ಗ್ವಾಟೆಮಾಲಾ ನಗರ : ಮೆಕ್ಸಿಕೋ ಗಡಿ ಸಮೀಪದ ಪಶ್ಚಿಮ ಗ್ವಾಟೆಮಾಲಾದಲ್ಲಿ ಇಂದು 6.6 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿದ್ದು ಅನೇಕ ನಗರಗಳು ನಡುಗಿವೆ ಮತ್ತು ಒಬ್ಬ ವ್ಯಕ್ತಿ ಗಾಯಗೊಂಡಿರುವ ವರದಿ ಈ ತನಕ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ತನಕ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.
ಸ್ಥಳೀಯ ಕಾಲಮಾನ ನಸುಕಿನ 1.29ರ ಹೊತ್ತಿಗೆ ಸಂಭವಿಸಿದ ಭೂಕಂಪವು ಗ್ವಾಟೆಮಾಲಾ ನಗರದಿಂದ 156 ಕಿ.ಮೀ. ಪಶ್ಚಿಮದ ಸ್ಯಾನ್ ಮಾರ್ಕೋಸ್‌ನಲ್ಲಿ ಕೇಂದ್ರೀಕೃತವಾಗಿತ್ತು ಎಂದು ಭೂಕಂಪ ಮಾಪನ ಕೇಂದ್ರ ತಿಳಿಸಿದೆ. ಅಮೆರಿಕದ ಭೂಗರ್ಭ ಸರ್ವೇಕ್ಷಣ ಇಲಾಖೆಯ ಪ್ರಕಾರ ಭೂಕಂಪದ ತೀವ್ರತೆ 6.9 ಅಂಕಗಳಲ್ಲಿ ದಾಖಲಾಗಿದೆ.
ಅಧ್ಯಕ್ಷ ಜಮ್ಮಿ ಮೊರೇಲ್ಸ್ ಅವರು ಟ್ವಿಟರ್‌ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದು, “ಶಾಂತರಾಗಿರಿ, ಸಂಭಾವ್ಯ ಪಶ್ಚಾತ್ ಕಂಪನಗಳ ಬಗ್ಗೆ ಜಾಗೃತರಾಗಿರಿ’ ಎಂದು ಕರೆ ನೀಡಿದ್ದಾರೆ.
ಈ ಹಿಂದೆ 2012 ಮತ್ತು 2014ರಲ್ಲಿ ಸ್ಯಾನ್ ಮಾರ್ಕೋಸ್‌ನಲ್ಲಿ ಭೂಕಂಪ ಸಂಭವಿಸಿದ್ದು ಡಜನ್‌ಗಟ್ಟಲೆ ಜನರು ಮೃಪಟ್ಟಿದ್ದರು.