ಮುಂಬಯಿ: ಸಮಿತಿಯ ಸ್ವಯಂ ಸೇವಕರು ರಾತ್ರಿ ಹಗಲೆನ್ನದೆ ಮುಂಬಯಿ ಪರಿಸರದ ವಿವಿಧ ಸಭಾಗೃಹ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ದುಡಿದು ಸಿಕ್ಕಿದ ಹಣದಲ್ಲಿ ಒಂದು ಅಂಶವನ್ನು ಶಾಲಾ ಮಕ್ಕಳ ಟಿಪ್ಪಣಿ ಪುಸ್ತಕ ಮತ್ತು ಇನ್ನಿತರ ಶಾಲಾ ಪರಿಕರಗಳನ್ನು ಸೊಸೈಟಿಯ ಮುಖಾಂತರ ಪ್ರತೀ ವರ್ಷ ವಿತರಿಸುತ್ತಿರುವುದು ಅಭಿನಂದನೀಯ ಎಂದು ಜೆವಿಎಂ ಸ್ಪೇಸಸ್ ಇದರ ಮುಖ್ಯ ನಿರ್ದೇಶಕ ಜೀತು ಬಾಯಿ ಮೆಹ್ತಾ ಅವರು ನುಡಿದರು.
ಜೂ. 29ರಂದು ಪೋರ್ಟ್ ಬೋರಾಬಜಾನ್‌ನ ಆರ್ಯ ಸಮಾಜದ ಸಭಾಂಗಣದಲ್ಲಿ ಕೊಲಬಾ ವೆಲ್ಫೆàರ್ ಸೊಸೈಟಿಯ 66ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಹಾನಗರ ಪಾಲಿಕೆ ಮತ್ತು ರಾತ್ರಿ ಶಾಲಾ ಮಕ್ಕಳಿಗೆ ಟಿಪ್ಪಣಿ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳು ಶಿಕ್ಷಣವನ್ನು ಅಚ್ಚುಕಟ್ಟಾಗಿ ಪಡೆದು ಉತ್ತಮ ನೌಕರಿ ಪಡೆದು ಮುಂದೆ ಇದೇ ಸಂಸ್ಥೆಗೆ ಆಧಾರ ಸ್ತಂಭವಾಗಿ ಇತರ ಮಕ್ಕಳಿಗೆ ಕಲಿಯಲು ಅವಕಾಶ ನೀಡಬೇಕು ಎಂದು ನೆರೆದ ಮಕ್ಕಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.
ಚೆಂಬೂರು ಕರ್ನಾಟಕ ಹೈಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಸುರೇಶ್ ಸುವರ್ಣ ಅವರು ಮಾತನಾಡಿ, ಸಂಸ್ಥೆಯು ಬೆಳೆದು ಬಂದ ದಾರಿ ಹಾಗೂ ಅವರ ಕಾರ್ಯಕಲಾಪಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ, ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಉದ್ಯಮಿ ಪ್ರಶಾಂತ್ ಅಮೀನ್, ನ್ಯಾಯವಾದಿ ವಿನೀತ್ ಕಾಂಚನ್, ಆರ್ಯ ಸಮಾಜದ ಟ್ರಸ್ಟಿ ಟಿ. ಆರ್. ಶೆಟ್ಟಿ, ಎಂ. ಸಿ. ಎಚ್. ಎಲ್ ಥಾಣೆಯ ಪ್ರಬಂಧಕ ಸುಮಿತ್ ಭಾಯಿ ಗುಡ್ಕ, ಕನ್ನಡ ಭವನ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಎಲ್. ರಾಧಾಕೃಷ್ಣನ್, ಉದ್ಯಮಿ ಇಜ್ವಾನ್ ಇಸ್ಮೈಲ್ ಖಾನ್, ಗಣೇಶ್ ಬಾಯಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು.
ಸಂಸ್ಥೆಯ ಪದಾಧಿಕಾರಿಗಳು ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಮುಖ್ಯ ಟ್ರಸ್ಟಿ ಜಿ. ಎನ್. ಕುಂದರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ವೈ. ಪಿ. ಬಂಗೇರ ವಂದಿಸಿದರು. ವಿ. ಎಸ್. ಶಿರ್ಕೆ, ಕೆ. ಎ. ಸಾಲ್ಯಾನ್, ಪಿ. ಜಿ. ಸಾಲ್ಯಾನ್, ಆರ್. ಎಲ್. ಬಂಗೇರ, ಎನ್. ಬಿ. ಹೆಜ್ಮಾಡಿ, ರಘುನಾಥ ದೇವಾಡಿಗ, ವೈ. ಜಿ. ಜತಾಪRರ್, ಎಂ. ಎಣ. ಕೇವೆr, ಜೆ. ಪಿ. ಜೋಗ್, ಜಿ. ಸಿ. ಕುಕ್ಯಾನ್ ಮೊದಲಾದವರು ಸಹಕರಿಸಿದರು. ಪರಿಸರದ ಉದ್ಯಮಿಗಳು, ಶಾಲಾ ಶಿಕ್ಷಕರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.