ಡಿಆರ್‌ಡಿಒದಿಂದ ಅಗತ್ಯ ಮಾರ್ಪಾಡು, ರಾಡಾರ್ ಅಳವಡಿಕೆ
ಗಡಿಗಳಲ್ಲಿ ಕಣ್ಗಾವಲು ಹೊಣೆ
Advertisement
ಹೊಸದಿಲ್ಲಿ: ಇಷ್ಟು ದಿನ ಏರ್‌ಇಂಡಿಯಾ ವಿಮಾನಗಳು ಪ್ರಯಾಣಿಕರ ಸಾಗಾಟಕ್ಕಷ್ಟೇ ಸೀಮಿತವಾಗಿದ್ದವು. ಡಿಆರ್‌ಡಿಒ ತಾಂತ್ರಿಕ ಸ್ಪರ್ಶದಿಂದ ಈ ವಿಮಾನಗಳಿನ್ನು ಗಡಿ ಆಗಸದಲ್ಲೂ ಕಣ್ಗಾವಲು ವಿಮಾನಗಳಾಗಿ ಹಾರಾಟ ನಡೆಸಲಿವೆ!
Related Articles
Advertisement
ಮಾರ್ಪಾಡಿನ ಬಳಿಕ ಯುರೋಪ್‌ಗೆ!ಏರ್‌ಇಂಡಿಯಾದ 6 ವಿಮಾನಗಳ ಅಗತ್ಯ ಮಾರ್ಪಾಡಿನ ಅನಂತರ ಇವುಗಳನ್ನು ಯುರೋಪ್‌ನ ಪ್ರಮುಖ ರಾಡಾರ್ ವಿಮಾನಗಳ ಮೂಲ ಉಪಕರಣ ತಯಾರಕ ಸಂಸ್ಥೆಯೊಂದಕ್ಕೆ ಕಳುಹಿಸಿಕೊಡಲಾಗುತ್ತದೆ. ರಾಡಾರ್ ಸ್ಥಾಪನೆಯ ಕಾರ್ಯ ಅಲ್ಲಿ ನಡೆಯಲಿದೆ. ಚೀನಕ್ಕೆ ಟೆಲಿಕಾಂ ಶಾಕ್
ಲಡಾಖ್ ಬಿಕ್ಕಟ್ಟಿನ ಬೆನ್ನಲ್ಲೇ ಕೇಂದ್ರ ಸರಕಾರ, ಚೀನೀ ಟೆಲಿಕಾಂ ಸೇವೆ ಉತ್ಪನ್ನಗಳ ಸಂಸ್ಥೆಗೆ ಶಾಕ್ ನೀಡಿದೆ. ವಿಶ್ವಾಸಾರ್ಹ ಟೆಲಿಕಾಂ ಉತ್ಪನ್ನ ಮಾರಾಟಗಾರ ಸಂಸ್ಥೆಗಳ ಪಟ್ಟಿ ತಯಾರಿಸಲು ಕೇಂದ್ರ ಮುಂದಾಗಿದೆ. ಈ ಸಂಬಂಧ ಭದ್ರತೆ ಕುರಿತಾದ ಸಂಸದೀಯ ಸಮಿತಿಯು ಟೆಲಿಕಮ್ಯೂ ನಿಕೇಷನ್ಸ್ ವಲಯದ ರಾಷ್ಟ್ರೀಯ ಭದ್ರತಾ ನಿರ್ದೇಶನ ವಿಭಾಗಕ್ಕೆ ಸೂಚನೆ ಹೊರಡಿಸಿದೆ. “ಟೆಲಿಕಾಂ ಸೇವಾ ಪೂರೈಕೆದಾರರ ಅನುಕೂಲಕ್ಕಾಗಿ ವಿಶ್ವಾಸಾರ್ಹ ಮೂಲಗಳ/ ಉತ್ಪನ್ನಗಳ ಪಟ್ಟಿಯನ್ನು ಸರಕಾರ ಘೋಷಿಸಲಿದೆ’ ಎಂದು ತಿಳಿಸಿದೆ.