ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ಮಾದಕ ದ್ರವ್ಯ ಜಾಲದ ಬಗೆಗಿನ ತನಿಖೆ ಮಂಗಳವಾರ ಹೊಸತೊಂದು ಮಜಲು ಪ್ರವೇಶ ಮಾಡಿದೆ. “ರಿಪಬ್ಲಿಕ್’ ಇಂಗ್ಲಿಷ್ ಸುದ್ದಿ ವಾಹಿನಿ ವರದಿ ಮಾಡಿರುವ ಪ್ರಕಾರ ಬಾಲಿವುಡ್‌ನ ಆರು ಮಂದಿ ಪ್ರಮುಖ ನಟರಿಗೆ ಮಾದಕ ವಸ್ತು ನಂಟಿನ ಪ್ರಕರಣ ದಿಂದಾಗಿ ತೊಂದರೆ ಎದುರಾಗಲಿದೆ. ಹೀಗಾಗಿ ಅವರೆಲ್ಲರೂ ತಮ್ಮ ವಕೀಲರ ಬಳಿ ತೆರಳಿ ಕಾನೂನು ಸಲಹೆ ಪಡೆದುಕೊಂಡಿದ್ದಾರೆ ಎಂದು ವರದಿ ಮಾಡಿದೆ.
ಸಮನ್ಸ್: ಇದೇ ವೇಳೆ, ಚಿತ್ರನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಮತ್ತು ಪ್ರತಿಭಾ ನಿರ್ವಹಣಾ ಸಂಸ್ಥೆಯ ಮುಖ್ಯ ಕಾರ್ಯ
ನಿರ್ವಹಣಾಧಿಕಾರಿ ಧ್ರುವ ಚಿಟಗೋಪೆಕರ್‌ಗೆ ವಿಚಾರಣೆಗೆ ಬರುವಂತೆ ಎನ್‌ಸಿಬಿ ಸಮನ್ಸ್ ನೀಡಿದೆ.
ನ್ಯಾಯಾಂಗ ಕಸ್ಟಡಿ ವಿಸ್ತರಣೆ: ಮಾದಕ ದ್ರವ್ಯ ಪ್ರಕರಣ ಮತ್ತು ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೆ ಒಳಗಾಗಿ ರುವ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೊವಿಕ್ ಚಕ್ರವರ್ತಿಯ ನ್ಯಾಯಾಂಗ ಬಂಧನ ಆ.6ರ ವರೆಗೆ ವಿಸ್ತರಿಸಲಾಗಿದೆ. ಎನ್ ಸಿಬಿಯ ವಿಶೇಷ ಕೋರ್ಟ್ ಈ ಬಗ್ಗೆ ಆದೇಶ ನೀಡಿದೆ.ಮತ್ತೂಂದೆಡೆ ಜಾಮೀನು ಪಡೆದುಕೊಳ್ಳುವ ನಿಟ್ಟಿನಲ್ಲಿ ರಿಯಾ, ಶೋವಿಕ್ ವಕೀಲರ ಮೂಲಕ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸೆ.9ರಂದು ರಿಯಾರನ್ನು ಎನ್‌ಸಿಬಿ ಬಂಧಿಸಿತ್ತು.
ಅಗತ್ಯ ಬಿದ್ದರೆ ಸಮನ್ಸ್: ಈಗಾಗಲೇ ವರದಿಯಾಗಿರುವ ಪ್ರಕಾರ ಡ್ರಗ್ಸ್ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆ ಅವರನ್ನು ಅಗತ್ಯ ಬಿದ್ದರೆ ಮಾತ್ರ ವಿಚಾರಣೆಗೆ ಕರೆಯಿಸಿಕೊಳ್ಳುವು ದಾಗಿ ಎನ್‌ಸಿಬಿ ತಿಳಿಸಿದೆ.
ಡ್ರಗ್ಸ್ ಕೇಸು:
ಮೇಲ್ಮಟ್ಟದ ಅಧಿಕಾರಿಗೆ ತನಿಖಾಧಿಕಾರಿ: ಮಾದಕ ದ್ರವ್ಯ ಪೂರೈಕೆ ಪ್ರಕರಣಗಳಿಗೆ ಸಂಬಂಧಿಸಿ ದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ಇನ್‌ಸ್ಪೆಕ್ಟರ್ ಹುದ್ದೆಗಿಂತ ಮೇಲ್ಮಟ್ಟದ ಅಧಿಕಾರಿಗಳು ತನಿಖೆ ನಡೆಸಬಹು ದಾಗಿದೆ. ಈ ಬಗ್ಗೆ ಮಂಗಳವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಗಳ ಜತೆಗೆ ಸಮಾಲೋ ಚನೆ ನಡೆಸಿದ ಬಳಿಕ ಮಾದಕ ದ್ರವ್ಯ ವಸ್ತುಗಳ ಪೂರೈಕೆ ತಡೆಕಾಯ್ದೆ ಯನ್ವಯಕೇಂದ್ರ ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳಬಹು ದಾಗಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ಬಾಲಿವುಡ್‌ನಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಪೂರೈಕೆ ಪ್ರಕರಣ ಹಲವು ಖ್ಯಾತನಾಮರನ್ನು ಸಂಕಷ್ಟಕ್ಕೆ ಸಿಲುಕಿಸಿರುವಂತೆಯೇಈಆದೇಶ ಹೊರಬಿದ್ದಿದೆ.