Advertisement

ಮಹಾರಾಷ್ಟ್ರದಲ್ಲಿ ಶೇ. 60ರಷ್ಟು ಹೊಟೇಲ್‌ಗ‌ಳು ಪುನರಾರಂಭ: ಸಿಬ್ಬಂದಿ ಕೊರತೆ ಸವಾಲು

04:17 PM Nov 08, 2020 | keerthan |

ಮುಂಬಯಿ: ರೆಸ್ಟೋರೆಂಟ್‌ಗಳು ಮತ್ತು ಹೊಟೇಲ್‌ಗ‌ಳನ್ನು ಮತ್ತೆ ತೆರೆಯಲು ಅನುಮತಿ ನೀಡಿದ ಒಂದು ತಿಂಗಳ ಅನಂತರ ಪ್ರಸ್ತುತ ಮಹಾರಾಷ್ಟ್ರ ರಾಜ್ಯಾದ್ಯಂತ ಸುಮಾರು 60 ಪ್ರತಿಶತದಷ್ಟು ಸಂಸ್ಥೆಗಳು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಿವೆ.

Advertisement

ಮಹಾರಾಷ್ಟ್ರದಲ್ಲಿ ಅಂದಾಜು 4 ಲಕ್ಷ ಹೊಟೇಲ್‌ ಮತ್ತು ರೆಸ್ಟೋರೆಂಟ್‌ಗಳಿದ್ದು, ಈ ಪೈಕಿ 2.40 ಲಕ್ಷ ಸಂಸ್ಥೆಗಳು ಮಾತ್ರ ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ. ಸೋಂಕು ಹರಡುವ ಭಯ, ಕಾರ್ಮಿಕರ ತೀವ್ರ ಕೊರತೆ, ಸಾರಿಗೆಯ ಕೊರತೆ, ಸಮಯದ ನಿರ್ಬಂಧಗಳು ಹಾಗೂ ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡುವ ನಿರ್ಬಂಧವು ಹೊಟೇಲಿಗರಿಗೆ ತಮ್ಮ ಸಂಸ್ಥೆಗಳನ್ನು ಪುನಃ ತೆರೆಯದಂತೆ ತಡೆಯುತ್ತಿವೆ ಎಂದು ಇಂಡಿಯನ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ (ಆಹಾರ್‌) ಮತ್ತು ಫೆಡರೇಶನ್‌ ಆಫ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್ಸ್‌ ಆಫ್‌ ಇಂಡಿಯಾ (ಎಫ್‌ಎಚ್‌ಆರ್‌ಎಐ) ವಾದಿಸಿವೆ.

ಕೋವಿಡ್‌-19 ಹರಡುವ ಭೀತಿಯಿಂದ ಜನರು ಇನ್ನೂ ಹೊಟೇಲ್‌ಗ‌ಳಿಗೆ ಬರಲು ಹೆದರುತ್ತಿದ್ದಾರೆ. ಇದು ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಎಫ್‌ಎಚ್‌ಆರ್‌ಎಐ ಉಪಾಧ್ಯಕ್ಷ ಗುರ್ಬಾಕ್ಸಿಶ್‌ ಸಿಂಗ್‌ ಕೊಹ್ಲಿ ಹೇಳಿದ್ದಾರೆ.

ಹೊಟೇಲ್‌ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯದಿರುವವರಲ್ಲಿ ಹೆಚ್ಚಿನವರು ಗುತ್ತಿಗೆ ಪಡೆದ ಜಾಗದಲ್ಲಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಅತಿಯಾದ ಬಾಡಿಗೆಯನ್ನು ಪಾವತಿಸುವ ಮೂಲಕ ಈ ರೆಸ್ಟೋರೆಂಟ್‌ಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ, ಅವರಲ್ಲಿ ಹಲವರು ತಮ್ಮ ವ್ಯವಹಾರವನ್ನು ಶಾಶ್ವತವಾಗಿ ಮುಚ್ಚಿದ್ದಾರೆ ಎಂದು ‘ಆಹಾರ್‌’ನ ಅಧ್ಯಕ್ಷ ಶಿವಾನಂದ್‌ ಶೆಟ್ಟಿ ಹೇಳಿದ್ದಾರೆ. ತಮ್ಮ ಸಂಸ್ಥೆಯನ್ನು ತೆರೆಯದ ಹೆಚ್ಚಿನ ಹೊಟೇಲಿಗರು, ಸಿಬ್ಬಂದಿ ಕೊರತೆ ಮತ್ತು ಸಾರಿಗೆ ಕೊರತೆಯು ತಾವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next