Advertisement

ವಿಸ್ಟ್ರಾನ್‌ನಲ್ಲಿ 60 ಸೋಂಕಿತರು

06:08 PM May 05, 2021 | Team Udayavani |

ಕೋಲಾರ: ಪ್ರಸಿದ್ಧ ಐಫೋನ್‌ ತಯಾರಿಕಾ ಘಟಕ ವಿಸ್ಟ್ರಾನ್‌ ಕಂಪನಿಯಲ್ಲಿ 60ಕ್ಕೂಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ತಯಾರಿಕಾ ಘಟಕವನ್ನುಒಂದು ವಾರ ಸ್ಥಗಿತಗೊಳಿಸಿ ಸ್ವತ್ಛತಾ ಕಾರ್ಯಕೈಗೆತ್ತಿಕೊಳ್ಳಲಾಗಿದೆ.ವಿಸ್ಟ್ರಾನ್‌ ಕಂಪನಿಯಲ್ಲಿ ಹಲವರಿಗೆ ಕೊರೊನಾ ಮೆದು ಲಕ್ಷಣಗಳಿರುವಶಂಕೆಯಲ್ಲಿ ಕಾರ್ಮಿಕರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, 60 ಮಂದಿಕಾರ್ಮಿಕರಿಗೆ ಸೋಂಕು ದೃಢವಾಗಿತ್ತು.

Advertisement

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕಾರ್ತಿಕ್‌ ರೆಡ್ಡಿ ಘಟಕಕ್ಕೆ ಭೇಟಿ ನೀಡಿಪರಿಶೀಲಿಸಿ ಇದೇ ಪರಿಸ್ಥಿತಿಯಲ್ಲಿ ಕಂಪನಿಮುಂದುವರಿದರೆ ಮತ್ತಷ್ಟು ಕೊರೊನಾಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ.ಆದ್ದರಿಂದ ಮೇ 1ರಿಂದ 7ರವರೆಗೂಐಫೋನ್‌ ತಯಾರಿಕಾ ಘಟಕದ ಎಲ್ಲಾವಿಭಾಗಗಳನ್ನು ಮುಚ್ಚಲು ಸೂಚಿಸಿದ್ದಾರೆ.

ಇದೀಗ ಆರೋಗ್ಯ ಇಲಾಖೆಯ ತಂಡವುಕಂಪನಿಯ ಇನ್ನಿತರೆ ಕಾರ್ಮಿಕರ ಆರೋಗ್ಯತಪಾಸಣೆ ಮಾಡುತ್ತಿದ್ದು, ಇಡೀಕಾರ್ಖಾನೆಯಲ್ಲಿ ಸ್ವತ್ಛತಾ ಕಾರ್ಯಗಳನ್ನುನಡೆಸಲಾಗುತ್ತಿದೆ. ಮೇ 8ರ ನಂತರ ಕೆಲಸಕ್ಕೆಹಾಜರಾಗಬೇಕಾದರೆ ಪ್ರತಿ ಕಾರ್ಮಿಕರುಕೊರೊನಾ ಸೋಂಕಿನ ತಪಾಸಣಾ ವರದಿತರಬೇಕೆಂದು ಕಂಪನಿಯು ಸೂಚಿಸಿದೆ.

ವೇಮಗಲ್‌ ಮತ್ತು ನರಸಾಪುರಸುತ್ತಮುತ್ತಲಿನ ಹಲವು ಕೈಗಾರಿಕೆಗಳುಕೋವಿಡ್‌ ಮಾರ್ಗಸೂಚಿ ಪ್ರಕಾರನಡೆಯುತ್ತಿದ್ದರೂ, ಯಾವುದೇ ಕಾರ್ಮಿಕಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಯಗಮನಕ್ಕೆ ತರುವಂತೆ ಅಧಿಕಾರಿಗಳು ಕಂಪನಿಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.ಈ ಸಂಬಂಧ ಆರೋಗ್ಯ ಇಲಾಖೆಯಸಿಬ್ಬಂದಿ ಕೈಗಾರಿಕೆಗಳನ್ನು ನಿಯಮಿತವಾಗಿಭೇಟಿ ನೀಡಿ ವರದಿ ನೀಡುವಂತೆಯೂ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next