Advertisement

ಉತ್ತರ ಅಮೆರಿಕ, ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ

06:05 AM Jan 24, 2018 | Harsha Rao |

ಆ್ಯಂಕರೂಜ್‌ (ಅಲಾಸ್ಕಾ): ಉತ್ತರ ಅಮೆರಿಕ ವ್ಯಾಪ್ತಿಯ ಅಲಾಸ್ಕಾದ “ಕೊಡಿಯಾಕ್‌’ ದ್ವೀಪದಲ್ಲಿ ಮಂಗಳವಾರ ಭೂಕಂಪ ಸಂಭವಿಸಿದೆ. ರಿಕ್ಟರ್‌ನಲ್ಲಿ ಪ್ರಮಾಣ 7.9 ಎಂದು ದಾಖಲಾಗಿದೆ. ಆರಂಭದಲ್ಲಿ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿತ್ತಾದರೂ ನಂತರ ಹಿಂಪಡೆಯಲಾಯಿತು. ಅಲಾಸ್ಕಾದ ಗೃಹ ಖಾತೆ ನೀಡಿದ ಮಾಹಿತಿ ಪ್ರಕಾರ ಯಾವುದೇ ಸಾವುನೋವು ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಸ್ಥಳೀಯ ಕಾಲಮಾನ 12.30ರ ಸುಮಾರಿಗೆ ಭಾರಿ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಸುಮಾರು 90 ಸೆಕೆಂಡ್‌ಗಳ ಕಾಲ ಅದರ ಅನುಭವ ಇತ್ತು. ರಾಜಧಾನಿ ಆ್ಯಂಕರೂಜ್‌ನಿಂದ 200 ಮೈಲಿ ನೈಋತ್ಯ ಭಾಗದಲ್ಲಿ ಕೊಡಿಯಾಕ್‌ ದ್ವೀಪವಿದೆ. ಅಮೆರಿಕದ ಭೂಗರ್ಭ ಇಲಾಖೆ ಮೊದಲು ನೀಡಿದ ಎಚ್ಚರಿಕೆಯಲ್ಲಿ ಕಂಪನದ ಪ್ರಮಾಣ 8.2 ಎಂದು ಹೇಳಿತ್ತು. 

Advertisement

ಈ ನಡುವೆ ಇಂಡೋನೇಷ್ಯಾದ ದಕ್ಷಿಣ ಕರಾವಳಿ ಪ್ರದೇಶವಾಗಿರುವ ಜಾವಾದಲ್ಲಿಯೂ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪಕದಲ್ಲಿ ಅದರ ಪ್ರಮಾಣ 6.1 ಎಂದು ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next