ಚೆನ್ನೈ: 66ನೇ ಯಮಾಹಾ ಫ್ಯಾಸಿನೋ ಫಿಲ್ಮ್ ಫೇರ್ ಅವಾರ್ಡ್‌ಸ್ ಸೌತ್, ದಕ್ಷಿಣ ಭಾರತದ ಬೆಳ್ಳಿಪರದೆಯ ದಿಗ್ಗಜರಿಗೆ ಪ್ರಶಸ್ತಿ ಪ್ರದಾನ ಮಾಡಲು ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ತನ್ನ 66ನೆ ಆವೃತ್ತಿಯನ್ನು ಗುರುವಾರ ಆಯೋಜಿಸಿತ್ತು.
ಸಮಾರಂಭದಲ್ಲಿ ಕನ್ನಡ, ತಮಿಳು, ಮಲಯಾಳಂ, ತೆಲುಗು ಸೇರಿದಂತೆ ದಕ್ಷಿಣ ಭಾರತದ ನಟ, ನಟಿ ಹಾಗೂ ನಿರ್ಮಾಪಕರಿಗೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅರವಿಂದ್ ಸ್ವಾಮಿ, ಧನುಷ್, ಜಯಂ ರವಿ, ವಿಜಯ್ ಸೇತುಪತಿ, ಯಶ್ ಅತ್ಯುತ್ತಮ ನಟ ಹಾಗೂ ಶ್ರುತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ಈ ಕಾರ್ಯಕ್ರಮವು “ವಿಜಯ್ ಟಿವಿ”(ತಮಿಳು), ಮಾ ಟಿವಿ(ತೆಲುಗು), ಸ್ಟಾರ್ ಸುವರ್ಣ(ಕನ್ನಡ), ಹಾಗೂ ಏಷ್ಯಾನೆಟ್(ಮಲಯಾಳಂ)ನಲ್ಲಿ ಪ್ರಸಾರವಾಗಲಿದೆ.
ಕನ್ನಡ
ಅತ್ಯುತ್ತಮ ಚಲನಚಿತ್ರ – ಕೆ ಜಿ ಎಫ್
ಅತ್ಯುತ್ತಮ ನಿರ್ದೇಶಕ – ಮನ್ಸೋರೆ(ನಾತಿಚರಾಮಿ)
ಅತ್ಯುತ್ತಮ ನಟ-ನಾಯಕ ಪಾತ್ರದಲ್ಲಿ(ಪ್ರಸಿದ್ಧ) – ಯಶ್(ಕೆ ಜಿ ಎಫ್)
ಅತ್ಯುತ್ತಮ ನಟ-ವಿಮಶರ್ಕರು – ಸತೀಶ್ ನೀನಾಸಮ್(ಅಯೋಗ್ಯ)
ಅತ್ಯುತ್ತಮ ನಟಿ-ನಾಯಕಿ ಪಾತ್ರದಲ್ಲಿ(ಪ್ರಸಿದ್ಧ) – ಮಾನ್ವಿತಾ ಕಾಮತ್(ಟಗರು)
ಅತ್ಯುತ್ತಮ ನಟಿ-ವಿಮರ್ಶಕರು – ಶೃತಿ ಹರಿಹರನ್(ನಾತಿಚರಾಮಿ)
ಅತ್ಯುತ್ತಮ ನಟ-ಪೋಷಕ ಪಾತ್ರದಲ್ಲಿ – ಧನಂಜಯ(ಟಗರು)
ಅತ್ಯುತ್ತಮ ನಟಿ-ಪೋಷಕ ಪಾತ್ರದಲ್ಲಿ – ಶರಣ್ಯ(ನಾತಿಚರಾಮಿ)
ಆತ್ಯುತ್ತಮ ಹಿನ್ನೆಲೆ ಗಾಯಕ -ಸಂಜಿತ್ ಹೆಗ್ಡೆ-ಶಾಕುಂತಲೆ ಸಿಕ್ಕಳು(ನಡುವೆ ಅಂತರವಿರಲಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಬಿಂಧುಮಾಲಿನಿ-ಭಾವಲೋಕದ(ನಾತಿಚರಾಮಿ)
ಅತ್ಯುತ್ತಮ ಸಾಹಿತ್ಯ – ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿ-ಸಕ್ಕರೆಯ ಪಾಕದಲಿ(ಹಸಿರು ರಿಬ್ಬನ್)
