Advertisement

Earthquakes: ಹಿಮಾಲಯದ ತಪ್ಪಲಲ್ಲಿ ಅತೀ ಹೆಚ್ಚು ಭೂಕಂಪ ಸಂಭವಿಸುವುದೇಕೆ?

11:14 PM Jan 07, 2025 | Team Udayavani |

ಹೊಸದಿಲ್ಲಿ: ಹಿಮಾಲಯದ ತಪ್ಪಲು ಭೂಕಂಪನ ಸಕ್ರಿಯ ವಲಯವಾಗಿದೆ. ಭೂಗರ್ಭದಲ್ಲಿ ಟೆಕ್ಟೋನಿಕ್‌ ಪ್ಲೇಟ್‌ಗಳು ಪರಸ್ಪರ ಸಂಧಿಸುವ ಪ್ರದೇಶದಲ್ಲೇ ನೇಪಾಲವಿದೆ. ಇಲ್ಲಿ ಇಂಡಿಯನ್‌ ಮತ್ತು ಯುರೇಶಿಯನ್‌ ಭೂಪದರಗಳು (ಟೆಕ್ಟೋನಿಕ್‌ ಪ್ಲೇಟ್‌) ಪರಸ್ಪರ ಢಿಕ್ಕಿ ಹೊಡೆಯುವ ಕಾರಣ, ಇಲ್ಲಿ ಭೂಕಂಪನಗಳು ಹೆಚ್ಚು ಎಂದು ತಜ್ಞರು ಹೇಳುತ್ತಾರೆ.

Advertisement

ಇಂಡಿಯನ್‌ ಭೂಪದರವು ಮಂದವಾಗಿ ಉತ್ತರದ ಕಡೆಗೆ ಸಂಚರಿಸುತ್ತಿರುತ್ತದೆ. ಅದು ಯುರೇಶಿಯನ್‌ ಭೂಪದರಕ್ಕೆ ಢಿಕ್ಕಿಯಾದ ಕೂಡಲೇ, ಘರ್ಷಣೆ ಉಂಟಾಗುತ್ತದೆ. ಇದರಿಂದ ಭೂಗರ್ಭದಲ್ಲಿ ಅತಿಯಾದ ಒತ್ತಡ ಸೃಷ್ಟಿಯಾಗಿ ಭೂಮಿಯು ಕಂಪಿಸುತ್ತದೆ. ಕ್ರಿ.ಶ.12ನೇ ಶತಮಾನದಿಂದ ಈವರೆಗೆ ಈ ಪ್ರದೇಶದಲ್ಲಿ 20ಕ್ಕೂ ಅಧಿಕ ಪ್ರಬಲ ಭೂಕಂಪ ಸಂಭವಿಸಿವೆ.

ಹಿಮಾಲಯ ಪ್ರದೇಶದಲ್ಲಿನ ಇತ್ತೀಚೆಗಿನ ಭೂಕಂಪಗಳು

1988: ಕಠ್ಮಂಡು, ಬಿಹಾರದಲ್ಲಿ 6.9 ತೀವ್ರತೆ ಭೂಕಂಪ- 1,091 ಸಾವು

2011: ನೇಪಾಲ-ಭಾರತದ ಗಡಿಯಲ್ಲಿ 6.9 ತೀವ್ರತೆ ಭೂಕಂಪ- 111 ಸಾವು

Advertisement

2015: ಟಿಬೆಟ್‌ನಲ್ಲಿ 7.8 ತೀವ್ರತೆ ಕಂಪನ- 9,000 ಸಾವು

2015: ಡೋಲಖ್‌ನಲ್ಲಿ 7.3 ತೀವ್ರತೆ ಕಂಪನ- 213 ಸಾವು

2022: ದೋತಿಯಲ್ಲಿ 5.7 ತೀವ್ರತೆ ಕಂಪನ- 6 ಸಾವು

Advertisement

Udayavani is now on Telegram. Click here to join our channel and stay updated with the latest news.

Next