Advertisement

ರಾಜಸ್ಥಾನ: 2 ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 6 ಸಾವು, ನಾಲ್ವರಿಗೆ ಗಾಯ

11:44 AM Mar 13, 2019 | udayavani editorial |

ಜೈಪುರ : ರಾಜಸ್ಥಾನದಲಿ ನಡೆದಿರುವ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಆರು ಮಂದಿ ಮಡಿದು ಇತರ ನಾಲ್ವರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಪ್ರತಾಪ್‌ಗ್ಢ ಜಿಲ್ಲೆಯ ಪೀಪಲ್‌ ಖುಂಟ್‌ ಪ್ರದೇಶದಲ್ಲಿ ವೇಗವಾಗಿ ಧಾವಿಸುತ್ತಿದ್ದ ಪಿಕಪ್‌ ವ್ಯಾನ್‌ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟರು. ಮೂವರು ಗಾಯಗೊಂಡರು. 

ಚಿತ್ತೋರ್‌ಗಢ ಜಿಲ್ಲೆಯಲ್ಲಿ ಡಂಪರ್‌ ಒಂದು ಬೈಕಿಗೆ ಢಿಕ್ಕಿ ಹೊಡೆದ ಅವಘಡದಲ್ಲಿ ರಾಮ್‌ಲಾಲ್‌ ಜಾಟ್‌ (55) ಮತ್ತು ಕನ್ನು ಸುತಾರ್‌ (15) ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next