ಸಿಯೋಲ್: ಯುದ್ಧೋನ್ಮಾದ ತೋರುತ್ತಿರುವ ಉತ್ತರಕೊರಿಯಾ ಶನಿವಾರ 6ನೇಯ ಪರಮಾಣು ಪರೀಕ್ಷೆ ನಡೆಸಿದೆ ಎನ್ನಲಾಗಿದ್ದು, ಇದರ ಬೆನ್ನಲ್ಲೇ ಪ್ರಬಲ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಉತ್ತರಕೊರಿಯಾ ಅಧ್ಯಕ್ಷ ಕಿಮ್ ಜೊಂಗ್ ಹೈಡ್ರೋಜನ್ ಬಾಂಬನ್ನು ಖಂಡಾಂತರ್ಗಾಮಿ ಕ್ಷಿಪಣಿಗೆ ಅಳವಡಿಸಿರುವ ಕುರಿತು ಹೇಳಿರುವ ಬೆನ್ನಲ್ಲೇ ಪರೀಕ್ಷೆ ನಡೆಸಲಾಗಿದ್ದು, ಅದು ಭೂಕಂಪನಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಣ್ವಸ್ತ್ರ ಪರೀಕ್ಷೆ ಆತಂಕದ ಬೆನ್ನಲ್ಲೇ ವೈರಿರಾಷ್ಟ್ರ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ರಾಷ್ಟ್ರೀಯ ಭದ್ರತಾ ಸಲಹಾ ಸಮಿತಿಯ ತುರ್ತು ಸಭೆ ಕರೆದಿದ್ದಾರೆ.
ಭೂಕಂಪನ ವಾದ ಬಳಿಕ ದಕ್ಷಿಣ ಕೊರಿಯಾದ ಸೇನೆ ಹೇಳಿಕೆ ನೀಡಿದ್ದು 5.6 ತೀವ್ರತೆಯ ಕೃತಕ ಭೂಕಂಪವನ್ನು ಉತ್ತರಕೊರಿಯಾ ಸೃಷ್ಟಿ ಮಾಡಿದೆ. ಈ ಬಗ್ಗೆ ವಿಶ್ಲೇಷಣೆ ಮಾಡಲಾಗುತ್ತಿದೆ ಎಂದಿದೆ.
ಉತ್ತರಕೊರಿಯಾದ ಸಾಂಗ್‌ಜಿಬಾಗೇಮ್ ನ ಈಶಾನ್ಯ ಪ್ರಾಂತ್ಯದಲ್ಲಿ 5.1 ತೀವ್ರತೆಯ ಕೃತಕ ಭೂಕಂಪನ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ.
2006 ರಿಂದ ಇಲ್ಲಿಯವರೆಗೆ ಉತ್ತರ ಕೋರಿಯಾ 5 ಬಾರಿ ಪರಮಾಣು ಪರೀಕ್ಷೆ ನಡೆಸಿತ್ತು.
ಟ್ರಂಪ್ ಎಚ್ಚರಿಕೆಯ ಹೊರತಾಗಿಯೂ ಉತ್ತರ ಕೊರಿಯಾ ಉದ್ಧಟತನ ತೋರಿ ಅಮೆರಿಕ, ಜಪಾನ್ ಮತ್ತು ದಕ್ಷಿಣಕೊರಿಯಾಕ್ಕೆ ಸವಾಲೆಸೆದಿದೆ.