ಅತ್ಯುತ್ತಮ ಮ್ಯೂಸಿಕ್ ಆಲ್ಬಮ್ -ವಾಸುಕಿ ವೈಭವ್(ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು, ಕೊಡುಗೆ:ರಾಮಣ್ಣ ರೈ)
ತಮಿಳು
ಅತ್ಯುತ್ತಮ ಚಲನಚಿತ್ರ – ಪರಿಯೇರುಮ್ ಪೆರುಮಾಳ್
ಅತ್ಯುತ್ತಮ ನಿರ್ದೇಶಕ – ರಾಮ್ ಕುಮಾರ್(ರಾಟ್ಚಸನ್)
ಅತ್ಯುತ್ತಮ ನಟ-ನಾಯಕ ಪಾತ್ರದಲ್ಲಿ(ಪ್ರಸಿದ್ಧ) – ಧನುಷ್(ವಡ ಚೆನ್ನೈ), ವಿಜಯ್ ಸೇತುಪತಿ(’96)
ಅತ್ಯುತ್ತಮ ನಟ-ವಿಮಶರ್ಕರು – ಅರವಿಂದ್ ಸ್ವಾಮಿ(ಚೆಕ್ಕ ಸಿವಂದ ವಾನಮ್)
ಅತ್ಯುತ್ತಮ ನಟಿ-ನಾಯಕಿ ಪಾತ್ರದಲ್ಲಿ(ಪ್ರಸಿದ್ಧ) – ತ್ರಿಶಾ(’96)
ಅತ್ಯುತ್ತಮ ನಟಿ-ವಿಮರ್ಶಕರು – ಐಶ್ವರ್ಯಾ ರಾಜೇಶ್(ಕನಾ)
ಅತ್ಯುತ್ತಮ ನಟ-ಪೋಷಕ ಪಾತ್ರದಲ್ಲಿ – ಸತ್ಯರಾಜ್(ಕನಾ)
ಅತ್ಯುತ್ತಮ ನಟಿ-ಪೋಷಕ ಪಾತ್ರದಲ್ಲಿ – ಶರಣ್ಯ ಪೊನ್ವಣ್ಣನ್(ಕೋಲಮಾವು ಕೋಕಿಲ)
ಅತ್ಯುತ್ತಮ ಮ್ಯೂಸಿಕ್ ಆಲ್ಬಮ್ – ಗೋವಿಂದ್ ವಸಂತ(’96)
ಆತ್ಯುತ್ತಮ ಹಿನ್ನೆಲೆ ಗಾಯಕ – ಸಿದ್ ಶ್ರೀರಾಮ್(ಹೇ ಪೆಣ್ಣೇ-ಪ್ಯಾರ್ ಪ್ರೇಮ ಕಾದಲ್)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಚಿನ್ಮು(ಕಾದಲೇ ಕಾದಲೇ-’96)
ಅತ್ಯುತ್ತಮ ಸಾಹಿತ್ಯ – ಕಾರ್ತಿಕ ನೇತಾ(ಕಾದಲೇ ಕಾದಲೇ-’96)
ತೆಲುಗು
ಅತ್ಯುತ್ತಮ ಚಲನಚಿತ್ರ – ಮಹಾನಟಿ
ಅತ್ಯುತ್ತಮ ನಿರ್ದೇಶಕ – ನಾಗ್ ಅಶ್ವಿನ್(ಮಹಾನಟಿ)
ಅತ್ಯುತ್ತಮ ನಟ-ನಾಯಕ ಪಾತ್ರದಲ್ಲಿ(ಪ್ರಸಿದ್ಧ) – ರಾಮ್ ಚರಣ್(ರಂಗಸ್ಥಲಂ)
ಅತ್ಯುತ್ತಮ ನಟ-ವಿಮಶರ್ಕರು – ದುಲ್ಖೇರ್ ಸಲ್ಮಾನ್(ಮಹಾನಟಿ)
ಅತ್ಯುತ್ತಮ ನಟಿ-ನಾಯಕಿ ಪಾತ್ರದಲ್ಲಿ(ಪ್ರಸಿದ್ಧ) – ಕೀರ್ತಿ ಸುರೇಶ್(ಮಹಾನಟಿ)
ಅತ್ಯುತ್ತಮ ನಟಿ-“ವಿಮರ್ಶಕರು – ರಶ್ಮಿಕಾ ಮಂದಣ್ಣ(ಗೀತಾ ಗೋವಿಂದಮ್)
ಅತ್ಯುತ್ತಮ ನಟ-ಪೋಷಕ ಪಾತ್ರದಲ್ಲಿ – ಜಗಪತಿ ಬಾಬು(ಅರಂದ ಸಮೇತ “ವೀರರಾಘವ)
ಅತ್ಯುತ್ತಮ ನಟಿ-ಪೋಷಕ ಪಾತ್ರದಲ್ಲಿ – ಅನಸೂಯ ಭರದ್ವಾಜ್(ರಂಗಸ್ಥಲಂ)
