ಹಿಮಾಚಲ ಪ್ರದೇಶ: ಶಾಲೆಗಳು ತೆರೆದ ಕೆಲದಿನಗಳಲ್ಲೇ 67 ವಿದ್ಯಾರ್ಥಿಗಳಿಗೆ ಮತ್ತು 25 ಶಿಕ್ಷಕರಿಗೆ ಕೋವಿಡ್ ವೈರಸ್ ತಗುಲಿದ ಘಟನೆ ಮಂಡಿ ಜಿಲ್ಲೆಯಯಲ್ಲಿ ನಡೆದಿದೆ.
ಮಂಡಿ ಜಿಲ್ಲೆಯ ಸೋಜಾ ಗ್ರಾಮದಲ್ಲಿರುವ ಟಿಬೇಟಿಯನ್ ಮಕ್ಕಳ ಗ್ರಾಮ(ಟಿಸಿವಿ) ಎಂಬ ಶಾಲೆಯಲ್ಲಿ 47 ಬಾಲಕಿಯರು ಮತ್ತು 20 ಬಾಲಕರು ಸೇರಿ ಒಟ್ಟು 67 ಮಂದಿ ವಿದ್ಯಾರ್ಥಿಗಳಿಗೆ ಸೊಂಕು ದೃಢವಾಗಿದೆ.
ಶಾಲಾ ಆಡಳಿತ ಮಂಡಳಿ, ಹೊರರಾಜ್ಯಗಳಿಂದ ಬರುವ ವಿದ್ಯಾರ್ಥಿಗಳನ್ನು ರ್ಯಾಂಡಮ್ ಪರೀಕ್ಷೆಗೊಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದ್ದು, ಕೂಡಲೇ ಕೋವಿಡ್ ಹಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಅರುಣಾಚಲಪ್ರದೇಶ, ಲಡಾಕ್, ಮಹಾರಾಷ್ಟ್ರ, ನೇಪಾಳ ಮುಂತಾದ ಕಡೆಯಿಂದ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಕೋವಿಡ್ ವೈರಸ್ ತಗುಲಿದ್ದು, ಕೆಲವರನ್ನು ಹೋಂ ಐಸೋಲೇಶನ್ ಗೆ ಒಳಪಡಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಎಲ್ಲೂ ಕೋವಿಡ್ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡ ಹೊರತಾಗಿಯೂ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಎಡೆಮಾಡಿದೆ. ಈ ಕಾರಣದಿಂದ ಹಿಮಾಚಲ ಸರ್ಕಾರ ಪ್ರತಿನಿತ್ಯದ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು 6 ಸಾವಿರಕ್ಕೆ ಏರಿಕೆ ಮಾಡಿದೆ.