Advertisement

Ashes: ಕಮಿನ್ಸ್‌ ಗೆ 6 ವಿಕೆಟ್‌; ಆಸೀಸ್‌ಗೆ ಲೀಡ್‌

10:36 PM Jul 07, 2023 | Team Udayavani |

ಲೀಡ್ಸ್‌: ಆ್ಯಶಸ್‌ ಸರಣಿಯ ಹೇಡಿಂಗ್ಲೆ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಸಾಮಾನ್ಯ ಮೊತ್ತಕ್ಕೆ ಹಿಡಿದು ನಿಲ್ಲಿಸಿದ ಖುಷಿ ಇಂಗ್ಲೆಂಡ್‌ಗೆ ಹೆಚ್ಚು ಹೊತ್ತು ಉಳಿಯಲಿಲ್ಲ. ಆಸೀಸ್‌ ಕಪ್ತಾನ ಪ್ಯಾಟ್‌ ಕಮಿನ್ಸ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದೆ.

Advertisement

ಆಸ್ಟ್ರೇಲಿಯದ 263 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಇಂಗ್ಲೆಂಡ್‌ ದ್ವಿತೀಯ ದಿನದ ಆಟದಲ್ಲಿ 237ಕ್ಕೆ ಆಲೌಟ್‌ ಆಯಿತು. ಪ್ಯಾಟ್‌ ಕಮಿನ್ಸ್‌ 6 ವಿಕೆಟ್‌ ಉಡಾಯಿಸಿ ಆಂಗ್ಲರಿಗೆ ತಿರುಗೇಟು ನೀಡಿದರು. 26 ರನ್‌ ಮುನ್ನಡೆ ಗಳಿಸಿದ ಆಸ್ಟ್ರೇಲಿಯ ಒಂದು ವಿಕೆಟಿಗೆ 64 ರನ್‌ ಮಾಡಿ ದಿನದಾಟ ಮುಂದುವರಿಸುತ್ತಿದೆ. ಡೇವಿಡ್‌ ವಾರ್ನರ್‌ ಕೇವಲ ಒಂದು ರನ್‌ ಮಾಡಿ ಔಟಾದರು.

ಆಸೀಸ್‌ ದಾಳಿಯನ್ನು ತಡೆದು ನಿಂತವರು ನಾಯಕ ಬೆನ್‌ ಸ್ಟೋಕ್ಸ್‌ ಮಾತ್ರ. ಅವರು ಆಕ್ರಮಣಕಾರಿ ಆಟವಾಡಿ 108 ಎಸೆತಗಳಿಂದ 80 ರನ್‌ ಬಾರಿಸಿದರು (6 ಬೌಂಡರಿ, 5 ಸಿಕ್ಸರ್‌). ಆರಂಭಕಾರ ಜಾಕ್‌ ಕ್ರಾಲಿ ಗಳಿಕೆ 33 ರನ್‌.

Advertisement

Udayavani is now on Telegram. Click here to join our channel and stay updated with the latest news.

Next