ಅತ್ಯುತ್ತಮ ಮ್ಯೂಸಿಕ್ ಆಲ್ಬಮ್ -ದೇವಿ ಶ್ರೀ ಪ್ರಸಾದ್(ರಂಗಸ್ಥಲಂ)
ಅತ್ಯುತ್ತಮ ಸಾಹಿತ್ಯ – ಎಂತಾ ಸಕ್ಕಗುನ್ನಾವೇ(ರಂಗಸ್ಥಲಂ)
ಆತ್ಯುತ್ತಮ ಹಿನ್ನೆಲೆ ಗಾಯಕ – ಸಿದ್ ಶ್ರೀರಾಮ್-ಇಂಕೇಮ್ ಇಂಕೇಮ್ ಇಂಕೇಮ್ ಕಾವಾಲೇ(ಗೀತಾ ಗೋವಿಂದಮ್)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಶ್ರೇಯಾ ಘೋಷಾಲ್- ಮಂದಾರ ಮಂದಾರ(ಭಾಗಮತೀ)
ಮಲಯಾಳಂ
ಅತ್ಯುತ್ತಮ ಚಲನಚಿತ್ರ – ಸೂಡಾನೀ ಫ್ರಮ್ ನೈಜೀರಿಯಾ
ಅತ್ಯುತ್ತಮ ನಿರ್ದೇಶಕ – ಲಿಜೊ ಜೋಸ್ ಪೆಲ್ಲಿಸೇರಿ(ಈ.ಮಾ. ಯೌ)
ಅತ್ಯುತ್ತಮ ನಟ-ನಾಯಕ ಪಾತ್ರದಲ್ಲಿ(ಪ್ರಸಿದ್ಧ) – ಜೋಜು ಜಾರ್ಜ್(ಜೋಸೆಫ್)
ಅತ್ಯುತ್ತಮ ನಟ-ವಿಮಶರ್ಕರು – ಸೌಬಿನ್ ಶಾಹಿರ್(ಸೂಡಾನೀ ಫ್ರಮ್ ನೈಜೀರಿಯಾ)
ಅತ್ಯುತ್ತಮ ನಟಿ-ನಾಯಕಿ ಪಾತ್ರದಲ್ಲಿ(ಪ್ರಸಿದ್ಧ) – ಮಂಜು ವಾರಿಯರ್(ಆಮಿ)
ಅತ್ಯುತ್ತಮ ನಟಿ-ವಿಮರ್ಶಕರು – ನಿನಿಷಾ ಸಜಯನ್(ಈಡಾ)
ಅತ್ಯುತ್ತಮ ನಟ-ಪೋಷಕ ಪಾತ್ರದಲ್ಲಿ – “ನಾಯಕನ್(ಈ.ಮಾ.ಯೌ)
ಅತ್ಯುತ್ತಮ ನಟಿ-ಪೋಷಕ ಪಾತ್ರದಲ್ಲಿ – ಸಾವಿತ್ರಿ ಶ್ರೀಧರನ್(ಸೂಡಾನೀ ಫ್ರಮ್ ನೈಜೀರಿಯಾ)
ಅತ್ಯುತ್ತಮ ಮ್ಯೂಸಿಕ್ ಆಲ್ಬಮ್ – ಕೈಲಾಸ್ ಮೆನನ್(ತೀವಂಡಿ)
ಅತ್ಯುತ್ತಮ ಸಾಹಿತ್ಯ – ಬಿ.ಕೆ. ಹರಿನಾರಾಯಣನ್-ಜೀವಂಶಮಾ(ತೀವಂಡಿ)
ಆತ್ಯುತ್ತಮ ಹಿನ್ನೆಲೆ ಗಾಯಕ -ವಿಜಯ್ ಏಸುದಾಸ್(ಪೋಮುತ್ತೋಳೆ(ಜೋಸೆಫ್)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಆನ್ನಿ ಅಮೈ-ಆರಾರೊ(ಕೂಡೆ)
ಡೆಬ್ಯು
ಅತ್ಯುತ್ತಮ ಡೆಬ್ಯು_(ಸ್ತ್ರೀ)-ರೈಜಾ ವಿಲ್ಸನ್(ಪ್ಯಾರ್ ಪ್ರೇಮ ಕಾದಲ್-ತಮಿಳು)
ಸಾನಿಯಾ ಐಯ್ಯಪ್ಪನ್(ಕ್ವೀನ್-ಮಲಯಾಳಂ)
ತಾಂತ್ರಿಕ ಪ್ರಶಸ್ತಿಗಳು:
ಅತ್ಯುತ್ತಮ ಸಿನಿಮಾ ಛಾಯಾಗ್ರಹಣ; ಆರ್. ರತ್ನವೇಲು(ರಂಗಸ್ಥಲಂ)
ಅತ್ಯುತ್ತಮ ಕೋರಿಯೋಗ್ರಫಿ:ಪ್ರಭು ದೇವ, ಜಾನಿ(ರೌಡಿ ಬೇಬಿ-ಮಾರಿ2)
ಜೀವಿತಾವಧಿ ಸಾಧನೆ-ಹರಿಹರನ್