ಲಕ್ನೋ: 6 ಮಕ್ಕಳ ತಂದೆಯೊಬ್ಬ 23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಪುರಿ ಚೌಧರಿ ಗ್ರಾಮದಲ್ಲಿ ನಡೆದಿದೆ.
ಪುರಿ ಚೌಧರಿ ಗ್ರಾಮದ ಹುಸೇನಾಬಾದ್ ಪ್ರದೇಶದಲ್ಲಿ ವಾಸಿಸುವ ನಖೇದ್ ಯಾದವ್ ಕಳೆದ ಕೆಲ ವರ್ಷಗಳಿಂದ, ಪತ್ನಿ ನಿಧನದ ಬಳಿಕ ಒಂಟಿ ಜೀವನವನ್ನು ನಡೆಸುತ್ತಿದ್ದಾರೆ. ತನ್ನ 6 ಹೆಣ್ಣು ಮಕ್ಕಳೊಂದಿಗೆ ವಾಸುತ್ತಿರುವ 65 ವರ್ಷದ ನಖೇಶ್ ಯಾದವ್ ಈಗ ಎಲ್ಲರ ಸಮ್ಮುಖದಲ್ಲಿ 23 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ.
ಇತ್ತೀಚೆಗೆ ವೈಯಕ್ತಿಕ ಕೆಲಸದ ನಿಮಿತ್ತ ರಾಂಚಿಗೆ ಹೋಗುವಾಗ ಅಲ್ಲಿ 23 ವರ್ಷದ ನಂದಿನಿ ಯಾದವ್ ಎಂಬಾಕೆಯ ಪರಿಚಯವಾಗುತ್ತದೆ. ಈ ಪರಿಚಯ ದಿನ ಕಳೆದಂತೆ ಪ್ರೇಮಕ್ಕೆ ತಿರುಗುತ್ತದೆ. ಇಬ್ಬರ ನಡುವಿನ ಪ್ರೇಮಕ್ಕೆ ಮದುವೆಯ ಮುದ್ರೆಯನ್ನು ಒತ್ತುವ ಸಲುವಾಗಿ ಇಬ್ಬರೂ ತನ್ನ ಕುಟುಂಬದವರ ಬಳಿ ಈ ವಿಚಾರವನ್ನು ಹೇಳಿದ ಮೇಲೆ ಊರಿನ ದೇವಸ್ಥಾನದಲ್ಲಿ, ತನ್ನ ಮಕ್ಕಳ, ಕುಟುಂಬಸ್ಥರ ಸಮ್ಮುಖದಲ್ಲಿ 65 ವರ್ಷದ ನಖೇದ್ ಯಾದವ್ 23 ವರ್ಷದ ನಂದಿನಿ ಯಾದವ್ ಅವರನ್ನು ವರಿಸಿದ್ದಾರೆ.
ಜೀವನದಲ್ಲಿ ತುಂಬಾ ಒಂಟಿತನ ಕಾಡಿದ್ದರಿಂದ ಮದುವೆಯಾಗಿದ್ದೇನೆ ಎಂದು ನಖೇದ್ ಯಾದವ್ ಅವರು ತಮ್ಮ ಮದುವೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.