ಹುಬ್ಬಳ್ಳಿ: ಕೊರೊನಾ 2ನೇ ಅಲೆ ಗ್ರಾಮೀಣ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರುತ್ತಿದ್ದು, ಇದನ್ನು ತಡೆಗಟ್ಟಲು ಜಿಲ್ಲೆಯಲ್ಲಿ 66 ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಗ್ರಾಮೀಣ ಭಾಗದಲ್ಲಿ 2,133 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಕಿಮ್ಸ್ ಆವರಣದಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ತಂಡದ ವಾಹನಗಳಿಗೆ ಸೋಮವಾರ ಹಸಿರುನಿಶಾನೆ ತೋರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಿರ್ಮಿಸಲಾದ 66 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 11 ನಗರ ಪ್ರದೇಶ ಹಾಗೂ 55 ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. 2133 ಬೆಡ್‌ಗಳಲ್ಲಿ 623 ಕೋವಿಡ್ ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ ಕೊರತೆ ಇತ್ತು. ಸರಕಾರದ ನಿರ್ದೇಶನದಂತೆ ಇವರನ್ನು ನೇರವಾಗಿ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗಿದ್ದು, ಅಗತ್ಯವಿರುವ ಕೋವಿಡ್ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ. ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಜಿಲ್ಲೆಯ 7 ತಾಲೂಕುಗಳಿಗೆ ವೈದ್ಯರ ತಂಡ ನೇಮಿಸಲಾಗಿದೆ. ಕಿಮ್ಸ್‌ನಲ್ಲಿನ ಹೆಚ್ಚುವರಿ ವೈದ್ಯರು ಹಾಗೂ ಎಂಬಿಬಿಎಸ್ ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವೈದ್ಯರನ್ನು ತಂಡದಲ್ಲಿ ನಿಯೋಜಿಸಲಾಗಿದೆ. ಪ್ರತಿ ತಂಡಕ್ಕೆ ವಾಹನ ನೀಡಲಾಗಿದೆ. ಇವರು ಪ್ರಾಥಮಿಕ ಆರೋಗ್ಯ ಕೇಂದ್ರ, ಕೋವಿಡ್ ಕೇರ್ ಹಾಗೂ ಗ್ರಾಮಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ನೀಡುವರು. ಕಿಮ್ಸ್ ಹಾಗೂ ಎಸ್‌ಡಿಎಂನಿಂದ ಇನ್ನೂ ಹೆಚ್ಚಿನ ವೈದ್ಯರನ್ನು ಗ್ರಾಮಗಳಿಗೆ ನಿಯೋಜಿಸಲಾಗುವುದು. ಇದುವರೆಗೆ ಹಳ್ಳಿಗಳಿಂದ 475 ಜನರು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಾಗಿದ್ದಾರೆ ಎಂದರು.
68 ಹಳ್ಳಿಗಳಿಗೆ ವೈದ್ಯರ ತಂಡ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಯಶವಂತ ಮದೀನಕರ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಗ್ರಾಮಗಳ ಜನಸಂಖ್ಯೆ ಆಧಾರಿಸಿ ಆರೋಗ್ಯ ಇಲಾಖೆ ತಾಲೂಕುವಾರು ವೈದ್ಯರ ತಂಡ ನೇಮಿಸಿದೆ. ಇದರಲ್ಲಿ ಇಬ್ಬರು ವೈದ್ಯರು, ಓರ್ವ ಸಹಾಯಕ ಸಿಬ್ಬಂದಿ ಕಾರ್ಯ ನಿರ್ವಹಿಸುವರು. ಇವರು ಅಗತ್ಯ ವೈದ್ಯಕೀಯ ಪರಿಕರ, ಔಷಧಗಳನ್ನು ತಮ್ಮೊಂದಿಗೆ ಒಯ್ಯುತ್ತಾರೆ. ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ತಂಡ ಗ್ರಾಮಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿದೆ. ಜಿಲ್ಲೆಯಲ್ಲಿ 68 ಹಳ್ಳಿಗಳಿಗೆ ಭೇಟಿ ನೀಡಿ 5700 ಕೋವಿಡ್ ಆರ್‌ಟಿಪಿಸಿಆರ್, 2,500 ಕೋವಿಡ್ ರ್ಯಾಟ್ ಪರೀಕ್ಷೆ ನಡೆಸಿದೆ. ಜೊತೆ 9 ಸಾವಿರಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಹಾಗೂ ಔಷಧಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ, ಜಿಲ್ಲಾ ಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ಡಾ| ಬಿ. ಸುಶೀಲ, ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಆಡಳಿತಾಧಿ ಕಾರಿ ರಾಜಶ್ರೀ ಜೈನಾಪುರ, ವೈದ್ಯಕೀಯ ಅ ಧೀಕ್ಷಕ ಡಾ| ಅರುಣಕುಮಾರ ಸಿ., ಉಪ ಅ ಧೀಕ್ಷಕ ಡಾ| ರಾಜಶೇಖರ ದ್ಯಾಬೇರಿ, ಪ್ರಾಂಶುಪಾಲ ಈಶ್ವರ ಹೊಸಮನಿ, ನೋಡಲ್ ಅ ಧಿಕಾರಿ ಲಕ್ಷ್ಮೀಕಾಂತ ಲೋಕರೆ, ಆರ್‌ಸಿಎಒ ಡಾ| ಎಸ್. ಎಂ. ಹೊನಕೇರಿ, ತಾಲೂಕು ವೈದ್ಯಾಧಿ ಕಾರಿ ಆರ್.ಎಸ್. ಹಿತ್ತಲಮನಿ ಮೊದಲಾದವರಿದ್ದರು.