Advertisement

ವಾರದಲ್ಲಿ 61 ಕೋಟಿ ಚುನಾವಣಾ ಅಕ್ರಮ

10:35 PM Apr 04, 2023 | Team Udayavani |

ಬೆಂಗಳೂರು: ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡ ಒಂದು ವಾರದಲ್ಲಿ ಚುನಾವಣ ಅಕ್ರಮಗಳ ಮೊತ್ತ 61 ಕೋಟಿ ರೂ. ತಲುಪಿದೆ. ಕಳೆದ 24 ಗಂಟೆಗಳಲ್ಲಿ 13 ಕೋಟಿ ರೂ. ಜಪ್ತಿ ಮಾಡಲಾಗಿದೆ. ವೇಳಾಪಟ್ಟಿ ಪ್ರಕಟಗೊಂಡ ಮಾ. 29ರಿಂದ ಇಲ್ಲಿವರೆಗೆ ಪೊಲೀಸರು, ಅಬಕಾರಿ ಅಧಿಕಾರಿಗಳು ಸೇರಿ ವಿವಿಧ ನೀತಿ ಸಂಹಿತೆ ಜಾರಿ ತಂಡಗಳು ಕಾರ್ಯಾಚರಣೆ ನಡೆಸಿ ನಗದು, ಅಕ್ರಮ ಹಣ, ಮದ್ಯ, ಐಷಾರಾಮಿ ವಸ್ತುಗಳು, ಮಾದಕ ಪದಾರ್ಥಗಳು, ಚಿನ್ನಾಭರಣ ಸೇರಿ ಜಪ್ತಿ ಮಾಡಲಾದ ಅಕ್ರಮಗಳ ಒಟ್ಟು ಮೊತ್ತ 60.99 ಕೋಟಿ ರೂ. ಆಗಿದೆ.

Advertisement

ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತ‌ಂಡಗಳು, ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ 17.36 ಕೋಟಿ ರೂ. ನಗದು, 11.69 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳು, 8.50 ಕೋಟಿ ರೂ. ಮೌಲ್ಯದ 22.691 ಕೆ.ಜಿ. ಬಂಗಾರ, 65.19 ಲಕ್ಷ ಮೌಲ್ಯದ 93.563 ಕೆ.ಜಿ ಬೆಳ್ಳಿ ವಶಪಡಿಸಿಕೊಂಡಿವೆ. 415 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

ಸಿ.ಟಿ. ರವಿ ಭಾವಚಿತ್ರ ಇದ್ದ 500 ಬ್ಯಾಗ್‌ ವಶ
ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಬಿಜೆಪಿ ಚಿಹ್ನೆಯ ಗುರುತಿರುವ ಫುಡ್‌ಕಿಟ್‌ ತುಂಬುವ 500 ಬ್ಯಾಗ್‌ಗಳನ್ನು ಫ್ಲೈಯಿಂಗ್‌ ಸ್ಕ್ವಾಡ್‌ ತಂಡ ಪತ್ತೆ ಹಚ್ಚಿ ವಶಕ್ಕೆ ಪಡೆದಿದೆ. ಮಲ್ಲಂದೂರು ರಸ್ತೆಯಲ್ಲಿರುವ ಟ್ರಾನ್ಸ್‌ಪೊರ್ಟ್‌ ಕಚೇರಿಗೆ ಈ ಬ್ಯಾಗ್‌ಗಳು ಬಂದಿದ್ದವು.

ಮದ್ಯ, ಗಾಂಜಾ ಜಪ್ತಿ
ರಾಮನಗರ: ಜಿಲ್ಲಾದ್ಯಂತ 31.34 ಲೀ. ಮದ್ಯ, 1.640 ಕೆಜಿ ಗಾಂಜಾವನ್ನು ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆ ಕಾರ್ಯಾಚರಣೆ ವೇಳೆ 9,768 ರೂ.ಮೌಲ್ಯದ 23.13 ಲೀ. ಮದ್ಯ ಹಾಗೂ ಪೋಲಿಸ್‌ ಇಲಾಖೆ ಕಾರ್ಯಾಚರಣೆಯಲ್ಲಿ 8,210 ರೂ. ಮೌಲ್ಯದ 8.21 ಲೀ ಮದ್ಯ ವಶಕ್ಕೆ ಪಡೆಯಲಾಗಿದೆ.

4.24 ಲ.ರೂ. ಮಕ್ಕಳ ಬಟ್ಟೆ ವಶ
ಕಲಾದಗಿ: ಗದ್ದನಕೇರಿ ಕ್ರಾಸ್‌ ಬಳಿ ಗೂಡ್ಸ್‌ ವಾಹನ ತಪಾಸಣೆ ಮಾಡಿದಾಗ ಅ ಧಿಕೃತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಚಿಕ್ಕ ಮಕ್ಕಳ ಬಟ್ಟೆಯ ಪ್ಯಾಕ್‌ಗಳನ್ನು ಕಲಾದಗಿ ಪೊಲೀಸರು ಜಪ್ತಿ ಮಾಡಿದ್ದಾರೆ. ಸುಮಾರು 4.24 ಲಕ್ಷ ಮೌಲ್ಯದ ಮಕ್ಕಳ ಬಟ್ಟೆಗಳ 106 ಪ್ಯಾಕ್‌ ಬಂಡಲ್‌ ಪತ್ತೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next