Advertisement

ಅನಂತ್‌ನಾಗ್‌ನಲ್ಲಿ ಸೇನಾಪಡೆಗಳ ಭಾರೀ ಬೇಟೆ: 6 ಉಗ್ರರು ಮಟಾಶ್‌

09:25 AM Nov 23, 2018 | |

 ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸೇನಾ ಪಡೆಗಳು ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಕಾರ್ಯಾಚರಣೆ ನಡೆಸಿದ್ದು , ಭೀಕರ ಗುಂಡಿನ ಕಾಳಗದಲ್ಲಿ 6 ಮಂದಿ ಉಗ್ರರನ್ನು ಸದೆ ಬಡಿಯುವಲ್ಲಿ ಯಶಸ್ವಿಯಾಗಿವೆ.

Advertisement

ಶೇಖೀಪೂರಾ ಮತ್ತು ಬ್ರಿಜ್‌ಬೆಹರಾ ಪ್ರದೇಶಗಳಲ್ಲಿ  ಉಗ್ರರ ಇರುವಿಕೆಯ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು  6 ಮಂದಿಯನ್ನು ಹತ್ಯೆಗೈದಿರುವ ಬಗ್ಗೆ ಸೇನಾ ಮೂಲಗಳು ತಿಳಿಸಿವೆ. 

ಹತ್ಯೆಗೀಡಾದ ಉಗ್ರರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ. 

ಇನ್ನೂ ಕೆಲ ಉಗ್ರರು ಸ್ಥಳದಲ್ಲಿ ರುವ ಶಂಕೆಯ ಹಿನ್ನಲೆಯಲ್ಲಿ  ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next