Advertisement
ಸೋನಂ ಕಪೂರ್ ಅಭಿನಯದ ನೀರ್ಜಾಗೆ ಅತ್ಯುತ್ತಮ ಹಿಂದಿ ಚಿತ್ರ ಗೌರವ ಸಂದಿದೆ. ಅಮಿತಾಭ್ ಬಚ್ಚನ್ ಅಭಿನಯದ ಪಿಂಕ್ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರವಾಗಿ ಆಯ್ಕೆಯಾದರೆ,ಮಿನ್ನಾಮಿನಿಂಗು ಚಿತ್ರದ ಅಭಿನಯಕ್ಕಾಗಿ ಸುರಭಿ ಲಕ್ಷ್ಮಿ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ ಹಿಂದಿಯ ಧನಕ್ ಅತ್ಯುತ್ತಮ ಮಕ್ಕಳ ಚಿತ್ರ, ರಾಜೇಶ್ ಮಪುಸ್ಕರ್ (ವೆಂಟಿಲೇಟರ್) ಅತ್ಯುತ್ತಮ ನಿರ್ದೇಶಕ, ಮನೋಜ್ ಜೋಶಿ (ದಶ್‌ಕ್ರಿಯಾ) ಅತ್ಯುತ್ತಮ ಪೋಷಕ ನಟ, ಝಾಯಿರಾ ವಾಸಿಮ್ (ದಂಗಲ್) ಅತ್ಯುತ್ತಮ ಪೋಷಕ ನಟಿ,ಶಿವಾಯ್ ಅತ್ಯುತ್ತಮ ಸ್ಪೆಷಲ್ ಎಫೆಕ್ಟ್, ಸುಂದರ ಅಯ್ಯರ್ ಅತ್ಯುತ್ತಮ ಹಿನ್ನೆಲೆ ಗಾಯಕ, ಎಮಾನ್ ಚಕ್ರವರ್ತಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಕನ್ನಡ, ತುಳು, ಕೊಂಕಣಿ ಚಿತ್ರಗಳು ಸೇರಿ ಈ ಬಾರಿ ಐದು ರಾಷ್ಟ್ರ ಪ್ರಶಸ್ತಿಗಳು ಕರ್ನಾಟಕದ ಪಾಲಾಗಿವೆ. ನಿಖೀಲ್ ಮಂಜು ನಿರ್ದೇಶನದ ರಿಸರ್ವೇಷನ್ ಅತ್ಯುತ್ತಮ ಕನ್ನಡ ಚಿತ್ರವಾಗಿ ಆಯ್ಕೆಯಾಗಿದ್ದು, ಚೇತನ್ ಮುಂಡಾಡಿ ನಿರ್ದೇಶನದ ಮದಿಪುಅತ್ಯುತ್ತಮ ತುಳು ಚಿತ್ರ ಹಾಗೂ ಡಿ ಝರಾ ಝರಾ ಅತ್ಯುತ್ತಮ ಕೊಂಕಣಿ ಚಿತ್ರ ಗೌರವಕ್ಕೆ ಪಾತ್ರವಾಗಿದೆ. ಇನ್ನೊಂದೆಡೆ ಟಿ.ಎಸ್. ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅಲ್ಲಮ ಚಿತ್ರದ ಹಾಡಿಗಾಗಿ ಬಾಪು ಪದ್ಮನಾಭ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಅತ್ಯುತ್ತಮ ಮೇಕಪ್‌ಗಾಗಿ ಎನ್.ಕೆ.ರಾಮಕೃಷ್ಣನ್ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸಿದೆ.