿತ್ರ ಕೂಡಾ ಈ ವಾರ ತೆರೆಕಾಣ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಶುಭಾ ಪೂಂಜಾ ನಾಯಕಿ. ಚಿತ್ರ ನೈಜ ಘಟನೆಯಾಧರಿತ ಕಥೆಯನ್ನಿಟ್ಟುಕೊಂಡು ಮಾಡಲಾಗಿದೆಯಂತೆ. ಚಿತ್ರದ ನಿರ್ಮಾಣದಲ್ಲೂ ನಾಗೇಂದ್ರ ಪ್ರಸಾದ್ ಕೈ ಜೋಡಿಸಿದ್ದು, ಇವರಿಗೆ ಅಶ್ವತ್ಥ್ ನಾರಾಯಣ ಹಾಗೂ ಶ್ರೀಧರ್ ಸಾಥ್ ನೀಡಿದ್ದಾರೆ.